

ವಿಜಯವಾಣಿ ಸುದ್ದಿಜಾಲ ಗದಗ
ಮಾನವ ಮಾನವೀಯ ಮೌಲ್ಯಗಳೊಂದಿಗೆ ಧಾಮಿರ್ಕ, ಸಾಮಾಜಿಕ, ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಮುನ್ನಡೆಯಬೇಕು ಎಂದು ಬಳಗಾನೂರಿನ ಶಾಂತವೀರ ಶರಣರು ಹೇಳಿದರು.
ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ಜೀಣೋರ್ದ್ಧಾರಗೊಂಡ ವೀರಭದ್ರೇಶ್ವರ ದೇವಸ್ಥಾನದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾನವನು ಉತ್ತಮ ಹಾದಿಯಲ್ಲಿ ಮುನ್ನಡೆಯಬೇಕಾದರೆ ಧಾಮಿರ್ಕ ಚಿಂತನೆ ಅಗತ್ಯ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ದಾನ ಧರ್ಮ ಮಾಡುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಲೋಕಸಭಾ ಸಂಸದ ಪಿ. ಸಿ. ಗದ್ದಿಗೌಡರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುೇತ್ರ ಬಳಗಾನೂರ ಗ್ರಾಮದಲ್ಲಿ ಧಾಮಿರ್ಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳು ನಡೆಯುತ್ತಿರುವುದು ನಮ್ಮೆಲ್ಲರಿಗೂ ಬಹಳ ಸಂತೋಷ. ಸಾಮಾಜಿಕ, ಧಾಮಿರ್ಕ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಬೇಕು. ಗ್ರಾಮದ ಶ್ರೇಯೋಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕಾರ್ಯವನ್ನು ಕೈಗೊಂಡರೆ ಎಲ್ಲಾ ಕಾರ್ಯಗಳು ಸುಗಮವಾಗಿ ಈಡೇರುತ್ತವೆ. ಸುೇತ್ರ ಬಳಗನೂರು ಗ್ರಾಮವು ಮಾದರಿಯಾಗಿದೆ ಎಂದು ಹೇಳಿದರು.
ಸೊರಬ ತಾಲೂಕಿನ ಹಿರೇಮಾಗಡಿಯ ಶಿವಕುಮಾರ ಶ್ರೀಗಳು, ಮುರುಗರಾಜೇಂದ್ರ ಶ್ರೀಗಳು, ಚೆನ್ನಯ್ಯ ಶಾಂತನಮಠ, ಶಂಕರಗೌಡ ಕಾಶೀಗೌಡರ, ಶಿವಕುಮಾರ ಹಿರೇಮಠ, ಎಸ್. ಬಿ. ಚಟ್ರಿ, ಎಂ. ಎ.ಪಾಟೀಲ, ಪ್ರೊ. ಎಂ. ಬಿ. ಮಡಿವಾಳ ಹಲವರು ಇದ್ದರು.