ಗದಗ ಶಹರ ಸಂಪನ್ಮೂಲ ಕೇಂದ್ರದಲ್ಲಿ ಬಸವ ಜಯಂತಿ

10GDG03
ಶಹರ ಬಿಇಓ ಕಚೇರಿಯಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆರ್​. ಎಸ್​. ಬುರಡಿ, ಪ್ರಕಾಶ ಮಂಗಳೂರ, ಶ್ಯಾಮ ಲಾಂಡೆ ಹಾಗೂ ಐ.ಬಿ. ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ವಿ.ಟಿ ದಾಸರಿ, ಸುಮಾ ಹಚಡದ, ಇ. ಡಿ. ಹುಗ್ಗೆಣ್ಣವರ, ಆರ್​. ಡಿ. ಬೆಣಗಿ ಇದ್ದರು.
Published on

ಬಸವಣ್ಣನವರು ಕ್ರಾಂತಿಕಾರಿ ವಿಭೂತಿ ಪುರುಷ: ಬುರಡಿ

ವಿಜಯವಾಣಿ ಸುದ್ದಿಜಾಲ ಗದಗ
ಹನ್ನರೆಡನೇ ಶತಮಾನದ ಮಹಾ ಕ್ರಾಂತಿಕಾರಿ ವಿಭೂತಿ ಪುರುಷ ಬಸವಣ್ಣನವರು ಸಾಮಾಜಿಕ ಚಿಂತನೆಗೆ ಒಂದು ಹೊಸ ದೃಷ್ಠಿಕೋನ ಬಿತ್ತಿದರು ಎಂದು ಗದಗ ಶಹರ ೇತ್ರ ಶಿಣಾಧಿಕಾರಿ ಆರ್​. ಎಸ್​. ಬುರಡಿ ಹೇಳಿದರು.
ಶುಕ್ರವಾರ ಗದಗ ಶಹರ ೇತ್ರ ಶಿಣಾಧಿಕಾರಿಗಳ ಕಾರ್ಯಾಲಯದ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ತಮ್ಮ ವಚನಗಳಲ್ಲಿ ಕಾಯಕವನ್ನು ಬಿಂಬಿಸಿದ್ದಾರೆ. ಕಾಯಕವೇ ಕೈಲಾಸವೆಂಬ ನುಡಿಯನ್ನು ಆಚರಣೆಗೆ ತರುವ ಮೂಲಕ ನಾವು ಬಸವಣ್ಣನವರಿಗೆ ಗೌರವ ಸಲ್ಲಿಸಬೇಕು. ವಚನಗಳ ಮೂಲಕ ಚಿಂತನೆಗೆ ದಾರಿ ಮಾಡಿಕೊಟ್ಟ ಶ್ರೇಷ್ಠ ಚಿಂತಕ ಬಸವಣ್ಣನವರು ಎಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ ಆಚಾರವೇ ಸ್ವರ್ಗ. ಅನಾಚಾರವೇ ನರಕ ಎಂಬ ಬಸವಣ್ಣನವರ ನುಡಿಯಲ್ಲಿ ನಡೆ ನುಡಿ, ಆಚಾರ ವಿಚಾರಗಳಲ್ಲಿ ಶುದ್ಧತೆ ಇರಬೇಕು ಎಂದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್​.ಬೇಲೇರಿ ಮಾತನಾಡಿ ಶರಣರ ಬದುಕು ಬರಹ ಅಮೂಲ್ಯವಾದದ್ದು. ನುಡಿದಂತೆ ನಡೆದ ಮಹಾಪುರುಷರು. ಇವರ ಆದರ್ಶಯುತವಾದ ಬದುಕು ಸದಾ ನಮಗೆ ದಾರಿದೀಪ ಎಂದರು. ಕಾರ್ಯಕ್ರಮದಲ್ಲಿ ಆರ್​. ಎಸ್​. ಬುರಡಿ, ಪ್ರಕಾಶ ಮಂಗಳೂರ, ಶ್ಯಾಮ ಲಾಂಡೆ ಹಾಗೂ ಐ.ಬಿ. ಮಡಿವಾಳರ ಅವರನ್ನು ಸನ್ಮಾನಿಸಲಾಯಿತು.
ದೀಪಾ ಬೇವಿನಮರದ, ತನು ಹೂಗಾರ, ರವಿ ಹೆಬ್ಬಳ್ಳಿ, ವಿ.ಟಿ ದಾಸರಿ, ಸುಮಾ ಹಚಡದ, ಇ. ಡಿ. ಹುಗ್ಗೆಣ್ಣವರ, ಆರ್​. ಡಿ. ಬೆಣಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net