ನಾಯಕನಿಲ್ಲದ ದೋಣಿಯಂತಾದ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ

Oplus_16908322
Oplus_16908322
Published on

ಶಿವಾನಂದ ಹಿರೇಮಠ ಗದಗ

ರಾಜ್ಯದಲ್ಲಿ ಸಂಟನೆ ಬಲ ತುಂಬಲು ರಾಜ್ಯಾಧ್ಯಕ್ಷ ಬಿ.ವೈ ವಿಜೇಯೇಂದ್ರ ಇನ್ನೀಲ್ಲದ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿಗಳ ಜತೆ ಸಭೆ ಮೇಲೆ ಸಭೆಗಳನ್ನು ನಡೆಸಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೋರಾಟ ನಡೆಸಲು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಬಾಹುಗಳ ಶಕ್ತಿ ಕುಂದುದ್ದು, ಸಂಟನಾ ವಲಯ ಸಂರ್ಪೂಣ ಕುಸಿದಿದೆ.

ಕಳೆದ ವಿಧಾನಸಭಾ ಚುನಾವಣಾ ಸೋಲಿನ ಬಳಿಕೆ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಟನೆಯು ಕನಿಷ್ಠ ಪಕ್ಷ ಪುಟಿದೇಳುವ ಸಾಹಸಕ್ಕೂ ಕೈಹಾಕದಿರುವುದು ಬಿಜೆಪಿಯ ಎರಡನೇ ಹಂತದ ಕಾರ್ಯಕರ್ತರಲ್ಲಿ, ಬೂತ ಮಟ್ಟದ ಕಾರ್ಯಕರ್ತರಲ್ಲಿ ಹಾಗೂ ಬಿಜೆಪಿ ಪಕ್ಷ ನಿಷ್ಠ ಮತದಾರರಲಿ ಬೇಸರ ಮೂಡಿಸಿದೆ. ಕ್ಷೇತ್ರದ ಕಾಂಗ್ರೆಸ್​ ಪಕ್ಷದ ಅಜಾನುಬಾಹು ಸಚಿವ ಎಚ್​.ಕೆ. ಪಾಟೀಲ ವಿರುದ್ಧ 2018ರ ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆಯಲ್ಲಿ 1700 ಮತಗಳಿಂದ ಬಿಜೆಪಿ ಅಭ್ಯಥಿರ್ ಪರಾಭವಗೊಂಡಿತ್ತು. ಚುನಾವಣೆಯಲ್ಲಿ ಪರಾಭವಗೊಂಡರು ಕ್ಷೇತ್ರದಲ್ಲಿ ಬಿಜೆಪಿ ತನ್ನ ಮತಸಂಖ್ಯಾಬಲವನ್ನು ಹೆಚ್ಚಿಸಿ ಭವಿಷ್ಯದಲ್ಲಿ ಭರವಸೆ ಮುಡಿಸಿತ್ತು. ಅಂದು ಭಾಗಶಃ ಅರಳಿದ್ದ ತಾವರೆ 2023ರ ಚುನಾವಣೆ ಮತ್ತು ಅದರ ನಂತರ ದಿನೇ ದಿನೆ ಬಾಡುತ್ತಿದೆ. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಸಂಟನೆ ಕೊರತೆ ಕಾಣುತ್ತಿದ್ದು, ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆ ಕಾರ್ಯಕರ್ತರು ಪ್ರಾಭಲ್ಯ ಹೊಂದುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಗದಗ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ಅಕ್ಷರ ಸಹ ನಾಯಕನಿಲ್ಲದ ದೋಣಿಯಂತಾಗಿದೆ.

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಂತಾಗಿದೆ. ಬಿಜೆಪಿ ಮುಖಂಡರು ಮತ್ತು ನಗರಸಭೆ ಸದಸ್ಯರಲ್ಲಿ ಗುಂಪು ಸೃಷ್ಟಿ ಆಗಿದ್ದು, ಸಹಯೋಗ, ಸಹಕಾರ, ಒಗ್ಗಟ್ಟಿನಲ್ಲಿ ಏಕತೆ ಕಾಣದಂತಾಗುತ್ತಿದೆ. ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿದ್ದು, ಸಂಟನಾ ಬಲ ತುಂಬಲು ಹೊಸ ರೂಪು ರೇಷೆ, ಸರ್ಕಾರದ ವಿರುದ್ಧ ಹೋರಾಟ ಸೇರಿದಂತೆ ಯಾವುದೇ ಹೊಸ ವಿಷಯಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ವಕಾರು ಸಾಲು ಪ್ರಕರಣದಲ್ಲಿ ಬಾಗಶಃ ಸೋತು ಹೋದ ನಗರದ ಬಿಜೆಪಿ ಸದಸ್ಯರ ನಡವಳಿಕೆಯಿಂದ ಗದಗ ಕ್ಷೇತ್ರದ ಕಾರ್ಯಕರ್ತರಿಗೆ ನಾಯಕತ್ವದ ಕೊರತೆ ಗೋಚರಿಸತೋಡಗಿದೆ. ವಕಾರುಸಾಲು ಅನಗತ್ಯ ಪ್ರಕರಣದಿಂದ ಕ್ಷೇತ್ರದ ಸಂಟನೆಯಲ್ಲಿ ತೋಡಕು ಉಂಟಾಗಿದೆ. ಒಂದೆಡೆ ಬಿಜೆಪಿ ಪರಾಜಿತ ಅಭ್ಯಥಿರ್ ಅನಿಲ ಮೆಣಸಿನಕಾಯಿ ಕ್ಷೇತ್ರದಿಂದ ರಾಜಕೀಯವಾಗಿ ದೂರಾಗಿದ್ದಾರೆ. ಹೀಗಾಗಿ, ಬಿಜೆಪಿ ಪಾಳಯದಲ್ಲಿ ಮಿಂಚಿನ ಹುಳು ಕೂಡ ಮಾಯವಾದಂತೆ ಆಗಿದ್ದು, ಸಂಟನೆ, ಕಾರ್ಯಕರ್ತರಲ್ಲಿ ಮರುತ್ಸಾಹ ತುಂಬಲು ಜಿಲ್ಲಾಧ್ಯಕ್ಷ ಒಳಗೊಂಡಂತೆ ನಾಯಕರು ಶ್ರಮೀಸಬೇಕಿದೆ ಎಂಬ ಕೂಗು ಕಾರ್ಯಕರ್ತರಲ್ಲಿ ಬಲ ತುಂಬುತ್ತಿದೆ.

ಗುಂಪುಗಾರಿಕೆ ಮುನ್ನಲೆಗೆ:

ಕಾಂಗ್ರೆಸ್ಸಿನ ರಾಜಕೀಯ ಅಜಾನುಬಾಹು ಸಚಿವ ಎಚ್​.ಕೆ. ಪಾಟೀಲ ವಿರುದ್ಧ ಬಿಜೆಪಿ ಸಂಟನಾ ಬಲಾಢ್ಯತೆ ಸ್ಥಿರವಾಗುತ್ತಿಲ್ಲ. ಮುಖ್ಯವಾಗಿ ಬಿಜೆಪಿ ನಗರಸಭೆ ಸದಸ್ಯರು, ಕ್ಷೇತ್ರದ ಮುಖಂಡರಲ್ಲಿ ಇರುವ ವೈಮನಸ್ಸು ಮತ್ತು ಗುಂಪುಗಾರಿಕೆ ಎಂದು ಹೇಳಲಾಗುತ್ತಿದೆ. ನಗರಸಭೆ ಮಾಜಿ ಅಧ್ಯಕ್ಷರ ಒಂದು ಗುಂಪಾದರೆ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರದ್ದೇ ಮತ್ತೊಂದು ಗುಂಪು ಪ್ರತ್ಯೇಕವಾಗಿದೆ. ಈ ನಡುವೆ ಅವಕಾಶ ವಂಚಿತ ಸದಸ್ಯರದ್ದು ಮತ್ತೊಂದು ಗುಂಪು ಸೃಷ್ಟಿ ಆಗಿದ್ದು, ಒಳಗೊಳಗೆ ಅನಗತ್ಯ ಮುನಿಸುಗಳು ಏರ್ಪಟ್ಟಿದೆ. ಈ ನಡುವೆ ವಕಾರು ಸಾಲು ಪ್ರಕರಣದಿಂದ ನಗರಸಭೆಯಲ್ಲಿ ಆಡಳಿತಾಧಿಕಾರ ಇರುವುದರಿಂದ ನಗರಸಭೆ ಸದಸ್ಯರಿಗೆ ಆಡಳಿತದ ಬಲ ಇಲ್ಲದಂತಾಗಿ, ಕ್ಷೇತ್ರದ ಜನರ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಕಾಂಗ್ರೆಸ್​ ಜತೆಗಿನ ಒಳ ಒಪ್ಪಂದದ ಸದಸ್ಯರು ಕೂಡ ಬಿಜೆಪಿ ಸಂಟನೆಗೆ ಒತ್ತು ನೀಡದೇ ತಮ್ಮ ವ್ಯವಹಾರದ ಕಡೆ ಗಮನ ಹರಿಸುತ್ತಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಬಿಸು ತುಪ್ಪ ಬಾಯಲ್ಲಿ ಇಟ್ಟುಕೊಂಡತಾಗಿದೆ.

ನಾಯಕನಿಲ್ಲದ ದೋಣಿ:

ನದಿ ದಾಟಿಸುವ ಅಂಭಿಗರ ಚೌಡಯ್ಯನಂತೆ ಬಿಜೆಪಿಗೆ ಈಗ ಚೌಡಯ್ಯನ ಅವಶ್ಯಕತೆ ಇದೆ. ಈ ಮೊದಲು ಬಿಜೆಪಿ ಪರಾಜಿತ ಅಭ್ಯಥಿರ್ ಅನಿಲ ಮೆಣಸಿನಕಾಯಿ ಕ್ಷೇತ್ರದಲ್ಲಿ ಬಿಜೆಪಿ ಸಂಟನೆಗೆ ಬಲ ತುಂಬುತ್ತಿದ್ದರು. ಆದರೆ, ಚುನಾವಣಾ ರಾಜಕಾರಣದಿಂದ ಅನಿಲ ದೂರ ಸರಿದಿದ್ದಾರೆ ಎಂಬ ಮಾತನ್ನು ಸ್ವತಃ ಅನಿಲ ತಿಳಿಸಿದ್ದಾರೆ. ಹೀಗಾಗಿ ಗದಗ ವಿಧಾಸಭಾ ಕ್ಷೇತ್ರವು ಹೊಸ ನಾಯಕನ ಹುಡುಕಾಟದಲ್ಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸಂಟನೆಯ ನಾಯಕನಾದರೂ ಸಹ ಸೂಕ್ಷ$್ಮ ಸ್ವಭಾವದ ರಾಜು ಕುರಡಗಿಗೆ ರಾಜಕೀಯ ನಡೆಗಳು, ಪ್ರತಿರೋಧ ಒಡ್ಡುವ ಅಗತ್ಯ ಪಾಠ ಅವಶ್ಯಕತೆ ಇದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಸಂಟನೆ ಬಲಕ್ಕೆ ಆಥಿರ್ಕ ಮತ್ತು ನೈತಿಕ ಸಂಪನ್ಮೂಲದ ಅವಶ್ಯಕತೆ ಇದೆ. ಬಿಜೆಪಿ ಪಾಳಯದಲ್ಲಿ ಈ ಸಂಪನ್ಮೂಲ ಕ್ರೂಢಿಕರಣ ಸಾಧ್ಯವಾಗುತ್ತಿಲ್ಲ ಎಂಬುದೇ ಕಾರ್ಯಕರ್ತರಲ್ಲಿ ಬೇಸರ.

ಕ್ಷೇತ್ರ ಸಂಚಾರ:

ಒಳ ಮುನಿಸು, ವಿಭಿನ್ನ ವಿಚಾರಗಳ, ವಕಾರುಸಾಲು ಪ್ರಕರಣದಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿ ಪುಟಿದೇಳುವ ಕನವರಿಕೆ ಬಿಜೆಪಿಯಲ್ಲಿ ಮನೆ ಮಾಡಿದೆ. ಆದರೆ, ಕಾಂಗ್ರೆಸ್​ ಪಾಳಯದಲ್ಲಿ ಹಾಗಿಲ್ಲ. ಎಚ್​.ಕೆ. ಪಾಟೀಲ ಅವರ ಮುಂದಿನ ಹುರಿಯಾಳು ಆಗಿ ಪುತ್ರ ಕೃಷ್ಣಗೌಡ ಪಾಟೀಲ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಎಚ್​.ಕೆ. ಪಾಟೀಲ ಮುಖವಾಣಿ ಆಗಿ ವಭವಿಷ್ಯದ ಕಾಂಗ್ರೆಸ್​ ಅಭ್ಯಥಿರ್ ಎಂಬುದನ್ನು ತಮ್ಮ ಚಟುವಟಿಕೆ ಮೂಲಕ ಗೊತ್ತು ಮಾಡಿಕೊಡುತ್ತಿದ್ದಾರೆ. ಸೇವಾ ತಂಡ, ಸಂಧ್ಯಾರಾಗ ಕಾರ್ಯಕ್ರಮಗಳ ಮೂಲಕ ಮನೆ ಮನೆ ತಲುಪಲು ಕಾಂಗ್ರೆಸ್​ ದಿನನಿತ್ಯ ಪ್ರಯತ್ನಿಸುತ್ತಿದೆ. ಈ ಎಲ್ಲ ನಡುವಳಿಗಳಿಗೆ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ವಿರುದ್ಧವಾಗಿ ವತಿರ್ಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ನಿರುತ್ಸಾಹದಿಂದಲೇ ದಿನನಿತ್ಯ ಸೂರ್ಯ ನಮಸ್ಕಾರ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net