ಹಾಲಿನ ಧರ ಏರಿಕೆಗೆ ಜಿಲ್ಲಾ ಬಿಜೆಪಿ ತೀವ್ರ ವಿರೋಧ : ರಾಜು ಕುರುಡಗಿ

Published on

ಗದಗ: ಕರ್ನಾಟಕದ ಕಾಂಗ್ರೇಸ್ ಸರ್ಕಾರ ನಂದಿನಿ ಹಾಲಿನ ಹಾಗು ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಿದ್ದು ಪರಿಷ್ಕೃತ ಧರ ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಕಾಂಗ್ರೇಸ್ ಸರ್ಕಾರ ಧರ ಏರಿಸಿ ಯುಗಾಧಿ ಹಾಗು ರಂಜಾನ್ ಹಬ್ಬದ ಉಡುಗರೆಯಾಗಿ 6ನೇ ಗ್ಯಾರಂಟಿಯನ್ನ ರಾಜ್ಯದ ಜನರಿಗೆ ನೀಡಿದ್ದು ಖಂಡನೀಯ ಎಂದು ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ರಾಜ್ಯ ಕಾಂಗ್ರೇಸ್ ಸರ್ಕಾರದ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.

ಅವರಿAದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಈಗಾಗಲೇ ಬಸ್ ಧರ, ಮೆಟ್ರೋ ಧರ, ಸ್ಟಾö್ಯಂಪ್ ಡ್ಯೂಟಿ, ನೊಂದಣಿ ಶುಲ್ಕ, ಜನನ ಪ್ರಮಾಣ ಪತ್ರ ಏರಿಕೆ, ಪೆಟ್ರೋಲ್, ಡಿಸೈಲ್ ಧರ, ಆಲ್ಕೋಹಾಲ್, ವಿದ್ಯುತ್ ಧರ ಏರಿಕೆ ಮಾಡಿ ಈಗ ಹಾಲಿನ ಧರವನ್ನು ಕೂಡಾ ಪ್ರತಿ ಲೀಟರ್‌ಗೆ 04 ರೂಪಾಯಿ ಹೆಚ್ಚು ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ. ರಾಜ್ಯದಲ್ಲಿ 22 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸ್ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಗತ್ಯ ಸೇವೆಗಳ ಧರ ಹೆಚ್ಚಳದ ದಾರಿ ಹಿಡಿದಿರುವ ರಾಜ್ಯ ಸರ್ಕಾರ ಒಂದೊAದೇ ಬೆಲೆ ಏರಿಸುತ್ತಾ ನಡೆದಿದೆ.

22 ತಿಂಗಳಲ್ಲಿ 3ನೇ ಬಾರಿ ಹಾಲು ಹಾಗು ಮೊಸರಿನ ಧರವನ್ನು ಏರಿಕೆ ಮಾಡಿದೆ. 22 ತಿಂಗಳಲ್ಲಿ ಒಟ್ಟಾರೆಯಾಗಿ 9 ರೂಪಾಯಿಯನ್ನು ಹಾಲು ಹಾಗು ಮೊಸರಿನ ಧರವನ್ನು ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ. ಕಾಂಗ್ರೇಸ್ ಸರ್ಕಾರ ಜನರಿಗೆ ಉಚಿತ ಮುಖವಾಡದ ಹೆಸರಿನಲ್ಲಿ ಬೆಲೆ ಏರಿಕೆಯನ್ನು ಖಚಿತ-ನಿಶ್ಚಿತ ಮಾಡಿದೆ. ರಾಜ್ಯ ಸರ್ಕಾರ 2025 ರ ಯುಗಾಧಿ ಉಡುಗೊರೆ ಎನ್ನುವ ರೀತಿಯಲ್ಲಿ ವಿದ್ಯುತ್ ಧರ, ಹಾಲಿನ ಧರ ಏರಿಕೆ ಮಾಡಿ ಜನರಿಗೆ ಬಾರಿ ಹೊರೆಯನ್ನು ಮಾಡಿದೆ. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದಲು 5 ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಜನರ ಜೇಬಿಗೆ ಕತ್ತರಿ ಹಾಕಿದೆ. ಈ ದುರಾಡಿಳಿತದ ಸರ್ಕಾರ ಇರುವಷ್ಟು ದಿವಸ ಜನರಿಗೆ ನೆಮ್ಮದಿ ಇರುವುದಿಲ್ಲಾ. ಯಾಕಾದರೂ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಿದೆ ಎಂದು ಜನ ದಿನವು ಚೀಮಾರಿ ಹಾಕುತ್ತಿರುವರು. ಹಿಂದೆ ಹಾಲಿನ ಧರವನ್ನು ಏರಿಸಿದಾಗ 50 ಎಂಎಲ್ ಹೆಚ್ಚಿಗೆ ಕೊಡುವುದಾಗಿ ಹೇಳಿ ಅದನ್ನು ಈಗ 50 ಎಂಎಲ್ ಹಾಲನ್ನು ಖಡಿತಗೊಳಿಸಿರುವರು. ಹಿಂದೆ ಕೂಡಾ ರೈತರಿಗೆ ಅನುಕೂಲ ಮಾಡುವುದಕ್ಕೊಸ್ಕರ ಬೆಲೆಯನ್ನು ಏರಿಸಲಾಗಿದೆ ಅಂತ ಸಮಜಾಯಿಶಿ ನೀಡಿದ್ದರು. ಆದರೆ ಏರಿಸಿದ ಹಾಲಿ ಧರ ರೈತರಿಗೆ ಮುಟ್ಟಲಿಲ್ಲಾ.

ಹೆಚ್ಚಿಸಿದ ಹಾಲು ಹಾಗು ಮೊಸರಿನ ಧರವನ್ನು ಹಿಂದಕ್ಕೆ ಪಡೆಯಬೇಕೆಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ಜಿಲ್ಲಾ ವಕ್ತಾರರಾದ ಎಂ.ಎA.ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಬೂದಪ್ಪ ಹಳ್ಳಿ, ಮಾಜಿ ಅಧ್ಯಕ್ಷ ಅನೀಲ ಅಬ್ಬಿಗೇರಿ, ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಮಂಜುನಾಥ ಶಾಂತಗೇರಿ, ಕೆ.ಪಿ.ಕೊಟೀಗೌಡ್ರ, ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net