

ಗದಗ: ಸಾಮಾನ್ಯ ಕಾರ್ಯಕರ್ತನೊಬ್ಬ ಪಾರ್ಟಿ ಅಧ್ಯಕ್ಷ, ಮುಖ್ಯಮಂತ್ರಿ, ಪ್ರಧಾನಿಯು ಆಗಬಹುದಾದ ನಿಜವಾದ ಕಾರ್ಯಕರ್ತರ ಪಕ್ಷ ಅಂದ್ರೆ ಅದು ಬಿಜೆಪಿ ಎಂದು ಶಾಸಕ ಸಿ ಸಿ ಪಾಟೀಲ ಹೇಳಿದರು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತಾನಾಡುತ್ತಿದ್ದರು. ರಾಷ್ಟ್ರಹಿತವನ್ನೇ ತನ್ನ ದ್ಯೇಯವನ್ನಾಗಿಸಿಕೊಂಡಿರುವ ಬಿಜೆಪಿ ಯಾವುದೇ ಜಾತಿ ಮತ ಪಂಥ ಧರ್ಮ ಭೇದ ಭಾವವಿಲ್ಲದೆ ಎಲ್ಲಾ ವರ್ಗದ ಜನರನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಸಂವಿಧಾನದ ಮೂಲ ಆಶಯಗಳನ್ನ ಈಡೇರಿಸುತ್ತಿದೆ ಎಂದರು.
ಪರಶಿಷ್ಟ ಜಾತಿ ಪಂಗಡ ಹಿಂದುಳಿದ,ಅಲ್ಪಸಂಖ್ಯಾತ ಮತ್ತು ಇತರೆ ಸಮುದಾಯದ ಜನರನ್ನ ಗುರುತಿಸಿ ಶಾಸಕ ಸಂಸದ ಮಂತ್ರಿ ಮುಖ್ಯಮಂತ್ರಿ ರಾಜ್ಯ ಸಭಾ ಸದಸ್ಯ ರಾಷ್ಟ್ರ ಪತಿ ಹುದ್ದೆಯವರೆಗೂ ಅವಕಾಶ ಒದಗಿಸುವ ಮೂಲಕ ಪ್ರಜಾಪ್ರಭುತ್ವ ನೀತಿಯನ್ನ ಎತ್ತಿಹಿಡಿಯುವ ಬಿಜೆಪಿ ಜಗತ್ತಿನ ಬಹು ದೊಡ್ಡ ರಾಜಕೀಯ ಪಕ್ಷವಾಗಿದೆ. ಕಾರಣ ಜಿಲ್ಲೆಯ ಜನತೆ 8800002024 ನಂಬರ್ ಗೆ ಮಿಸ್ ಕಾಲ್ ಮಾಡುವ ಮುಖಾಂತರ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಮಾತನಾಡಿ ಭಾರತವನ್ನ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯನ್ನಾಗಿ ರೂಪಿಸುತ್ತಿರುವ ಮೋದಿಯವರ ಜೊತೆ ಇಡೀ ರಾಷ್ಟ್ರದ ಜನತೆ ನಿಲ್ಲಬೇಕಾಗಿದೆ ಮತ್ತು ಕಾರ್ಯಕರ್ತರು ಹೆಚ್ಚು ಹೆಚ್ಚು ಸದಸ್ಯರನ್ನ ಬಿಜೆಪಿ ಜೊತೆ ಜೋಡಿಸುವ ಮೂಲಕ ಅಭಿಯಾನವನ್ನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ರೈತನಿಗೆ ಸದಸ್ಯತ್ವ : ನಗರದ ರಾಚೋಟೇಶ್ವರ ದೇವಾಲಯ ಹತ್ತಿರ ಶಾಸಕ ಸಿಸಿ ಪಾಟೀಲ ಸ್ವತಹ ರೈತರೊಬ್ಬರ ಸದಸ್ಯತ್ವ ಮಾಡುವ ಮೂಲಕ ಮನೆ ಮನೆ ಭೇಟಿ ಅಭಿಯಾನಕ್ಕೂ ಚಾಲನೆ ಕೊಟ್ಟರು.
ಸಮಾರಂಭದಲ್ಲಿ ಅಭಿಯಾನದ ಜಿಲ್ಲಾ ಸಂಚಾಲಕ ಹಾಗು ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ, ಅಧ್ಯಕ್ಷತೆ ವಹಿಸಿದ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಮಾತನಾಡಿದರು.
ಮುಖಂಡರಾದ ಎಮ್ ಎಸ್ ಕರಿಗೌಡ್ರ,ಡಾ ಶೇಖರ ಸಜ್ಜನರ,ಅನಿಲ ಅಬ್ಬಿಗೇರಿ, ಎಮ್ ಎಮ್ ಹಿರೇಮಠ, ವಿನಾಯಕ ಮಾನ್ವಿ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮಿ ಮಾನ್ವಿ, ಹೇಮಗಿರೀಶ್ ಹಾವಿನಾಳ, ರವಿ ಕರಿಗಾರ,ಸೋಮೇಶ್ ಉಪನಾಳ,ನಾಗರಾಜ ಕುಲಕರ್ಣಿ,ಸಿದ್ದು ಪಲ್ಲೇದ, ಜಗನ್ನಾತಸಾ ಬಾಂಡಗೆ, ಬಸವಣ್ಣೆಪ್ಪ ಚಿಂಚಲಿ,ಬಿ ಎಚ್ ಲದ್ವಾ,ರಾಘವೇಂದ್ರ ಯಳವತ್ತಿ, ಚಂದ್ರು ತಡಸದ, ಮಂಜುನಾಥ್ ಮುಳಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್ ಕೆ ಚವಾಣ್,ಪಕ್ಕಿರೇಶ್ ರಟ್ಟೀಹಳ್ಳಿ ಮುಂತಾದವರು ಉಪಸ್ಥಿತರಿದ್ದರು.