

ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಈರ್ಷಾದ ಮಾನ್ವಿ ರವರ ನೇತೃತ್ವದಲ್ಲಿ ಎಪಿಜಿ ಅಬ್ದುಲ್ ಕಲಾಂ ರವರ ೯ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿಗಳು ಎಪಿಜೆ ಅಬ್ದುಲ್ ಕಲಾಂರು ಭಾರತದ ವಿಜ್ಞಾನಿಗಳಲ್ಲಿ ತಮ್ಮ ಶಕ್ತಿ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸಿದ ಮಹಾನ್ ವಿಜ್ಞಾನಿ ಅವರು ಭಾರತೀಯರಿಗೆ ಹೆಮ್ಮೆಯ ಪುತ್ರರು ಹೌದು ಎಂದು ಶ್ಲಾö್ಯಗಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ನಗರ ಮಂಡಲ ಅಧ್ಯಕ್ಷರಾದ ಅನೀಲ ಅಬ್ಬಿಗೇರಿ ಮಾತನಾಡಿ ಡಾ. ಎಪಿಜಿ ಅಬ್ದುಲ್ ಕಲಾಂರ ಬಾಲ್ಯದ ಜೀವನ ಮತ್ತು ಅವರು ನಡೆದು ಬಂದ ಹಾದಿಯ ವಿವರಣೆಯನ್ನು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಹಿರಿಯರಾದ ಎಂ.ಎ.ಹಿರೇಮಠ ಮಾತನಾಡಿ ಎಪಿಜಿ ಅಬ್ದುಲ್ ಕಲಾಂ ರವರು ಜಗತ್ತಿಗೆ ಭಾರತ ದೇಶದ ಪರಮಾಣು ಶಕ್ತಿಯನ್ನು ಪರಿಚಯಿಸಿ ಅಂದಿನ ಪ್ರಧಾನ ಮಂತ್ರಿಗಳಾದ ಅಟಲ್‌ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನದಲ್ಲಿ ಎಪಿಜಿ ಅಬ್ದುಲ್ ಕಲಾಂರು ದೇಶ ಪ್ರೇಮವನ್ನು ಮೇರದಂತ ಮಹಾನ್ ವಿಜ್ಞಾನಿ ಅವರನ್ನು ಸದಾಕಾಲ ಭಾರತೀಯರು ನೆನೆಯಲೇಬೇಕು ಎಂದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸಿರ್ ನರೆಗಲ್, ಹಸನ್ ಕಲೆಗಾರ, ಶಾಮಿದಸಾಬ ನರಗುಂದ, ನಿಸಾರಅಹ್ಮದ ನಮಾಜಿ, ಪಾತಿಮಾ ನಮಾಜಿ, ಆಯುಷಾ ಉಳ್ಳಾಗಡ್ಡಿ, ಕೊನೆವಾಲ, ಸಂತೋಷ ಅಕ್ಕಿ, ಮಂಜುನಾಥ ಶಾಂತಗೇರಿ, ರಮೇಶ ಸಜ್ಜಗಾರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.