ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬ ಭಾರತೀಯನೂ ಅರಿಯಬೇಕು : ವಿಜಯಕುಮಾರ ಗಡ್ಡಿ

WhatsApp Image 2024-08-16 at 9.41.02 AM (2)
Published on

ಗದಗ : ಭಾರತ ಪರಕೀಯರ ಆಳ್ವಿಕೆಯಿಂದ ಮುಕ್ತಿ ಹೊಂದಿದ ಇತಿಹಾಸ ರೋಚಕವಾಗಿದ್ದು, ಸಾವಿರಾರು ದೇಶಪ್ರೇಮಿಗಳ ತ್ಯಾಗ-ಬಲಿದಾನಗಳಿಂದಾಗಿ ದೊರೆತ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬ ಭಾರತೀಯನೂ ಅರಿಯಬೇಕಿದೆ ಎಂದು ಬಿಜೆಪಿ ಹಿರಿಯ ಮುಖಂಡರು ಹಾಗೂ ರಾಷ್ಟ್ರೀಯ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾದ ವಿಜಯಕುಮಾರ ಗಡ್ಡಿ ನುಡಿದರು.
ಅವರು ನಗರದ 33ನೇ ವಾರ್ಡ್ ಬಿಜೆಪಿ ಕಛೇರಿಯಲ್ಲಿ ರಾಷ್ಟ್ರೀಯ ಪಂಚಮಸಾಲಿ ಟ್ರಸ್ಟ್ ವತಿಯಿಂದ ಜರುಗಿದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ,
ಭಾರತ ಇಂದು ಜಗತ್ತಿನಲ್ಲೇ ಪ್ರಬಲ ರಾಷ್ಟ್ರಗಳ ಪೈಕಿ ಅಗ್ರಗಣ್ಯನಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾನೊಬ್ಬ ಭಾರತೀಯ ಎಂದು ವಿದೇಶಗಳಲ್ಲೂ ಎದೆ ತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುವಂಥ ಕಾಲ ಬಂದಿದೆ. ಆದರೆ ಭಾರತದಲ್ಲೇ ಇರುವ ಕೆಲವರಿಗೆ ನಮ್ಮ ದೇಶದ ಮೇಲೆ ಅಭಿಮಾನ ಇರದೇ ಇರುವುದು ವಿಪರ್ಯಾಸವಾಗಿದ್ದು, ಭಾರತವನ್ನು ಛಿದ್ರಗೊಳಿಸಲು ಇಂದಿಗೂ ಕೆಲ ದುಷ್ಟಶಕ್ತಿಗಳು ಸಂಚು ರೂಪಿಸುತ್ತಿವೆ. ಆದಾಗ್ಯೂ ಅಪ್ರತಿಮ ದೇಶಭಕ್ತ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಇರುವ ತನಕ ಭಾರತದ ರಕ್ಷಣೆ-ಭದ್ರತೆ ಕುರಿತು ಯಾವ ಭಾರತೀಯನೂ ಚಿಂತಿಸಬೇಕಿಲ್ಲ. ಎಂದ ಅವರು ಇಂದಿನ ಯುವ ಜನಾಂಗ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿಳಿದುಕೊಂಡು ಭವಿಷ್ಯದಲ್ಲಿ ದೇಶದ ಹಿತಕ್ಕಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಂ.ಎಸ್ ಕರಿಗೌಡ್ರ, ಕೆ.ಕೆ ಮಾಳಗೌಡರ, ವಿರೂಪಾಕ್ಷ ನಸಲಿ, ಬೈಲಪ್ಪ ಕುರ್ತಕೋಟಿ, ಶಂಕ್ರಯ್ಯ ಕುದಳಪ್ಪನವರ, ಅಮೃತ ಶಾನುಭೋಗರ, ವಿಶ್ವನಾಥ ಟೆಂಗಿನಕಾಯಿ, ಚವಡಿ ಸೇರಿದಂತೆ 33ನೇ ವಾರ್ಡ್ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net