ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ೬ನೇ ಪುಣ್ಯಸ್ಮರಣೆ

WhatsApp Image 2024-10-15 at 1.20.25 PM
Published on

ಗದಗ: ಗದಗ ಜಿಲ್ಲಾ ಆಟೋ ಚಾಲಕರ ವ, ಮಾಲಕರ ಸಂಘ (ರಿ) ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಗರದ ಶ್ರೀ ತೋಂಟದಾರ್ಯ ಆಟೋಸ್ಟಾö್ಯಂಡ್, ಸ್ಟೇಷನ್ ರೋಡ ಗದಗದಲ್ಲಿ ಕನ್ನಡದ ಕುಲಗುರುಗಳು, ಭಾವೈಕ್ಯತೆಯ ಹರಿಕಾರರು, ತೃತೀಯ ಅಲ್ಲಮರೆಂದು ಖ್ಯಾತರಾದ ಪೂಜ್ಯ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ೬ನೇ ಪುಣ್ಯಸ್ಮರಣೆ ಪ್ರಯುಕ್ತ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೇಶಪ್ಪ ಮುಂಡರಗಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಆಟೋ ಚಾಲಕರ, ಮಾಲಕರ ಸಂಘದ ಅಧ್ಯಕ್ಷರಾದ ವಿಜಯ ಕಲ್ಮನಿ, ಹಿರಿಯ ಮಾರ್ಗದರ್ಶಕರಾದ ರಮೇಶ ಹರಿವಾಣ, ಎಚ್.ಆರ್. ಕೋಣಿಮನಿ, ಮಲ್ಲೇಶ ಆದೋನಿ, ಚಂದ್ರು ಮುಡರಗಿ, ಸಿದ್ದು ದ್ಯಾವಣಸಿ, ರಫೀಕ ಜಮಾಲಖಾನ, ರಫೀಕ ಲಕ್ಕುಂಡಿ, ಮಂಜುನಾಥ ಮುಂಡರಗಿ, ತಾಲೂಕ ಅಧ್ಯಕ್ಷರಾದ ಮಂಜುನಾಥ ಅಗಸಿಮನಿ, ಗಂಗಾಧರ ಬ್ಯಾಗೋಟಿ, ಹುಲಗೇಶ ಗೆಜ್ಜೆಳ್ಳಿ, ರಾಘವೇಂದ್ರ ಗೆಜ್ಜೆಳ್ಳಿ, ಮಲ್ಲಿಕಾರ್ಜುನ ಸಂಗಾಪೂರ, ಪ್ರವೀಣ ಯಳವತ್ತಿ, ಶಫಿ, ಲಕ್ಷö್ಮಣ ಕಟ್ಟಿಮನಿ, ಬಸವರಾಜ ಹುಲ್ಲೂರು, ಮೋಹನ ಚಲವಾದಿ, ಗೋಪಾಲ ಗೋರ್ಲೆ, ರಾಘವೇಂದ್ರ ಕಾಂಬಳೆ ಸೇರಿದಂತೆ ಆಟೋ ಚಾಲಕರು, ಮಾಲಕರು ಹಾಗೂ ಅಕ್ಕ-ಪಕ್ಕದ ಅಂಗಡಿಗಳ ಮಾಲೀಕರು ಮತ್ತು ಸದ್ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net