ಬಸವ ಅಭಿಯಾನ! ವಿದ್ಯಾಥಿರ್ಗಳೊಂದಿಗೆ ಮಠಾಧೀಶರ ಸಂವಾದ

10GDG06
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದಲ್ಲಿ ಮಂಗಳವಾರ ಬಸವ   ಅಭಿಯಾನ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಮೆರವಣಿಗೆ ನಂತರ ಶಾಲಾ ಕಾಲೇಜು ವಿದ್ಯಾಥಿರ್ಗಳೊಂದಿಗೆ ನಾಡಿನ ಮಠಾಧೀಶರು ಸಂವಾದ ಕಾರ್ಯಕ್ರಮ ನಡೆಸಿದರು. ಸಂವಾದ ಕಾರ್ಯಕ್ರಮದಲ್ಲಿ ಬಸವ ತತ್ವ, ವೈದಿಕ ಪರಂಪರೆ, ಇಷ್ಟಲಿಂಗ ಮತ್ತು ಸ್ಥಾವರ ಲಿಂಗ, ವಚನ ಮತ್ತು ಪುರಾಣ, ಓಂ ನಮಃ ಶಿವಾಯ ಮತ್ತು ಬಸವ ಲಿಂಗಾಯ ನಮಃ ನಡುವಿನ ವ್ಯತ್ಯಾಸ, ಸೂಕ್ಷ$್ಮತೆ, ವಿಚಾರಗಳ ಕುರಿತು ಸುಧೀರ್ ಚರ್ಚೆ, ಪರ ವಿರೋದ ಚರ್ಚೆ ಪ್ರಶ್ನೋತ್ತರ ಜರುಗಿದವು. ವಿದ್ಯಾಥಿರ್ಗಳ ಪ್ರಶ್ನೆಗೆ ಮಠಾಧೀಶರು ಉತ್ತರಿಸಿದರು.

ಬಾಲ್ಕಿ ಹಿರೇಮಠ ಶ್ರೀಗಳು ಮಾತನಾಡಿ, ಓಂ ನಮಃ ಶಿವಾಯ ಮತ್ತು ಓಂ ಗುರು ಬಸವಲಿಂಗಾಯ ನಮಃ ಅಂದರೂ ಒಂದೇ. ಬಸವ ಮತ್ತು ಶಿವನೂ ಎರಡೂ ಒಂದೇ ಎಂದು ಬಸವ ಮತ್ತು ಶಿವನ ನಡುವಿನ ಸಾಮ್ಯತೆ ಕುರಿತು ವಿವರಿಸಿದರು. ದೇಹವನ್ನು ದೇವಾಲಯ ಆಗಿಸಿಕೊಳ್ಳಬೇಕು. ಇಷ್ಟಲಿಂಗ ಅನುಸಂಧಾನ ಗೊಳಿಸಬೇಕು. ಬಸವಣ್ಣ ನಮ್ಮ ದೇಹವನ್ನು ದೇವಾಲಯ ಮಾಡಿದರು. ಸ್ಥಾವರಕ್ಕಳಿವುಂಟು. ಜಂಗಮ್ಮಕ್ಕಳಿವಿಲ್ಲ ಬಸವಣ್ಣ ಹೇಳಿದ್ದರು ಎಂದರು

ಇಷ್ಟ ಲಿಂಗ ಪೂಜೆ ಮತ್ತು ಸ್ಥಾವರ ಲಿಂಗಕ್ಕೂ ಇರುವ ವ್ಯತ್ಯಾಸ ಕುರಿತು ವಿದ್ಯಾಥಿರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ತೊಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಇಷ್ಟಲಿಂಗ ಪೂಜೆ ಜಗದಗಲ ವ್ಯಾಪಿ ಇರುತ್ತದೆ. ವಿಶ್ವರೂಪಿ ಇಷ್ಟಲಿಂಗ ಪೂಜೆ. ಯಾವ ಸಮಯದಲ್ಲಾದರೂ ನೀವು ಪೂಜೆ ಮಾಡಬಹುದು. ಸ್ಥಾವರ ಲಿಂಗ ಶಿವನ ಪ್ರತಿರೂಪ ಮತ್ತು ಕ್ಷೇತ್ರಕ್ಕೆ ಸೀಮಿತ ಆಗಿರುತ್ತದೆ. ಗೋಪುರ ಗಡಿಯಾರ ಮತ್ತು ಕೈಗಡಿಯಾರಕ್ಕೆ ಇರುವ ವ್ಯತ್ಯಾಸವೇ ಸ್ಥಾವರ ಮತ್ತು ಇಷ್ಟಲಿಂಗಕ್ಕೂ ಇರುವ ವ್ಯತ್ಯಾಸ. ಸ್ಥಾವರಲಿಂಗಕ್ಕಿಂತ ಇಷ್ಟಲಿಂಗವನ್ನು ಅನುಸಂಧಾನ ಮಾಡಿಕೊಳ್ಳಬೇಕು ಎಂದರು.

ಬಸವಣ್ಣವರು ಭಕ್ತಿಯಲ್ಲಿ ಏಕಾಗ್ರತೆ ಇರಬೇಕು ಎಂದು ಹೇಳಿದ್ದರು. ಇಂದಿನ ಯುಗದಲ್ಲಿ ಮೊಬೈಲ್​ ಬಳಕೆ ಹೆಚ್ಚಾಗಿದೆ. ಮೊಬೈಲ ಬಳಕೆ ಕಡಿಮೆ ಮಾಡಿದರೆ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಶ್ರೀಗಳು ಹೇಳಿದರು.

ಹಿಂದೂ ಧರ್ಮದವರು ವಿಭೂತಿ ಮತ್ತು ಇಷ್ಟಲಿಂಗ ಧರಿಸುತ್ತಾರೆ. ಇದೇ ಪರಂಪರೆ ಇಸ್ಲಾಂ ಮತ್ತು ಕ್ರಿಶ್ಚಿಯನ್​ ಧರ್ಮದವರು ಏಕೆ ಪಾಲಿಸುತ್ತಿಲ್ಲ ಎಂಬ ವಿದ್ಯಾಥಿರ್ಗಳ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಅವರವರ ಧರ್ಮದಲ್ಲಿ ಅವರ ಪ್ರತ್ಯೇಕ ನಂಬಿಕೆ ಆಚರಣೆ ಇರುತ್ತವೆ. ಎಲ್ಲ ಧರ್ಮವನ್ನು ಪ್ರೀತಿಸಿ ಗೌರವಿಸಬೇಕು ಎಂದು ಶ್ರೀಗಳು ಹೇಳಿದರು. ವೀರಶೈವ ಮತ್ತು ಲಿಂಗಾಯತ ಧರ್ಮಕ್ಕೂ ವ್ಯತ್ಯಾಸ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಠಾಧೀಶರು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಆದರೆ ಕೆಲವರಿಗೆ ಶಿಕ್ಷಣದ ಕೊರತೆಯಿಂದ ಎರಡೂ ಬೇರೆ ಎಂದು ಪ್ರಚಾರ ಮಾಡತ್ತಿದ್ದಾರೆ. ಕರ್ನಾಟಕದಲ್ಲಿ ಇರುವರು ಎಲ್ಲರೂ ಲಿಂಗಾಯತರು ಎಂದು ಬಾಲ್ಕಿ ಹಿರೇಮಠದ ಶ್ರೀಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶ್ರೀಗಳಿಗೆ ಐಶಾರಾಮಿ ಜೀವನ ಏತಕ್ಕೆ:

ಕಾಯಕವೇ ಕೈಲಾಸ ಎಂದು ಹೇಳುವ ಶರಣ ಪರಂಪರೆ ಅನುಸರಿಸುತ್ತೀರುವ ಹಲವು ಮಠಾಧೀಶರು ಐಶಾರಾಮಿ ಜೀವನ ಏಕೆ ನಡೆಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಠಾದೀಶರು, ಇಲ್ಲಿನ ಯಾರೊಬ್ಬ ಶ್ರೀಗಳು ಐಶಾರಾಮಿ ಜೀವನ ನಡೆಸುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.

ಮೀಸಲಾತಿ ಏತಕ್ಕೆ:

ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವ ಸರ್ಕಾರಗಳು ಜಾತಿ ಜಾತಿಗಳ ನಡುವೆ ವೈಮನಸ್ಸು ಮೂಡಿಸುತ್ತಿವೆ ಏಕೆ ಎಂದು ವಿದ್ಯಾಥಿರ್ಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಠಾಧೀಶರು ವಚನ ಸಂವಿಧಾನ ಮತ್ತು ಭಾರತ ಸಂವಿಧಾನದ ಎರಡೂ ಒಂದೆ ಆಗಿದೆ. ಭಾರತದಲ್ಲಿ ಎಲ್ಲರೂ ಸಮಾನ ಬದುಕು ಕಟ್ಟಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಸಂವಿಧಾನ ಮೂಲಕ ಮೀಸಲಾತಿ ನೀಡಲಾಗುತ್ತಿದೆ ಎಂದು ತಿಳಿದರು.

ತೋಂಟದ ಸಿದ್ದರಾಮ ಶ್ರೀಗಳು, ಬಸವಲಿಂಗ ಪಟ್ಟದೇವರು, ಗಂಗಾ ಮಾತಾಜಿ, ಅಲ್ಲಮಪ್ರಭು ಶ್ರೀಗಳು, ಶಿವಾನಂದ ಶ್ರೀಗಳು, ಪ್ರಭು ಚೆನ್ನಬಸವ ಶ್ರೀಗಳು, ಡಿ.ಆರ್​. ಪಾಟೀಲ. ಬಿ. ಬಿ. ಅಸೂಟಿ ಇತರರು ಇದ್ದರು.

ಬಾಕ್ಸ್​:

ಅಂತರ್ಜಾತಿ ವಿವಾಹವನ್ನು ಬಸವಣ್ಣನವರು ಏಕೆ ಪ್ರೋತ್ಸಾಹಿಸಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಮಠಾಧೀಶರು, ಬಸವಣ್ಣನವರು ಅಂತರ್ಜಾತಿ ವಿವಾಹ ಪ್ರೋತ್ಸಾಹಿಸಲಿಲ್ಲ. ಲಿಂಗಧಾರಣೆ ಮಾಡಿದವರ ನಡುವೆ ವಿವಾಹ ಮಾಡಿದರು. ಇಂದು ಅಂತರ್ಜಾತಿ ವಿವಾಹಕ್ಕೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ತಿಳಿಸಿದರು. ಬಸವಣ್ಣನ ವಾರಸುದಾರರಾದ ನಾವುಗಳು ಹರಿಜನಕೇರಿಗೆ ಹೋಗಿ ಪ್ರವಚಣ ನೀಡುತ್ತೇವೆ. ಲಿಂಗದೀಕ್ಷೆ ನೀಡುತ್ತೇವೆ ಎಂದು ಮಠಾಧೀಶರು ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net