ಬೆಟಗೇರಿ ಬಡಾವಣೆ ಪಿ.ಎಸ್.ಐ. ಅವರಿಗೆ ಸನ್ಮಾನ

jogadanekar
Published on

ಗದಗ: ನಗರದ ಖಾನತೋಟ ಯುವಕ ಮಂಡಳ,ಗಣೇಶೋತ್ಸವ ಸಮಿತಿಯ ಹಿಂದೂ ಮಹಾ ಗಣಪತಿಯ ವತಿಯಿಂದ 50 ನೇ ವರ್ಷದ 21 ದಿನ ಪ್ರತಿಷ್ಠಾಪಿಸಿದ ಗಣೇಶೋತ್ಸವವನ್ನು ಶಾಂತಿಯುತವಾಗಿ ವಿಜೃಂಭಣೆಯಿAದ ಆಚರಣೆ ಮಾಡಲು ಸಹಕಾರ ನೀಡಿದ ಬೆಟಗೇರಿ ಬಡಾವಣೆ ಪಿಎಸ್‌ಐ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಪುರಸ್ಕೃತ, ಮಾರುತಿ ಜೋಗದಂಡಕರ ಅವರಿಗೆ ಸಂಘದ ವತಿಯಿಂದ ಬೆಟಗೇರಿ ಬಡಾವಣೆ ಪೊಲೀಸ ಠಾಣೆಯ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹೇಶ ಭರಡಿ, ಗಂಗಾಧರ ಹಬೀಬ, ಅರುಣ ಭಾವಿ, ಸೋಮಲಿಂಗ ಅಲೂರ,ಚಂದ್ರು ನೆರೇಗಲ್ಲ, ಕುಮಾರ ಬನ್ನಿದಿನ್ನಿ,ಬಸವರಾಜ ಮುಂಡರಗಿ,ರಮೇಶ ದುಂಡಶಿ, ಬಲರಾಜ ಕೊಟೆಕಲ್ಲ್, ಹನಮಂತಸಾ ಕಲಬುರ್ಗಿ, ರವಿ ಮುಕ್ಕಣವರ, ಸೇರಿದಂತೆ ಸಂಘದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net