

ಗದಗ: ಸಮೀಪದ ಬಿಂಕದಕಟ್ಟಿಯ ಶ್ರೀ ರಾಮಕರುಣಾನಂದ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 21-06-2024ರ ಶುಕ್ರವಾರದಂದು ವಿಶ್ವ ಯೋಗದಿನವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಶ್ರೀ ರಾಘವೇಂದ್ರ ಕೆ.ಆರ್. ರವರು ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಭಾಷಣದಲ್ಲಿ ನಮ್ಮ ಪ್ರತಿನಿತ್ಯ ಜೀವನದಲ್ಲಿ ಯೋಗಾಭ್ಯಾಸದ ಅವಶ್ಯಕತೆ ಮತ್ತು ಉಪಯೋಗದ ಕುರಿತು ತಿಳಿಸಿ ಕೊಟ್ಟರು. ಶಾಲೆಯ ಶಿಕ್ಷಕಿ ಶ್ರೀಮತಿ ಶೈಲಾ ಬೆರಗೇರಿ ಯವರು ವಿಸ್ತಾರವಾಗಿ ಯೋಗದ ಮಹತ್ವ ಕುರಿತು ವಿವರಿಸಿದರು. ಶಾಲೆಯ ಇನ್ನೋರ್ವ ಶಿಕ್ಷಕಿಯಾದಂತಹ ಶ್ರೀಮತಿ ಪ್ರತಿಭಾ ಕಮ್ಮಾರ್ ರವರು ಸರ್ವರಿಗೂ ಯೋಗಾಭ್ಯಾಸ ಮಾಡಿಸಿದರು. ಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿದರು. ಶಾಲೆಯ . ಶಿಕ್ಷಕರಾದಂತಹ ಶ್ರೀ ಚನ್ನಬಸಪ್ಪ ಎಸ್ ವೆಂಕಟಾಪುರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಶೃತಿ ಬೈಹಟ್ಟಿ ಸರ್ವರನ್ನೂ ಸ್ವಾಗತಿಸಿದರು. ಶ್ರೀಮತಿ ಅಕ್ಕಮ್ಮ ಹರಿಜನ್ ರವರು ಸರ್ವರನ್ನೂ ವಂದಿಸಿದರು. ಯೋಗಾಭ್ಯಾಸದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ನರ್ಸರಿ ವಿಭಾಗದ ವಿದ್ಯಾರ್ಥಿಗಳು ಮಾಡಿದ ಯೋಗಾಭ್ಯಾಸ ಬಹಳ ವಿಶೇಷವಾಗಿತ್ತು.