ಬಾಲಮಂದಿರದ ಮಕ್ಕಳಿಗೆ ಚಿತ್ರಕಲೆಯಲ್ಲಿ ಟಾಪ್‌ಟೆನ್ ಪ್ರಶಸ್ತಿ

21GDG05
Published on

ಗದಗ: ಇತ್ತೀಚಿಗೆ ನಡೆದ ಯು.ಎಸ್. ಆರ್ಟ್ ಗ್ಯಾಲರಿ ಅಸ್ಸಾಂ ಇವರು ಸಂಯುಕ್ತ ಆಶ್ರಯದಲ್ಲಿ ನಡೆದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮೋತ್ಸವ ಅಂಗವಾಗಿ ಮಕ್ಕಳ ದಿನಾಚರಣೆರಂದು ಇಂಟರ್ನ್ಯಾಷನಲ್ ಚಿಲ್ಡçನ್ ಆರ್ಟ ಕಾಂಪಿಟೇಶನ್ ಜರುಗಿತು. ಇದರಲ್ಲಿ ಸರ್ಕಾರಿ ಬಾಲಕರ ಬಾಲಮಂದಿರದ ೧೦ ವಿದ್ಯಾರ್ಥಿಗಳು ಭಾಗವಹಿಸಿ ಇದರಲ್ಲಿ ೩ ವಿದ್ಯಾರ್ಥಿಗಳು ಟಾಪ್‌ಟೆನ್‌ದಲ್ಲಿ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಪ್ರಾಥಮಿಕ ವಿಭಾಗದಲ್ಲಿ ಕುಮಾರ. ಕಿರಣ್ ಚವಳಿಮಠ ಹಾಗೂ ಕುಮಾರ್. ಮಲ್ಲಿಕಾರ್ಜುನ್ ಹೂಗಾರ ಹಾಗೂ ಪ್ರೌಢ ಶಾಲೆ ವಿಭಾಗದಲ್ಲಿ ಕುಮಾರ. ಕಾರ್ತಿಕ ರ. ಬಂಡಾ ಭಾಗವಹಿಸಿ ಚಾರ್ಕುಲ್ ಮಾಧ್ಯಮದಿಂದ ರಚಿಸಿರುವ ಪಂಡಿತ್. ಜವಾಹರಲಾಲ್ ನೆಹರು ಅವರ ಭಾವಚಿತ್ರದ ವಿಷಯ ಪೂರಕ ಚಿತ್ರವನ್ನು ರಚಿಸಿ ಪ್ರಶಸ್ತಿಯನ್ನು ಪಡೆದಿರುತ್ತಾರೆ ಇವರಿಗೆ ಮತ್ತು ಚಿತ್ರಕಲೆ ಕರಕುಶಲತೆ ತರಬೇತಿ ನೀಡಿದ ಕಲಾವಿದ ಡಾ. ಜಾಕೀರಹುಸೇನ ಎಂ. ಕೊರ್ಲಹಳ್ಳಿ ಅವರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಾದ ಶ್ರೀಮತಿ ರಫೀಕಾ ಹಳ್ಳೂರ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯದೇವಿ ಎ. ಕವಲೂರ ಮತ್ತು ಸದಸ್ಯರಾದ ಶ್ರೀ ದೇವಪ್ಪ ಈರಗಾರ, ಶ್ರೀಮತಿ ಸುಪರ್ಣ ಆರ್. ಬ್ಯಾಹಟ್ಟಿ, ಶ್ರೀ ಬಸವರಾಜ ಎನ್. ಸಂಶಿ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಶ್ರೀಮತಿ ಗಿರಿಜಾ ದೊಡ್ಡಮನಿ, ಶ್ರೀಮತಿ ವಿಜಯಲಕ್ಷ್ಮಿ ವಾಲಿ, ಶ್ರೀಮತಿ ಗೋದಾವರಿ ಮುಳಗುಂದ, ಸಿಸ್ಟರ್ ಪ್ರೇಸಿಲ್ಲಾ (ಯು.ಎನ್.ಐ.ಸಿ.ಇ.ಎಫ್. ಸಪೋರ್ಟ ಪರ್ಸನ್) ಅನುಪಮಾ ಹಿರೇಗೌಡ್ರ ರಕ್ಷಣಾ ಅಧಿಕಾರಿಗಳು (ಸಾಂಸ್ಥಿಕ), ಪ್ರಕಾಶ ಗಾಣಿಗೇರ ಹಾಗೂ ಗೃಹಪಾಲಕರಾದ ಪ್ರವೀಣ್, ಮೈಲಾರಿ ನೀಲಗುಂದ, ಕುಮಾರಿ. ಪ್ರಭಾವತಿ ಮತ್ತು ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಶ್ರೀಮತಿ ಲಕ್ಷ್ಮೀ ಬಾಗೇವಾಡಿ ಮತ್ತು ಸಿಬ್ಬಂದಿ ವರ್ಗ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವರ್ಗ ಹಾಗೂ ಸರ್ಕಾರಿ ಬಾಲಕರ ಬಾಲಮಂದಿರದ ಎಲ್ಲಾ ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದಿಸಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net