

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಖಾಸಗಿ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲಾ ಮುಖ್ಯ ಶಿಕರುಗಳಿಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್. ಎಸ್. ಬುರಡಿ, ಮಕ್ಕಳ ಹಕ್ಕುಗಳ ಕಾಯಿದೆ 2009 ರನ್ವಯ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಬೇಕು. ದಾಖಲಾದ ಮಕ್ಕಳು ಪ್ರತಿ ದಿನ ಶಾಲೆಗೆ ಹಾಜರಾಗಿ ಆಯಾ ವರ್ಗ ವಿಷಯಕ್ಕೆ ನಿಗದಿಪಡಿಸಿದ ಸಾಮರ್ಥ್ಯಗಳನ್ನು ಮಕ್ಕಳು ಕಲಿಯುವಂತೆ ಶಿಕರು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಚಟುವಟಿಕೆ ಆಧಾರಿತ ಪರಿಣಾಮಕಾರಿ ಕಲಿಕಾ ಭೋದನೆ ಪ್ರಕ್ರಿಯೆಯಲ್ಲಿ ತೊಡಗಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲಾ ವ್ಯಾಪ್ತಿಗೆ ತರಲು ವಿಶೇಷ ದಾಖಲಾತಿ ಆಂದೋಲನ ಪ್ರಾರಂಭಿಸಲಾಗಿದೆ. ಜು.31 ರವರೆಗೂ ಈ ಆಂದೋಲನ ನಡೆಯಲಿದೆ. ದಾಖಲಾತಿ ಆಂದೋಲನವನ್ನು ಜನವಸತಿ, ಶಾಲೆ, ಕ್ಲಸ್ಟರ್, ಬ್ಲಾಕ್, ಜಿಲ್ಲೆ ಹಂತದಲ್ಲಿ ಆಯೋಜಿಸಬೇಕು. ಈ ಪ್ರಕ್ರಿಯೆಯಲ್ಲಿ ಶಿಕರು, ಎಸ್ಡಿಎಂಸಿ ಹಾಗೂ ಸ್ಥಳಿಯರು ಎಲ್ಲ ಮನೆಗಳಿಗೆ ಶಾಲಾ ಅವಧಿಗೂ ಮುನ್ನ ಹಾಗೂ ನಂತರ ಭೇಟಿ ನೀಡಿ, ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರದ ಆಶಯ ಹಾಗೂ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಶಾಲಾ ಕೊಠಡಿ, ಮೈದಾನ, ಶೌಚಾಲಯಕ್ಕೆ ಸಂಬಂಧಿಸಿದಂತೆ ಸರಿಯಾದ ಸ್ವಚ್ಛತೆ ಕೈಗೊಂಡು ಶಾಲಾ ವಾತಾವರಣ ಸುರತವಾಗಿ ಇಡಬೇಕು. ಮಕ್ಕಳನ್ನು ಆಕಷಿರ್ಸುವ ಹಾಗೆ ಕಲಿಕಾ ವಾತಾವರಣಕ್ಕೆ ಸಿದ್ಧಗೊಳಿಸಿ, ಮಕ್ಕಳನ್ನು ಕೈಬಿಸಿ ಶಾಲೆಯತ್ತ ಸೆಳೆಯುವ ಹಾಗೂ ಕಲಿಕಾ ವಾತಾವರಣ ನಿಮಿರ್ಸಿ, ಶಾಲಾ ಪ್ರಾರಂಭೋತ್ಸವವ ನಡೆಸಬೇಕು ಎಂದು ತಿಳಿಸಿದರು.
ರಾಜ್ಯ ಪ್ರೌಢಶಾಲಾ ಸಹ ಶಿಕರ ಸಂದ ಜಿಲ್ಲಾ ಅಧ್ಯ ಬಿ. ಎ್. ಪೂಜಾರ ಮಾತನಾಡಿ, ಇಲಾಖೆಯ ಅನೇಕ ಒತ್ತಡಗಳಲ್ಲೂ ನಮ್ಮೆಲ್ಲ ಶಿಕರ ಪ್ರಯತ್ನದಿಂದ ಗುಣಾತ್ಮಕ ಲಿತಾಂಶ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಇಲಾಖಾ ಅಧಿಕಾರಿಗಳ ಮಾರ್ಗದರ್ಶನ, ಸತತ ಭೇಟಿಯಿಂದ ಒಳ್ಳೆಯ ಕಲಿಕಾ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ವಲಯದ ೇತ್ರ ಶಿಣಾಧಿಕಾರಿ ವಿ. ವಿ. ನಡುವಿನಮನಿ ಮಾತನಾಡಿ, ಮಕ್ಕಳಿಗಾಗಿ ವಿಶೇಷ ಶಿಬಿರಗಳನ್ನು ಏರ್ಪಡಿಸುವುದರಿಂದ ಹಾಗೂ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಕ್ಲಿಷ್ಟಕರ ಅಂಶಗಳನ್ನು ಸರಳಿ ಕರಣಗೊಳಿಸಿದ್ದರ ಪರಿಣಾಮ ಗುಣಾತ್ಮಕ ಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು,
ಎಚ್. ಬಿ. ರೆಡ್ಡರ, ಎಂ. ಎಚ್. ಕಂಬಳಿ, ಎಂ. ಕೆ. ಲಮಾಣಿ, ಆರ್. ವಿ. ಶಟ್ಟೇಪ್ಪನವರ, ಶರಣಪ್ಪ ನಾಗರಳ್ಳಿ, ಎ. ಎಸ್. ಪಾಟೀಲ, ಲಲಿತ ವಾಣಿಕ್ಯಾಳ, ಸರೋಜಿನಿ ಬಂಡಿವಡ್ಡರ, ಶ್ರೀಧರ ಬಡಿಗೇರ, ಚಂದ್ರಕಾಂತ ಕಬಾಡಿ ಇತರರು ಇದ್ದರು.