ಫಲಿತಾಂಶ ನಂತರ ಕಾಂಗ್ರೆಸ್ ಕೈಗೆ ಚೊಂಬು ಗ್ಯಾರಂಟಿ: ಯತ್ನಾಳ

IMG-20240502-WA0037
Published on

ವಿಜಯವಾಣಿ ಸುದ್ದಿಜಾಲ ಗದಗ

ನರೇಂದ್ರ ಮೋದಿ ಕೇವಲ ವ್ಯಕ್ತಿ ಅಲ್ಲ. ಅವರೊಬ್ಬ ಶಕ್ತಿ. ವಿಶ್ವ ನಾಯಕ ಆಗಿರುವ ಅವರು ಕಳೆದ 10 ವರ್ಷದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸುವ ತಾಕತ್ತು ಯಾರಿಗೂ ಇಲ್ಲ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಸ್ವಾಮೀ ವಿವೇಕಾನಂದ ಸಭಾಭವನದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಕೈಗೆ ಚೊಂವು ಸಿಗುವುದು ಗ್ಯಾರಂಟಿ ಎಂದರು

ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಔಷಧ, ಆಯುಷ್ಮಾನ ಭಾರತ, ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ ಅನೇಕ ಯೋಜನೆಗಳು ಯುವಕರಿಗೆ, ನಾಗರಿಕರಿಗೆ ಸಹಕಾರಿ ಅಗಿವೆ ಎಂದರು.

ತಮ್ಮ ಭಾಷಣದಲ್ಲಿ ವಾಜಪೇಯಿ ಅವರನ್ನು ಸ್ಮರಿಸಿದ ಅವರು, ಕಾಶ್ಮೀರ ವಿಷಯದಲ್ಲಿ ವಾಜಪೇಯಿ ಅವರದ್ದು ಸ್ಪಷ್ಟ ನಿಲುವು ತಾಳಿದ್ದರು. ಈ ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನಿ ಇರಲು ಸಾಧ್ಯವಿಲ್ಲ ಎಂದೆದ್ದಿದ್ದರು. ಕಾಶ್ಮೀರ ಇಂದು ನೆಮ್ಮದಿಯಿಂದ ಇದೆ. ಅದಕ್ಕೆ ಕಾರಣ ಉತ್ತಮ ಆಡಳಿತವೇ ಕಾರಣ ಎಂದರು.

ಸಂವಿಧಾನ ಕುರಿತು ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂದು ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನವನ್ನೂ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಅದೇ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಧರ್ಮಾಧರಿತ ಮೀಸಲಾತಿ ನೀಡಬಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ಎಫ ಎಸ್ ಎಲ್ ವರದಿ ಬರುವ ಮುಂಚೆಯೇ ಆ ರೀತಿ ಘೋಷಣೆಯೇ ಜರುಗಿಲ್ಲ ಎಂದು ಕಾಂಗ್ರೆಸ್ ಹೇಳಿತು. ಇದು ಯಾವ ನ್ಯಾಯ? ಕೊನೆಗೂ ಘೋಷಣೆ ಕೂಗಿದ್ದು ಸತ್ಯ ಎಂದು ವರದಿ ಬಂದಿತು ಎಂದರು.

ಭಾರತ ರತ್ನ ವಿಷಯ ಕುರಿತು ಮಾತನಾಡಿ ಯತ್ನಾಳ ಅವರು, ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡುವಂತೆ ವಾಜಪೇಯಿ ಅವರು ಶಿಫಾರಸ್ಸು ಮಾಡಿದ್ದರು. ಆದರೆ, ಬದುಕಿದ್ದಾಗಲೇ ಇಂದಿರಾಗಾಂಧಿ, ನೆಹರು ತಮಗೇ ತಾವೇ ಭಾರತ ರತ್ನ ಪಡೆದಿದ್ದರು ಎಂದು ಕಿಡಿ ಕಾರಿದರು.

ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ವಿಚಾರವಾಗಿ ತಿಹಾರ್ ಜೈಲಿಗೆ ಹೋಗಿ ಬಂದರೆ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ಸಿನ ಅನೇಕ ನಾಯಕರು ಜಾಮೀನು ಪಡೆದು ಹೊರ ಬಂದವರೇ. ಬೆಂಗಳೂರಿನ ರೌಡಿ ಕೊತ್ವಾಲ ರಾಮಚಂದ್ರ ರೌಡಿಯ ಶಿಷ್ಯ ಡಿ.ಕೆ. ಶಿವಕುಮಾರ್. ಅವರ ಆಸ್ತಿ 20 ಸಾವಿರ ಕೋಟಿ. ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. 24 ವರ್ಷ ರಾಜಕಾರಣ ಮಾಡಿದ ಮೋದಿ ಅವರ ಆಸ್ತಿ 2 ಕೋಟಿ ಮಾತ್ರ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಮೇಲೆ ಹಲವಡೆ ಪಾಕಿಸ್ತಾನದ ಧ್ವಜ ಹಾರಿಸಲಾಯಿತು. ಹುನುಮಾನ್ ಚಾಲಿಸ್ ಹೇಳಿದರೆ ಹೊಡೆಯಲಾಯಿತು. ಲವ್ ಜಿಹಾದ್ ಮೂಲಕ ಹಿಂದು ಮಹಿಳೆಯರನ್ನು ಪುಸಲಾಯಿಸಿ ಮೋಸ ಮಾಡಲುವ ಪ್ರಕರಣಗಳು ಹೆಚ್ಚಾದವು. ಹುಬ್ಬಳ್ಳಿಯಲ್ಲಿ ನೇಹಾ ಪ್ರಕರಣ ಎಲ್ಲರ ಗಮನದಲ್ಲಿ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಕಳೆದ ಚುನಾವಣೆಯಲ್ಲಿ ಒಂದು ವರ್ಗದ ಸಮುದಾಯದ ಬೆಳಗ್ಗೆ 7 ಗಂಟೆಗೆ ಸರತಿಯಲ್ಲಿ ನಿಂತು ಮತದಾನ ಮಾಡುತ್ತಾರೆ. ನಮ್ಮ ಸಮುದಾಯಗಳು ಮತದಾನ ಮಾಡಲು ಮನೆ ಬಿಟ್ಟು ಹೊರಗಡೆ ಬರುವುದೇ ಇಲ್ಲ. ಈ ಬೆಳಲವಣಿಗೆಯನ್ನು ಎಲ್ಲರೂ ತಿಳಿದುಕೊಂಡು ಮತದಾನ ಮಾಡಬೇಕು ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಹಾಸ್ಯಾಸ್ಪದ ಎನಿಸಿದೆ. ಪ್ರತಿ ಮಹಿಳೆಗೆ 1 ಲಕ್ಷ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದು ಹಾಸ್ಯಾಸ್ಪದ ಎನಿಸಿದೆ. ಕಾಂಗ್ರೆಸ್ ಪ್ರಕಾರ 70 ಲಕ್ಷ ಕೋಟಿ ಅಗತ್ಯವಿದೆ. ಇಷ್ಟು ಬಜೆಟ್ ಸಂಗ್ರಹಿಸುವುದೇ ಸಾಧ್ಯವಿದೆಯೇ? ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದೇ 230 ಕ್ಷೇತ್ರ. ಬಹುಮತ ಬರಲು ಕಾಂಗ್ರೆಸ್ಸಿಗೆ ಸಾಧ್ಯವೇ ಇಲ್ಲ ಎಂದರು.

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಗದಗ ನಗರಸಭೆಗೆ 40 ಕೋಟಿ,
ಆರ್ ಡಿ ಪಿ ಆರ್ ವಿವಿ ರಸ್ತೆಗೆ 18 ಕೋಟಿ ವೆಚ್ಚದ ರಸ್ತೆ, ರಿಂಗ್ ರೋಡ್ ಸೇರಿದಂತೆ ಅನೇಕ ರಸ್ತೆಗಳಿಗೆ ಸಿ.ಸಿ. ಪಾಟೀಲ ಹಣ ಬಿಡುಗಡೆ ಮಾಡಿದ್ದಾರೆ. ಬೊಮ್ಮಾಯಿ ದೂರದೃಷ್ಟಿ ನಾಯಕ. ಗದಗ ನಗರಕ್ಕೆ ವಿಶೇಷ ಕಾಳಜಿ ವಹಿಸಲಿದ್ದಾರೆ. ಯುವಕರಿಗೆ ನಗರದಲ್ಲಿ ಕಾರ್ಖಾನೆ ಸ್ಥಾಪಿಸಲಿದ್ದಾರೆ. ಗದಗ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದ್ದಾರೆ ಎಂದರು.

ರಾಜು ಕುರಡಗಿ, ಎಸ್.ವಿ. ಸಂಕನೂರು, ಉಷಾ ದಾಸರ, ಮೋಹನ ಮಾಳಶೆಟ್ಟಿ, ವಿಜಯಕುಮಾರ್ ಗಡ್ಡಿ, ಸಿದ್ದು ಪಲ್ಲೇದ, ವೆಂಕನಗೌಡ ಗೋವಿಂದಗೌಡ್ರ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net