

ರಾಜಕೀಯ, ಶೈಕ್ಷಣಿಕ ಪ್ರಾಶಸ್ತ್ಯ ಬೇಕು: ಶಾಸಕ ಎಂ. ಚಂದ್ರಪ್ಪ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಅಂಬೇಡ್ಕರ ಭವನದಲ್ಲಿ ಭಾನುವಾರ ಭೋವಿ ಸಮುದಾಯದ ವಿದ್ಯಾಥಿರ್ಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊಳಲ್ಕೇರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಭೋವಿ(ವಡ್ಡರ) ಸಮುದಾಯಕ್ಕೆ ರಾಜಕೀಯ ಮತ್ತು ಶೈಕ್ಷಣಿಕ ಪ್ರಾಶಸ್ತ್ಯ ಸಿಗಬೇಕಿದೆ. ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಸಮುದಾಯಗಳು ಮುಂದುವರಿದಿವೆ. ಆದರೆ, ಭೋವಿ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿಂದ ಬೆಳವಣಿಗೆ ಕಾಣುತ್ತಿಲ್ಲ. ಒಳ ಮೀಸಲಾತಿಯಿಂದ ಭೋವಿ ಸಮುದಾಯದ ತುಳಿಯುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಕೋಟಿರ್ನಲ್ಲಿ ದಾವೆ ಇದೆ. ಮೀಸಲಾತಿ ವಿಷಯದಲ್ಲಿ ಜನ ಸಮುದಾಯ ಎಚ್ಚೇತ್ತುಕೊಳ್ಳಬೇಕು ಎಂದರು.
ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಪೀಠಾಧಿಪತಿಗಳಾದ ನಂತರ ರಾಜ್ಯದಲ್ಲಿ ಭೋವಿ ಸಮಾಜ ಸಂಟನೆ ಆಗುತ್ತಿದೆ. ನೋವಿನಲ್ಲಿ ಇರುವ ಸಮಾಜಕ್ಕೆ ಸರ್ಕಾರದ ಅನೇಕ ಯೋಜನೆಗಳು ಲಭಿಸದೇ ಇರುವುದಕ್ಕೆ ವಿಷಾಧವಿದೆ. ಅಂತಹ ಸೌಲಭ್ಯಗಳನ್ನು ಸಮಾಜಕ್ಕೆ ದೊರಕಿಸುವ ಕೆಲಸ ಸಮಾಜದ ಪ್ರಜ್ಞಾವಂತರು ಮಾಡಬೇಕಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಶಿಕ್ಷಣ ಮತ್ತು ಸಂಪ್ರದಾಯಕ್ಕೆ ಜನರು ಒತ್ತು ನಿಡಬೇಕು. ಅವಿಭಕ್ತ ಕುಟುಂಬದಲ್ಲಿ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯುತ್ತಾರೆ. ಶೈಕ್ಷಣಿಕ ಸಾಧನೆಗೆ ಸಂಸ್ಕಾರವು ಬುನಾದಿ ಆಗಿದೆ ಎಂದು ಹೇಳಿದರು.
ಸರ್ಕಾರಿ ನೌಕರ ಸಂದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ಮಾತನಾಡಿ, ಸಾಮಾಜಿಕ, ಆಥಿರ್ಕವಾಗಿ ಸದೃಢವಾಗಲು ಸಮುದಾಯಗಳು ಸಂಘಟನೆಗೊಳ್ಳುವುದು ಅತೀ ಮುಖ್ಯ. ಸಂಟನೆ ಅಂದರೆ ಕೇವಲ ಅಧಿಕಾರ, ಖುಚಿರ್ ಎಂಬುದಲ್ಲ. ಹಗಲಿರುಳು ಸಮುದಾಯದ ಜನರ ಅಭಿವೃದ್ಧಿಗೆ ಶ್ರಮಿಸುವುದಾಗಿದೆ. ಕಡು ಬಡತನ, ಕೂಲಿ ಮಾಡುವ ಭೋವಿ ಸಮುದಾಯದ ಅಭಿವೃದ್ಧಿಗೆ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿರಬೇಕು ಎಂದರು.
ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಬಸವರಾಜ ಬಳ್ಳಾರಿ, ಶಾಸಕ ಚಂದ್ರು ಲಮಾಣಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಲ್. ಗಂಗಾಧರಪ್ಪ, ಬೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್. ರವಿ. ಕುಮಾರ, ವಿಧ್ಯಾದರ ದೊಡ್ಡಮನಿ, ಹನುಮಂತ ಪೂಜಾರ ಇತರರು ಇದ್ದರು.