ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಲಿ : ಶಿವಕುಮಾರ

2
Published on

ಗದಗ : ಶಿಕ್ಷಣ ನಿಂತ ನೀರಲ್ಲ ಹರಿಯುವಂತಹ ಪ್ರವಾಹವಾಗಿದೆ. ವಿದ್ಯಾರ್ಥಿಗಳು ನೂತನ ಆವಿಷ್ಕಾರಗಳನ್ನು ತಮ್ಮ ಶೈಕ್ಷಣಿಕ ಅಧ್ಯಯನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೈಜ್ಞಾನಿಕ ಮನೋಭಾವನೆ ಚಿಂತನೆಗಳನ್ನು ಬೆಳಸಿಕೊಳ್ಳಬೇಕೆಂದು ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಹೇಳಿದರು.
ಅವರು ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಗದಗ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪುರಸ್ಕಾರ ನೀಡಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಕ್ರಮವಾಗಿ ಪ್ರಶಸ್ತಿ ಪತ್ರ, ಕಾಲೇಜ್ ಬ್ಯಾಗ್, ೧,೫೦೦ ರೂ, ೧,೦೦೦, ರೂ. ೫೦೦ ರೂ, ಹಾಗೂ ಈರ್ವರಿಗೆ ತಲಾ ೫೦೦ ರೂ.ಗಳನ್ನು ಪ್ರೋತ್ಸಾಹಕರ ಬಹುಮಾನವಾಗಿ ನೀಡುವ ಕಾರ್ಯಕ್ರಮವನ್ನು ಕಳೆದ ವಾರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸರಣಿಯನ್ನು ಸಮಾರೋಪಗೊಳಿಸಿದ್ದು ಸಹಕರಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಶಾಲಾ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಳೆದ ೧೦ ವರ್ಷಗಳಿಂದ ಪ್ರತಿಷ್ಠಾನವು ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದ್ದು ಇಚ್ಚಿಸದ ದಾನಿಯೊಬ್ಬರು ಈ ಕಾರ್ಯಕ್ಕೆ ಕೈ ಜೋಡಿಸಿದ್ದರಿಂದ ಪ್ರತಿಷ್ಠಾನಕ್ಕೆ ಬಲ ಬಂದಿದೆ. ೩೦ ಶಾಲೆಗಳಲ್ಲಿ ತಲಾ ಐವರು ಪ್ರತಿಭಾನ್ವಿತರನ್ನು ಸನ್ಮಾನಿಸಿದ್ದು ಪ್ರತಿಭಾ ಪುರಸ್ಕಾರಕ್ಕಾಗಿ ಒಟ್ಟು ೧ ಲಕ್ಷ ೨೦ ಸಾವಿರಕ್ಕೂ ಹೆಚ್ಚು ನಗದು, ಸುಮಾರು ೬೦ ಸಾವಿರ ರೂ. ಮೌಲ್ಯದ ಬ್ಯಾಗ ಪ್ರಮಾಣ ಪತ್ರ ಹಾಗೂ ಅರ್ಧ ಕ್ವಿಂಟಲ್‌ಗಿAತಲೂ ಹೆಚ್ಚು ಪ್ರಮಾಣದ ಧಾರವಾಡ ಪೇಡಾವನ್ನು ಈ ಕಾರ್ಯಕ್ಕೆ ಬಳಕೆ ಮಾಡಲಾಗಿದೆ ಎಂದರು.
ಪ್ರತಿಷ್ಠಾನದ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ ಮಾತನಾಡಿ ಶಿಕ್ಷಣ ಕಲಿತ ವ್ಯಕ್ತಿ ಎಲ್ಲರಿಂದಲೂ ಎಲ್ಲ ಕಡೆಯೂ ಗೌರವಿಸಲ್ಪಡುತ್ತಾನೆ ಅದಕ್ಕಾಗಿ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ಓದಿನತ್ತ ಗಮನವಿಡಬೇಕು. ಹೆಚ್ಚು ಅಂಕಗಳನ್ನು ಪಡೆಯುವದರಿಂದ ಸಮಾಜದಲ್ಲಿ ಗುರುತಿಸಿಕೊಳ್ಳುತ್ತೀರಿ ಓದು ನಿಮ್ಮನ್ನು ಉನ್ನತ್ತಕ್ಕೇರಿಸುತ್ತದೆ ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ಶಿವಪ್ಪ ಕತ್ತಿ ಮಾತನಾಡಿ ಶಿಕ್ಷಣ ತಜ್ಞ ಅಣ್ಣಿಗೇರಿ ಗುರುಗಳು ಮಕ್ಕಳ ಶಿಕ್ಷಣಕ್ಕೆ ನೀಡಿದ ಆದ್ಯತೆ ಅಪಾರ ಅವರ ಪರಿಶ್ರಮದ ಫಲವೇ ಇಂದು ಪ್ರತಿಭಾನ್ವಿತರಿಗೆ ಸನ್ಮಾನ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ವಿನಾಯಕ ಬಂಡಾ ಮಾತನಾಡಿ ಗದಗ ತಾಲೂಕಿನ ಎಲ್ಲ ಸರಕಾರಿ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಸಿಹಿ ವಿತರಿಸಿ ಪ್ರಶಸ್ತಿ ಪತ್ರ ನೀಡುವುದರೊಂದಿಗೆ ಸನ್ಮಾನಿಸಿ ಗೌರವಿಸಲಾಗಿದ್ದು ಇದು ಪ್ರತಿಭೆಗೆ ಸಂದ ಗೌರವವಾಗಿದೆ ಎಂದರು.
ಕೋಟುಮಚಗಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಲಲಿತಾ ಸಂಕನಗೌಡ್ರ, ಜೀವನಸಾಬ ವಡ್ಡಟ್ಟಿ, ಶಿಲ್ಪಾ ಸಿಂಗಟಾಲಕೇರಿ, ಅನಿತಾ ವಾಲ್ಮೀಕಿ, ತೇಜಸ್ವಿನಿ ತಳವಾರ ಪುರಸ್ಕಾರ ನೀಡಿ ಗೌರವಿಸಲಾಯಿತು.
ನೀರಲಗಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ನೀಲಮ್ಮ ಇಬ್ರಾಹಿಂಪೂರ, ಪ್ರಥ್ವಿರಾಜ ಹುರಕಡ್ಲಿ, ನಿರ್ಮಲಾ ಪಾಟೀಲ, ಅನೀಲ ಬಾವಿ, ಭಾಗ್ಯಲಕ್ಷಿ ಬಡಿಗೇರ ಹಾಗೂ ಕಣಗಿನಹಾಳದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರೋಪಾ ಮಲಕಶೆಟ್ಟಿ, ಧರ್ಮರಾಜ ಭಜಪ್ಪನವರ, ಸಂಗೀತಾ ಜೀರ್ಲಿ, ಐಶ್ವರ್ಯ ಆವಾರಿ, ಯಶೋಧಾ ಪಾಟೀಲ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಣಗಿನಹಾಳ ಗ್ರಾಮದ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅಭಿಲಾಷಗೌಡ ಕರಕನಗೌಡ್ರ, ರಾಹುಲ್ ಲಮಾಣಿ, ಅನ್ನಪೂರ್ಣ ಮೊರಬದ, ಪ್ರಜ್ವಲ ದಿವಾಣದ, ಗಗನ ನಾಯಕ ಹಾಗೂ ಹಾತಲಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕರಿಯಪ್ಪ ಕುರುಬರ, ರೇಣುಕಾ ಗದಗ, ಗೀತಾ ಜೋಗಿನ, ಸತ್ಯಮ್ಮ ಮುರ್ಲಾಪೂರ, ಚಂದನಾ ಪಾಟೀಲ ಅವರುಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಪೂಜ್ಯ ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಕೃಪಾಶೀರ್ವಾದಿಂದ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಕಾರ್ಯದರ್ಶಿ ಶಿವಪ್ಪ ಕತ್ತಿ, ಖಜಾಂಚಿ ಸಿದ್ಧಲಿಂಗನಗೌಡ ಪಾಟೀಲ, ನಿರ್ದೆಶಕರಾದ ಶಿವಾನಂದ ದಂಡಿನ, ವಿರುಪಾಕ್ಷಪ್ಪ ಮ್ಯಾಗೇರಿ, ಚನ್ನಪ್ಪ ಮಲ್ಲಾಡದ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಕ್ಷಪ್ಪ ಶಾಂತಗೇರಿ, ಕಳಕಪ್ಪ ಕುರ್ತಕೋಟಿ ಇವರೆಲ್ಲರ ಸಹಕಾರದೊಂದಿಗೆ ಈ ಕಾರ್ಯವನ್ನು ಸಾಕಾರಗೊಳಿಸಲಾಯಿತು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net