

ವಿಜಯವಾಣಿ ಸುದ್ದಿಜಾಲ ಗದಗ
ಶಾಸನಗಳು ಕೇವಲ ಇತಿಹಾಸದ ವಿವರಗಳಲ್ಲ. ಅವುಗಳು ನಮ್ಮ ಭವ್ಯ ಪರಂಪರೆಯ ಕುರುಹುಗಳಾಗಿವೆ. ಸದ್ಯ ನಮ್ಮನ್ನು ಕಾಡುತ್ತಿರುವ ಸಮಕಾಲೀನ ತಲ್ಲಣಗಳಿಗೆ ಶಾಸನಗಳ ಅಧ್ಯಯನ ಅಥವಾ ವಿಮರ್ಶೆ ಪರಿಹಾರ ನೀಡಬಲ್ಲದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪರಮಶಿವಮೂತಿರ್ ಹೇಳಿದರು.
ನಗರದ ಬಸವೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯದಲ್ಲಿ ಜ. 31ರ ವರೆಗೆ ಜರುಗುವ ಕನ್ನಡ ಶಾಸನಗಳ ಅಧ್ಯಯನ ಮತ್ತು ಸಂಶೋಧನೆ ಎಂಬ ಕಾರ್ಯಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ನಮ್ಮ ಪೂರ್ವಜರು ಕನಿಷ್ಠ ಸವಲತ್ತುಗಳ ಮಧ್ಯೆಯೂ ಮೌಲ್ಯಯುತ ಜೀವನ ಸಾಗಿಸುತ್ತಿದ್ದರು ಹಾಗೂ ಮನಶಾಂತಿಯೇ ಶ್ರೇಷ್ಠ ಸಂಪತ್ತು ಎಂಬ ಪ್ರಜ್ಞೆ ಅವರಿಗೆ ಇತ್ತು ಎನ್ನುವ ವಿವರಗಳನ್ನು ಶಾಸನಗಳಂಥ ಪುರಾತತ್ವ ಆಕರಗಳು ತಿಳಿಸುತ್ತವೆ. ನಗರೀಕರಣವು ಉತ್ತುಂಗ ತಲುಪಿರುವ ಇಂದಿನ ದಿನಗಳಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಬದುಕು ಮೌಲ್ಯರಹಿತವಾಗುತ್ತಿದೆ. ಶಾಸನಗಳು ಸ್ಥಳಿಯ ಇತಿಹಾಸವನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವುದರಿಂದ ವರ್ತಮಾನದ ಪುನರಾವಲೋಕನಕ್ಕೆ ಅವುಗಳ ಅಧ್ಯಯನ ದಿವ್ಯ ಔಷಧವಾಗಿದೆ. ಗದಗ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಾವಿರ ವರ್ಷಕ್ಕೂ ಹೆಚ್ಚು ಪುರಾತನವಾದ ಅನೇಕ ಶಾಸನಗಳಿದ್ದು, ಅವುಗಳ ಅಧ್ಯಯನದ ವಿವರಗಳುಳ್ಳ ಗ್ರಂಥವನ್ನು ಶ್ರೀವೇ ಓದುಗರ ತಲುಪಿಸಲಿದ್ದೇವೆ. ಶಾಸನಗಳ ಕುರಿತು ನಿಷ್ಕಾಳಜಿ ಅನಾದರ ಸಲ್ಲದು. ಅವುಗಳ ಸಂರಣೆ ಹಾಗೂ ಅಧ್ಯಯನ ಇಂದಿನ ಅನಿವಾರ್ಯತೆ ಎಂದರು.
ಸಾನಿಧ್ಯ ವಹಿಸಿ ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ಶಾಸನಗಳನ್ನು ಓದಿ ಅರ್ಥೈಸುವ ತರ ಕೊರತೆ ಇಂದು ಹೆಚ್ಚಾಗಿದೆ. ಅದಕ್ಕೆ ಪರಿಹಾರವೆಂಬಂತೆ ಇಂಥ ಕಾರ್ಯಗಾರವನ್ನು ಆಯೋಜಿಸಿರುವುದು ಶ್ಲಾನೀಯ. ಜನಪದ, ಲಾವಣಿಪದ, ವೀರಗಲ್ಲು ಮಾಸ್ತಿಗಲ್ಲು ಹಾಗೂ ಶಾಸನಗಳು ಜನಸಾಮಾನ್ಯರ ನೈಜ ಇತಿಹಾಸವನ್ನು ತಿಳಿಸುವ ಆಕರಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಸನಗಳ ಕುರಿತು ಇರುವ ಅವಜ್ಞೆ ಕಳವಳಕಾರಿಯಾಗಿದೆ. ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಲು ನೆರವಾಗುವ ಶಾಸನಗಳನ್ನು ರಸಲು ಇರುವ ಸಂಸ್ಥೆಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕಿದೆ ಎಂದರು.
ಹಿರಿಯ ಶಾಸನ ತ ಡಾ. ಹನುಮಾ ಗೋಗಿ ಮಾತನಾಡಿ, ಗದಗ ಜಿಲ್ಲೆ ಕರ್ನಾಟಕದ ನಿಜವಾದ ಸಾಂಸತಿಕ ರಾಜಧಾನಿಯಾಗಿದೆ. ಇನ್ನೂ ಅಧ್ಯಯನಕ್ಕೆ ಒಳಪಡಬೇಕಾದ ಅನೇಕ ಶಾಸನಗಳು ಇಲ್ಲಿವೆ. ಭಾರತದ ಶಾಸನಗಳ ಅಧ್ಯಯನದಲ್ಲಿ ವಿದೇಶಿಗರ ಕೊಡುಗೆಯೂ ಸಾಕಷ್ಟಿದೆ. ಶಾಸನಗಳ ಕುರಿತು ಗ್ರಾಮೀಣ ಜನರು ಬೆಳೆಸಿಕೊಂಡಿರುವ ಮೂಢನಂಬಿಕೆಯನ್ನು ಅಳಿಸಬೇಕಾಗಿದೆ. ಕೇವಲ 30&35 ವರ್ಷಗಳ ಹಿಂದೆ ಕಾಣಸಿಗುತ್ತಿದ್ದ ಶಾಸನಗಳು ಇಂದು ಕಣ್ಮರೆಯಾಗಿದ್ದು, ಈ ಕುರಿತು ಗಂಭೀರ ಚಿಂತನೆಗಳು ನಡೆಯಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಾಸನಗಳು ಅಥವಾ ಯಾವುದೇ ಪ್ರಾಚ್ಯ ಅವಶೇಷಗಳ ಕುರಿತು ಇರುವ ಅಸಡ್ಡೆಗೆ ಶಿಣದ ಅಥವಾ ತಿಳುವಳಿಕೆಯ ಕೊರತೆ ಕಾರಣವಾಗಿದೆ. ಮಕ್ಕಳಿಗೆ ಪ್ರೌಢ ಶಿಣ ಹಂತದಲ್ಲೇ ಪ್ರಾಚ್ಯವಸ್ತುಗಳ ಮಹತ್ವದ ಕುರಿತು ಅರಿವು ಮೂಡಿಸಿ ಅವುಗಳ ಕುರಿತು ಆಸಕ್ತಿಯನ್ನು ಹುಟ್ಟುಹಾಕಬೇಕು. ಅಂದಾಗ ಮಾತ್ರ ಶಾಸನಗಳ ಸಂರಣೆ ಅಧ್ಯಯನ ಸಾಧ್ಯ ಎಂದರು.
ಪ್ರೊ. ಎನ್. ಎಂ ತಳವಾರ, ಎಸ್. ಎಸ್. ಪಾಟೀಲ, ಎಂ. ಎಂ. ಬುರಡಿ, ಚಂದ್ರಪ್ಪ ಬಾರಂಗಿ, ಅರ್ಜುನ ಗೊಳಸಂಗಿ ಹಲವರು ಇದ್ದರು.