ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನೆ ಮಾಡಿದ್ದೇನೆ. ಪಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಕಡು ಬಡವರಿಗೂ ಕೂಡ ಔಷಧಿ ಅತ್ಯಂತ ಅಗ್ಗದ ದರದಲ್ಲಿ ಸಿಗಬೇಕು ಎಂದು 2017 ರಿಂದ ಜನೌಷಧಿ ಕೇಂದ್ರ, ಆರಂಭಿಸಿದ್ದಾರೆ. ಕರ್ನಾಟಕದಲ್ಲಿ 1 ಸಾವಿರಕ್ಕಿಂತ ಹೆಚ್ಚು ಜನ್‌ಷಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಿಪಿ ಮಾತ್ರೆಗಳು ಹೊರಗಡೆ 50 ರೂ. ಗೆ ದೊರೆತರೆ ಜನೌಷಧಿ ಕೇಂದದಲ್ಲಿ ಕೇವಲ 10 ರೂಪಾಯಿಯಲ್ಲಿ ದೊರೆಯುತ್ತದೆ. ಹೀಗೆ ಬಡವರಿಗೆ ಸಾಕಷ್ಟು ಆರ್ಥಿಕ ತೊಂದರೆ ಇರುತ್ತದೆ. ಅದರಲ್ಲಿ ಆರೋಗ್ಯ ತೊಂದರೆಯಾದರೆ ಔಷಧಿಯ ಭಾರ. ಆಗಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಳಕಳೆಯಿಂದ ಮಾಡಿರುವುದು ಬಡವರಿಗೆ ಸೇವೆ ಆಗುತ್ತಿದೆ ಎಂದರು.