

ಗದಗ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಿ. ಎಡ್. ಪ್ರಶಿಕ್ಷಣಾರ್ಥಿಗಳ 45 ದಿನಗಳ ನಿಕಟ ಸೇವಾ ಪೂರ್ವ ತರಬೇತಿ ಮುಕ್ತಾಯ ಸಮಾರಂಭವನ್ನು ಆಯೋಜಿಸಲಾಯಿತು. ಶಾಲೆಯ ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲೆಯ ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು ನಮ್ಮ ಪ್ರಶಿಕ್ಷಣಾರ್ಥಿಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರು ಉತ್ತಮವಾದ ಮಾರ್ಗದರ್ಶನ ಹಾಗೂ ಸಲಹೆ ಸೂಚನೆ ನೀಡಿದ್ದಾರೆ. ಇಲ್ಲಿಯ ಮಕ್ಕಳು ಕೂಡ ಅಭ್ಯಾಸದ ಜೊತೆ ಸಹಕಾರ ನೀಡಿದ್ದಾರೆ, ಹೀಗಾಗಿ ನಮ್ಮ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮವಾದ ತರಬೇತಿಯಾಗಿದೆ ಎಂದು ಹೇಳಿದರು. ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ಮಾತನಾಡಿ ಪ್ರಶಿಕ್ಷಣಾರ್ಥಿಗಳು ತಮ್ಮ ಬಿ. ಎಡ್ ಅಭ್ಯಾಸದ ಜೊತೆ TET ಮತ್ತು CET ಕುರಿತು ಅಭ್ಯಾಸವನ್ನು ಕೂಡ ಕೈಗೊಂಡು ತಮ್ಮ ಮುಂದಿನ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕೆಂದು ಆಶಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ನಮ್ಮ ಬಿ. ಎಡ್. ಪ್ರಶಿಕ್ಷಣಾರ್ಥಿಗಳಿಂದ 45 ದಿನಗಳ ಕಾಲ ನಮ್ಮ ಮಕ್ಕಳಿಗೆ ಉತ್ತಮ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಕೈಗೊಂಡು ಕಲಿಕಾ ಬಲವರ್ಧನೆಗೆ ಶಕ್ತಿ ತುಂಬಿದ್ದಾರೆ ಎಂದರು.
ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ಶ್ವೇತ ಮೇಲಗಿರಿ, ವಿದ್ಯಾರ್ಥಿಗಳಾದ ಕೆ. ಎನ್. ಕಾವ್ಯಶ್ರೀ, ಫಾತಿಮಾ ಜೂನೈರಾ ಸಂಗಮ್ಕರ್ ಹಾಗೂ ಧೀರಜ್ ಪಾಟೀಲ್ ರವರು ಪ್ರಶಿಕ್ಷಣಾರ್ಥಿಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ವಿಡಿಎಸ್ ಶ್ರೀಮತಿ ಎಂ. ಭೀ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಶ್ರೀಮತಿ ಪದ್ಮಾವತಿ ಬಳ್ಳಾರಿ, ಶಾಹಿತಾಂಜ್ ಮನ್ನೂರ, ಅಶ್ವಿನಿ ಜೋಶಿ ಹಾಗೂ ಅನ್ನಪೂರ್ಣ ಹೊನ್ನಣ್ಣವರು ತಮ್ಮ ಸೇವಾ ತರಬೇತಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು ಹಾಗೂ ಶಿಕ್ಷಕಿಯರಾದ ಗಾಯತ್ರಿ ಅಸುಂಡಿ ರವರು ಪ್ರಶಿಕ್ಷಣಾರ್ಥಿಗಳ ಕುರಿತು ರಾಗವಾಗಿ ಅಭಿನಂದನಾ ಗೀತೆಯನ್ನು ಹಾಡಿದರು.
ಶಿಕ್ಷಕಿಯರಾದ ಸಭಾ ಉಮಚಗಿ ನಿರೂಪಿಸಿದರು, ವೀಣಾ ಹುಬ್ಬಳ್ಳಿ ಸ್ವಾಗತಿಸಿದರು, ಅಂಜುಮ್ ಭಾನು ತಹಶೀಲ್ದಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಮಹನೀಯರು, ಸಮಸ್ತ ಶಿಕ್ಷಕ/ಕಿಯರು, ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.