ಸಧೃಡ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ: ಬೇಲೇರಿ

3
Published on

ಗದಗ: ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುತ್ತವೆ. ಸಧೃಡ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.

ಅವರು ಶುಕ್ರವಾರ ಗದಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದಿಂದ ಗದುಗಿನ ಸರ್ಕಾರಿ ಮರಾಠಿ ಶಾಲಾ ಆವರಣದಲ್ಲಿ ಜರುಗಿದ ಗದಗ ಶಹರ ವಿಕಲಚೇತನ ಮಕ್ಕಳ ಕ್ರೀಡಾ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶೇಷ ಚೇತನ ಮಕ್ಕಳು ಸಾಮಾನ್ಯ ಮಕ್ಕಳಾಗಬೇಕು. ಇದಕ್ಕಾಗಿ ಅನುಕಂಪ ಬೇಡ. ಅವಕಾಶಗಳನ್ನು ಒದಗಿಸಬೇಕು. ಅವರಲ್ಲಿರುವ ವಿಶೇಷತೆಗಳಿಗೆ ಸ್ಪೂರ್ತಿ ನೀಡಿ ಅವರನ್ನು ಮೂಖ್ಯವಾಹಿನಿಗೆ ತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಶಶಿಧರ ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಶೇಷ ಚೇತನರು ಸಾಧನೆ ಗೈಯಬಲ್ಲರು. ಮುಖ್ಯವಾಗಿ ಅವರಿಗೆ ಸ್ಪೂರ್ತಿ ಬೇಕು. ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ನಡೆಯಬೇಕೆಂದರು.

ಪಾಲಕರಾದ ನರಸಿಂಗ್ ರಂಗ್ರೇಜ್, ಸೈಮನ್ ರೂಡ್ರಿಗಸ್, ವೀಣಾ ದೇವರಕೊಂಡಿ ಮುಂತಾದವರು ವಿಶೇಷಚೇತನರ ಶೈಕ್ಷಣಿಕ ಪ್ರಗತಿ ಕುರಿತು ಮಾತನಾಡಿದರು. ಎಸ್.ಆರ್.ಪಿ ಶಿಕ್ಷಕರಾದ ಸುನೀತಾ ತಿಮ್ಮನಗೌಡ್ರ ಸ್ವಾಗತಿಸಿ ನಿರೂಪಿಸಿದರು. ಶ್ರೀಮತಿ ಗಾಣಿಗೇರ ವಂದಿಸಿದರು.

ಕಾರ್ಯಕ್ರಮದಲ್ಲಿ ಶಬಾನಾ ನದಾಫ್, ಸಮಗಪ್ಪ ಅಂಗಡಿ, ಆಶಾ ಭಜಂತ್ರಿ, ಗೀತಾ ಸಿದ್ದನಗೌಡ್ರ, ರೇಖಾ ಭಜಂತ್ರಿ, ರಾದಾ ಕರಾಬದಿನ್ನಿ, ಕವಿತಾ ರೇಖಾ ಉಪ್ಪಳರ, ನಿರಂಜನ ಉಮನಾಬಾದಿ, ರೇಖಾ ಕಿರಟಗೇರಿ, ಶೃತಿ ಶ್ಯಾವಿ, ಸತೀಶ ಗಡಾದ, ಶಬಾನಾ ಕಲೀಫನವರ, ನಸರೀನ ಕರಡಿ, ಮಂಜುನಾಥ ಪಾವನ, ಮಾಲನ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net