ಹೆಸರಾಯಿತು, ಇನ್ನು ಉಸಿರಾಗಲಿ ಕನ್ನಡ: ಎಸ್​. ಯು. ಸಜ್ಜನಶೆಟ್ಟರ

05GDG04
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಬಸವದಳದ ವತಿಯಿಂದ ಬಸವ ಸಮುದಾಯ ಭವನದಲ್ಲಿ ಬುಧವಾರ ರಾಜ್ಯೋತ್ಸವ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಪ್ರೊ. ಎಸ್​. ಯು. ಸಜ್ಜನಶೆಟ್ಟರ ಉಪನ್ಯಾಸ ನೀಡಿ ಮಾತನಾಡಿ, ಕರ್ನಾಟಕ ಎಂಬ ಹೆಸರು ಬರಬೇಕಾದರೆ ಬಹಳಷ್ಟು ಹೋರಾಟಗಾರರ ತ್ಯಾಗ, ಬಲಿದಾನದ ಲವಾಗಿ ಈ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿದೆ. ಹೆಸರಾಯಿತು ಕರ್ನಾಟಕ, ಆದರೆ ಇಂದು ನಮ್ಮ ಜವಾಬ್ದಾರಿ ಏನೆಂದರೆ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದಾಗಿದೆ. ಅಂದರೆ "ಉಸಿರಾಗಲಿ ಕನ್ನಡ' ಎಂದರು.

ಶಾಸನಗಳಿಂದ ಹಿಡಿದು ಇಂದಿನ ಕವಿಗಳ ಕೃತಿಗಳಲ್ಲಿ ಉಕ್ತವಾದ ಕನ್ನಡದ ಬಗೆಗಿನ ವಿಷಯಗಳನ್ನು ಅಭಿವ್ಯಕ್ತಿಸಿವೆ. ಕನ್ನಡ ಭಾಷೆಯ ಮೇಲೆ ಬೇರೆ ಭಾಷೆಗಳ ಆಕ್ರಮಣವಾದರೂ ತನ್ನತನವನ್ನು ಉಳಿಸಿಕೊಂಡು ಬಂದಿದೆ. ಪಂಪ, ರನ್ನ, ಪೊನ್ನ, ಜನ್ನ, ಕೇಶಿರಾಜ, ಕವಿಗಳ ಕನ್ನಡದ ಪ್ರೀತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಜಗತ್ತು ತಿರುಗಿ ನೋಡುವಂತೆ ಮಾಡಿದ್ದು 12 ನೇ ಶತಮಾನದ ಬಸವಾದಿ ಶರಣರು ಎಂದು ಹೇಳಿದರು.

ರಗಳೆ, ಷಟ್ಪದಿ, ಕೀರ್ತನೆ, ಸಾಂಗತ್ಯ, ತ್ರಿಪದಿ, ಜಾನಪದ, ತತ್ವಪದಗಳು, ಕನ್ನಡ ಭಾಷೆಗೆ ಹಿರಿಮೆ, ಗರಿಮೆಗಳನ್ನು ತಂದುಕೊಟ್ಟವು. ವಿಶೇಷವಾಗಿ ಗದಗ ಜಿಲ್ಲೆ ಹಲವಾರು ಕವಿಗಳ ತವರಾಗಿದ್ದು, ಇಲ್ಲಿ ಬಳಸುವ ಶುದ್ಧ ತಿರುಳಗನ್ನಡ, ಯಾವ ಭಾಷೆಗಳ ಪ್ರಭಾವ ಈ ಪ್ರದೇಶದ ಮೇಲಿಲ್ಲ. ಕರ್ನಾಟಕ ಏಕೀಕರಣಕ್ಕಾಗಿ ಅಂದಾನಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡ್ರ, ಪಾಟೀಲ ಪುಟ್ಟಪ್ಪ, ಬಸರಿಗಿಡದ ವೀರಪ್ಪ, ತೋಟಪ್ಪ ನಾರಾಯಣಪೂರ ಹಗಲಿರುಳು ದುಡಿದರು ಎಂದು ತಿಳಿಸಿದರು.

ವಿ. ಕೆ. ಕರಿಗೌಡ್ರ, ಗಿರಿಜಾ ಹಸಬಿ, ಎಂ. ಬಿ. ಲಿಂಗದಾಳ, ಪ್ರಕಾಶ ಅಸುಂಡಿ, ಎಸ್​. ಎನ್​. ಹಕಾರಿ, ಎಸ್​. ಎ. ಮುಗದ, ಎಸ್​. ಎ. ಸೋಮಗೊಂಡ, ಮಲ್ಲಿಕಾರ್ಜುನ ನಿಂಗೋಜಿ, ಎನ್​. ಎಸ್​. ಬಡಿಗಣ್ಣವರ, ಎಂ. ಆರ್​. ಜಿನಗಾ, ಸಿದ್ದು ಅಂಗಡಿ, ಮಲ್ಲಪ್ಪ ಜಿನಗಾ, ಶಿವಯೋಗಿ ಅಗಡಿ, ಗಂಗಮ್ಮ ಹೂಗಾರ, ಸರೋಜಕ್ಕಾ ಮುಗದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net