ಭಗವದ್ಗೀತಾ ಅಭಿಯಾನ ಕಾರ್ಯಕ್ರಮ

10GDG08
Published on

ವಿಜಯವಾಣಿ ಸುದ್ದಿಜಾಲ ಗದಗ

ಆಧುನಿಕ ಆತಂಕಕಾರಿ ಜೀವನ ಶೈಲಿಯಲ್ಲಿ ಮನಸ್ಸಿಗೆ ಶಾಂತಿ ಮತ್ತು ಜ್ಞಾನವನ್ನು ನೀಡುವ ಹಿಂದೂಗಳ ಹೆಮ್ಮೆಯ ಗ್ರಂಥ ಭಗವದ್ಗೀತೆಯನ್ನು ಸರ್ವರೂ ಪಾರಾಯಣ ಮಾಡಬೇಕು ಎಂದು ಸಂಸತ ಅಧ್ಯಾಪಕ ಸಂದ ಅಧ್ಯ ಎಸ್​. ಎಸ್​. ಸಾಲಿಮಠ ಹೇಳಿದರು.

ನಗರದ ನಂದೀಶ್ವರ ಮಠದಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನು ವಿವಿಧ ರೀತಿಯಿಂದ ಅನೇಕ ಮಾನಸಿಕ ವಿಕೃತಿಗಳಿಗೆ ಬಲಿ ಆಗುತ್ತಿದ್ದಾನೆ. ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ. ಈ ಆಧ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆ. ಗೀತೆಯ ಮೂಲಕ ಸಮಾಜದಲ್ಲಿ ಸುಖ, ಶಾಂತಿ ನೆಲೆಸುವಂತೆ ಹಾಗೂ ಪ್ರತಿ ವ್ಯಕ್ತಿಯನ್ನು ಸುಸಂಸತನನ್ನಾಗಿ ರೂಪಿಸುವುದಕ್ಕೆ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಮದ್​ ಗಂಗಾಧರೇಂದ್ರ ಶ್ರೀಗಳು 2007ರಿಂದ ನಾಡಿನಾದ್ಯಂತ ಭಗವದ್ಗೀತಾ ಅಭಿಯಾನ ಪ್ರಾರಂಭಿಸಿದ್ದಾರೆ ಎಂದರು.

ಭಗವದ್ಗೀತಾ ಅಭಿಯಾನ ಸಂಚಾಲಕ ವಿದ್ವಾನ್​ ಗಣಪತಿ ಗಾಂವಕರ ಮಾತನಾಡಿ, ಈ ವರ್ಷ ಭಗವದ್ಗೀತೆಯ 9ನೇ ಅಧ್ಯಾಯದ ಕಂಠಪಾಠ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ, ಗೀತೆಯ ಕುರಿತಾದ ವಿವಿಧ ವಿಷಯಗಳನ್ನು ನೀಡಲಾಗಿದೆ. ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಡಿಸೆಂಬರ್​ ತಿಂಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥಿರ್ಗಳು ಹಾಗೂ ಸದ್ಭಕ್ತರು ಪಾಲ್ಗೊಳ್ಳಬೇಕು ಎಂದರು.

ರಾಜೇಶ್ವರಿ ಶೆಟ್ಟರ, ರೇಣುಕಾ ಅಮಾತಿ, ಮಳಿಶಾಂತಪ್ಪ ಮಾಸಣಗಿ, ಡಾ. ದತ್ತಪ್ರಸನ್ನ ಪಾಟೀಲ, ಅಮರೇಶ ರಾಂಪೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net