ರಾಷ್ಟ್ರೀಯ ಶಾಲಾಕ್ಯ ತಂತ್ರ ಪ್ರಶಸ್ತಿ

03GDG05
Published on

ಗದಗ: ಭಾರತೀಯ ಶಾಲಾಕ್ಯ ತಂತ್ರ ಅಸೋಸಿಯೇಷನ್​ ವತಿಯಿಂದ ಪ್ರತಿ ವರ್ಷ ನೀಡುವ ರಾಷ್ಟ್ರೀಯ ಮಟ್ಟದ "ಅತ್ಯುತ್ತಮ ಶಾಲಾಕ್ಯ 2024' ಪ್ರಶಸ್ತಿಯನ್ನು ಗದಗಿನ ಡಾ. ವೀರಯ್ಯ ಆರ್​ ಹಿರೇಮಠ ರವರಿಗೆ ನೀಡಲಾಗಿದೆ. ಕೊಪ್ಪಳದ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದಿಕ್​ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡೀನ್​ ಹಾಗೂ ಶಾಲಾಕ್ಯತಂತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಕ್ಯತಂತ್ರ ಕ್ಷೇತ್ರಕ್ಕೆ ವೈದ್ಯಕಿಯ ಸೇವೆ, ಶಿಕ್ಷಣ ಸೇವೆ, ಚಿಕಿತ್ಸಾ ವಿಧಾನಗಳಲ್ಲಿ ಅನ್ವೇಷಣೆಯಲ್ಲಿ ಅವರ ಸಾಧನೆ ಗಮನಿಸಿ ಪ್ರಶಸ್ತಿಯನ್ನು ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net