

ವಿಜಯವಾಣಿ ಸುದ್ದಿಜಾಲ ಗದಗ
ಸಾಮಾನ್ಯವಾಗಿ ವಿದ್ಯಾಥಿರ್ಗಳಲ್ಲಿ ಕಲಿಕಾ ಗುಣ ಇರುತ್ತದೆ. ಶಿಕ್ಷಕರಾದವರು ವಿದ್ಯಾಥಿರ್ಗಳಲ್ಲಿ ಕಲಿಕಾ ಗುಣವನ್ನು ಹೆಚ್ಚಿಸಿ ಅವರಿಗೆ ವಿದ್ಯಾಭ್ಯಾಸದ ಜೊತೆಗೆ ಮಾನವೀಯ ಮೌಲ್ಯ ಅರಿಯಲು ಮತ್ತು ರಾಷ್ಟ್ರಾಭಿಮಾನ ಬೆಳೆಯಲು ಪೂರಕವಾದ ಾನ ನೀಡಬೇಕು ಎಂದು ನಗರದ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ. ಕೆ. ಬಂಡಿಹಾಳ ಹೇಳಿದರು.
ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾಥಿರ್ಗಳು ಪ್ರಬುದ್ಧರಾದ ಮೇಲೆ ಸಮಾಜ, ರಾಷ್ಟ್ರಗಳ ಅಭಿವೃದ್ಧಿಗಾಗಿ ಶ್ರಮಿಸುವರು. ಇದರಿಂದ ಸುಂದರ, ಸದೃಢ ರಾಷ್ಟ್ರ ನಿರ್ಮಾಣಗೊಳ್ಳಲು ಸಾಧ್ಯ. ವಿದ್ಯಾಥಿರ್ಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವ ಶಿಕ್ಷಕರು ಸಶಕ್ತ ರಾಷ್ಟ್ರ ನಿರ್ಮಾಪಕರು ಆಗಬೇಕು ಎಂದು ತಿಳಿಸಿದರು.
ವಿದ್ಯಾಥಿರ್ಗಳಲ್ಲಿ ಕಲಿಕಾ ಆಸಕ್ತಿ ಕಡಿಮೆ ಆಗುತ್ತಿದೆ. ಹಣ ಮತ್ತು ಸಮಯದ ಮಹತ್ವ ಅರಿಯದೆ ವಿದ್ಯಾಥಿರ್ಗಳು ಕುರುಡರಾಗಿ ಮುನ್ನುಗುತ್ತಿದ್ದಾರೆ. ವಿದ್ಯಾಥಿರ್ಗಳಿಗೆ ಸಮಯ ಮತ್ತು ಹಣದ ಮಹತ್ವ ತಿಳಿಸುವದು ಅಗತ್ಯವಾಗಿದೆ ಎಂದು ಹೇಳಿದರು.
ಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ. ಎಸ್. ಪಲ್ಲೆದ ಮಾತನಾಡಿ, ಶಿಕ್ಷಕರಾದವರು ಕೇವಲ ಶಾಲೆಯಲ್ಲಿ ವಿದ್ಯಾಥಿರ್ಗಳಿಗೆ ಶಿಕ್ಷಕರಾಗಿರದೇ ಸಮಾಜದಲ್ಲಿರುವ ವಿದ್ಯಾಥಿರ್ ಪಾಲಕರಿಗೂ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರೆ ಬಾಲಕ, ಪಾಲಕ, ಶಿಕ್ಷಕ ಇವರಲ್ಲಿರುವ ಅನೇಕ ಸವಾಲುಗಳು ದೂರಾಗುತ್ತವೆ ಎಂದರು.
ಎಂ.ಕೆ. ಬಂಡಿಹಾಳ ಅವರನ್ನು ಸನ್ಮಾನಿಸಲಾಯಿತು. ಎಂ. ಎಸ್. ಚಳಗೇರಿ, ವಿಜಯಲಕ್ಷಿ$್ಮ ಆನೆಹೊಸೂರ, ವಿ. ಎಂ. ಮುಂದಿನಮನಿ, ಎಂ. ವಿ. ಐಹೊಳ್ಳಿ, ರವಿ ಹುಡೇದ, ವಿಜಯಾ ಚನ್ನಶೆಟ್ಟಿ ಇತರರು ಇದ್ದರು.