ಬಸವ ಯೋಗ ಮಂದಿರದಲ್ಲಿ ಸಾಪ್ತಾಹಿಕ ವಚನ ಶ್ರಾವಣದ ಮಂಗಲೋತ್ಸವ

20GDG03
Published on

ಅಕ್ಕಮಹಾದೇವಿ ವ್ಯಕ್ತಿತ್ವ ಮಹಿಳೆಯರ ಆದರ್ಶ ಬದುಕಿಗೆ ಪೂರಕ -ಮಂಜುಳಾ ವೆಂಕಟೇಶಯ್ಯಾ

ಗದಗ: ಶತಮಾನದಲ್ಲಿನ ಕನ್ನಡದ ಪ್ರಥಮ ಮಹಿಳಾ ಕವಿಯಿತ್ರಿ, ವಚನಗಾರ್ತಿ, ವೈರಾಗ್ಯನಿಧಿ ಅಕ್ಕಮಹಾದೇವಿಯಲ್ಲಿದ್ದ ತ್ಯಾಗ, ಆತ್ಮಸ್ಥೆÊರ್ಯ, ಅಚಲ ನಿರ್ಧಾರ, ಭಕ್ತಿ, ವಿಶ್ವಾಸ, ಇನ್ನಿತರೆ ಗುಣಗಳನ್ನು 21 ನೆಯ ಶತಮಾನದಲ್ಲಿರುವ ಮಹಿಳೆಯರು ತಮ್ಮ ನಿತ್ಯ ಬದುಕಿನಲ್ಲಿ ರೂಢಿಸಿಕೊಂಡರೆ ಅವರು ಅನೇಕ ಸಮಸ್ಯೆ, ಸಂಕಷ್ಟಗಳಿದ ದೂರಿರಲು ಸಾಧ್ಯವಾಗುವುದು. ಹೀಗಿರಬೇಕಾದರೆ ಇಂದಿನ ಮಹಿಳೆಯರು ತಮ್ಮಲ್ಲಿರುವ ಅತಿಯಾಸೆ, ಆಡಂಬರ ಜೀವನ, ಶೋಕಿ ಬದುಕನ್ನು ಬದಲಾಯಿಸಿಕೊಂಡು ಆತ್ಮ ವಿಶ್ವಾಸ, ಮನೋಸ್ಥೆÊರ್ಯ, ಇನ್ನಿತರೆ ಸದ್ಗುಣ, ಭಾವಗಳನ್ನು ಬೆಳೆಸಿಕೊಂಡರೆ ಆದರ್ಶ ಮಹಿಳೆಯರಾಗಿ ನಾಡಿಗೆ ಅನನ್ಯ ಕೊಡುಗೆಯನ್ನು ನೀಡುವರು. ಈ ಹಿನ್ನೆಲೆಯಲ್ಲಿ ಅಕ್ಕಮಹಾದೇವಿಯ ವ್ಯಕ್ತಿತ್ವ ಮಹಿಳೆಯರ ಆದರ್ಶ ಬದುಕಿಗೆ ಪೂರಕವಾಗಿದೆ ಎಂದು ಸ್ವರಚನ ಕವಿಯಿತ್ರಿ ಮಂಜುಳಾ ವೆಂಕಟೇಶಯ್ಯಾ ತಿಳಿಸಿರುವರು.

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಚಿಂತನ ಕೂಟ ಮತ್ತು ಅಕ್ಕಮಹಾದೇವಿ ಯೋಗ ವಿe್ಞÁನ ಕೇಂದ್ರದ ಗದಗ ಇವರ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮಕ್ಕೆ ವಚನ ಚಿಂತಕರಾಗಿ ಆಗಮಿಸಿದ ಮಂಜುಳಾ ವೆಂಕಟೇಶಯ್ಯಾ ಇವರು ಚನ್ನಬಸವಣ್ಣನವರ ``ತನುವಿನೊಳಗಿದ್ದು ತನುವಗೆದ್ದಳು, ಮನದೊಳಗಿದ್ದು ಮನವಗೆದ್ದಳು, ವಿಷಯದೊಳಗಿದ್ದು ವಿಷಯಗೆದ್ದಳು, ಅಂಗಸAಗವ ತೊರೆದು ಭವ ಗೆದ್ದಳು, ಕೂಡಲಚನ್ನಸಂಗಯ್ಯನ ಹೃದಯಕಮಲವ ಬಗೆದು ಹೊಕ್ಕು ನಿಜಪದವಿಯನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆ’’ ಈ ವಚನ ವಿಶ್ಲೇಷಣೆಯೊಂದಿಗೆ ನಮಗೂ, ನಿಮಗೂ ಎಲ್ಲರಿಗೂ ಅಕ್ಕನಾಗಿರುವ ಅಕ್ಕಮಹಾದೇವಿಯ ಘನ ವ್ಯಕ್ತಿತ್ವ ಪರಿಚಯಿಸಿದರು.

ಡಾ. ಎಸ್. ಕೆ. ನಾಲತ್ವಾಡಮಠ ಇವರು ನಾವಿಂದು ಯಾವುದಾದರೊಂದು ಪ್ರಸಂಗ ನಿಮಿತ್ಯ ಕಾರ್ಯಕ್ರಮ ನಡೆಸದೆ ಸಮಾಜೋನ್ನತಿಗೆ ಸಹಕಾರಿಯಾಗುವ ಕಾರ್ಯಕ್ರಮಗಳನ್ನು ನಡೆಸಬೇಕು, ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮವು ಮಾನವ ತನು, ಮನ, ಧನ ತ್ರಿಗುಣಾದಿಗಳಿಂದ ಪರಿವತಿರ್ತನಾಗಲು ಸಹಕಾರಿಯಾದ್ದು ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಕುರಿತು ಸಭಿಕರ ಪರವಾಗಿ ಶಾಂತಾ ಕುಂದಗೋಳ  ಕವಿತಾ ಮರಿಗೌಡರ, ವಿಜಯಾ ಚನ್ನಶೆಟ್ಟಿ ಅನಿಸಿಕೆ ತಿಳಿಸಿದರು. ವಿಶೇಷವಾಗಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಬಸವ ಸಾಮೂಹಿಕ ಪ್ರಾರ್ಥನೆ ಮತ್ತು ಬಸವ ಮಂಗಲ ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಸಂಗೀತಾ ನಾಖೋಡ, ಸುನಂದಾ ಜ್ಯಾನೋಪಂತರ, ಗೌರಿ ಜಿರಂಕಳಿ ಇವರಿಗೆ ಬಹುಮಾನ ನೀಡಲಾಯಿತು ದಾಸೋಹ ಸೇವೆ ಸಲ್ಲಿಸಿದ ಜಿ. ಪಿ. ಕಟ್ಟಿಮನಿ, ವಿ. ಎಂ. ಮುಂದಿನಮನಿ, ವೀಣಾ ಅಕ್ಕಿ, ಸುಮಿತ್ರಾ ಎನ್. ಭಾಸಲಾಪೂರ ಹಾಗೂ ಅತಿಥಿ ಆಮಂತ್ರಿತರನ್ನು ಗೌರವಾದರಗಳಿಂದ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಿರಿಜಕ್ಕ ನಾಲತ್ವಾಡಮಠ ``ಮೀಸಲು’’ ಕುರಿತು ಹಾಡು ಹಾಡಿದರು. ಸುನಂದಾ ಜ್ಯಾನೋಪಂತರ ವಚನ ಸಂಗೀತ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net