

ಬೆಟಗೇರಿ: 12 ರಂದು ಬುಧವಾರ ಶ್ರೀ ಶರಣಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ವೀರಶೈವ ಧರ್ಮ ಸಂಸ್ಥಾಪಕರು ಮಹಾನ್ ಶರಣರು ಆದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾಧ ಎಸ್.ಜಿ. ಕಾತರಕಿ ಅವರು ವಹಿಸಿಕೊಂಡು ರೇಣುಕಾಚಾರ್ಯರ ಬಾಲ್ಯ ಜೀವನದ ಆದರ್ಶಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಂ.ಎಸ್. ಮಲ್ಲಾಪೂರ ಅವರು ಮಾತನಾಡಿ ರೇಣುಕಾಚಾರ್ಯರ ಜೀವನ ಹಾಗೂ ಅವರ ತತ್ವಗಳನ್ನು ಮಕ್ಕಳಿಗೆ ತಿಳಿಸಿದರು. ಹಾಗೂ ಬೆಟಗೇರಿ ಭಾಗದಲ್ಲಿ ರೇಣುಕಾಚಾರ್ಯರರ ಮಠವು ಸ್ಥಾಪನೆಗೊಳ್ಳಲು ಶ್ರಮಿಸಿದ ದಿ. ಜಂಬಣ್ಣ ಕಾತರಕಿಯವರನ್ನು ಹಾಗೂ ಬೇಲೇರಿ ಕುಟುಂಬದ ಉಪಕಾರವನ್ನು ಸ್ಮರಿಸಿದರು. ಶಾಲಾ ಆಡಳಿತಾಧಿಕಾರಿಗಳಾದ ವೈ. ಆರ್. ಪಾಟೀಲ ಗುರುಗಳು ರೇಣುಕಾಚಾರ್ಯರ ಧಾರ್ಮಿಕ ಸಾಧನೆ ಹಾಗೂ ಸಾಮಾಜಿಕ ಸುಧಾರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಆರ್.ಎಸ್. ಅರ್ಕಸಾಲಿಯವರು ಎಲ್ಲರಿಗೂ ಶ್ರೀ ರೇಣುಕಾಚಾರ್ಯರ ಜಯಂತಿಯ ಶುಭಾಷಯವನ್ನು ತಿಳಿಸಿದರು. ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಎಸ್.ಎಸ್. ಮಾನೇದ ಗುರುಮಾತೆಯರು ಎಲ್ಲರನ್ನು ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆಯರಾಧ ಶ್ರೀಮತಿ ಎಸ್. ಪಿ. ಕುಲಕರ್ಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೌಢಶಾಲೆಯ ಗುರುಗಳಾದ ವಿ. ಎನ್. ಹೂಗಾರ ಅವರು ವಂದಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.