ಬಸವ ಯೋಗ ಮಂದಿರದಲ್ಲಿ ಬಸವ ಜಯಂತಿ ಆಚರಣೆ

01GDG03
Published on

ಬಸವಣ್ಣಣವರ ವಚನಗಳು ಸರ್ವ ಸಮಸ್ಯೆಗೆ ಪರಿಹಾರೋಪಾಯಗಳು

ವಿಜಯವಾಣಿ ಸುದ್ದಿಜಾಲ ಗದಗ

ನಮ್ಮ ಮನ, ಬುದ್ಧಿ, ಭಾವ, ಭಾವನೆಗಳು ವ್ಯತಿರಿಕ್ತವಾದರೆ ಸಮಾಜದಲ್ಲಿ ಅಸಮಾನತೆ, ಭಯ, ಕೊಲೆ, ಸುಲಿಗೆ, ಅನೀತಿ, ಅತ್ಯಾಚಾರ ಮುಂತಾದ ಸಮಸ್ಯೆಗಳು ಉದ್ಭವಿಸಿ ಅಶಾಂತಿ ಪರಿಸರ ನಿರ್ಮಾಣಕ್ಕೆ ಕಾರಣವಾಗುತ್ತವೆ. ಈ ಎಲ್ಲ ಸಮಸ್ಯೆಗಳು ಇಲ್ಲವಾಗಬೇಕಾದರೆ ನಾವು ಮತ್ತು ನಾವಿರುವ ಸಮಾಜ ಪರಿವರ್ತನೆಗೊಳ್ಳಬೇಕು. ಬಸವಣ್ಣಣವರ ವಚನಗಳನ್ನು ಮನನಮಾಡಿಕೊಮಡು ಬದುಕಬೇಕು ಎಂದು ಸಮಾಜ ಸೇವಕಿ ಗಿರಿಜಕ್ಕ ನಾಲತ್ವಾಡಮಠ ಹೇಳಿದರು.

ನಗರದ ಬಸವ ಯೋಗ ಪಾಠಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿಗಂತೂ ಬಸವಣ್ಣನವರ ವಚನಗಳು ಅಗತ್ಯವಾಗಿವೆ. ಈ ದಿಸೆಯಲ್ಲಿ ಬಸವಣ್ಣಣವರ ವಚನಗಳು ಸರ್ವ ಸಮಸ್ಯೆಗೆ ಪರಿಹಾರೋಪಾಯಗಳಾಗಿವೆ. ಬಸವಣ್ಣನವರ ವಚನಗಳನ್ನು ಮಹಿಳೆಯರಾದ ನಾವು ಮೊದಲು ನಿತ್ಯ ಜೀವನದಲ್ಲಿ ಪರಿಪಾಲಿಸಿದರೆ ನಮ್ಮ ಮಕ್ಕಳು ಪರಿಪಾಲಿಸುವರು. ಇದರಿಂದ ಸುಂದರ ಸಮಾಜ ನಿರ್ಮಾಣಗೊಳ್ಳುವುದು ಎಂದರು.

ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ ಶಿಕ್ಷಕ ನಾಗರಾಜ ಎಸ್​. ಎಚ್​ ಮಾತನಾಡಿ, ಶರಣರ ವಚನಗಳ ನುಡಿಯಂತೆ ನಾವು ನಡೆದರೆ ನಮ್ಮ ಜೀವನ ಪಾವನವಾಗುವದು. ಇದಕ್ಕೆ ನಾನೇ ಸಾಯಾಗಿರುವೆ. ವಚನಗಳ ಮೂಲಕ ನನ್ನಲ್ಲಿ ಬದಾಲವಣೆ ಆಗಿದೆ ಎಂದರು.

ಪ್ರೌಢಶಾಲೆ ಶಿಕ್ಷಕ ಭೀಮಸೇನ ಇಬ್ರಾಹಿಂಪೂರ, ಡಾ. ಎಂ. ವಿ. ಐಹೊಳ್ಳಿ, ಕೆ. ಎಸ್​. ಪಲ್ಲೆದ, ವಿಜಯಲಕ್ಷಿ$್ಮ ಮೇಕಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net