ವೃದ್ಧರು, ಗರ್ಭಿಣಿಯರು ಮಾಸ್ಕ್ ಹಾಕಿ : ಅಲ್ತಾಫ ಕಾಗದಗಾರ

IMG-20250527-WA0048
Published on
Gadag: ಅಸುಂಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅಲ್ತಾಫ ಕಾಗದಗಾರ ನೇತೃತ್ವದಲ್ಲಿ ಕೋವಿಡ್ ಸಭೆ ದಿನಾಂಕ 27-05-2025 ರಂದು ಗ್ರಾಮ ಪಂಚಾಯತ ಅಸುಂಡಿಯಲ್ಲಿ ಜರುಗಿತು  .ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿಗಳೊಂದಿಗೆ ನಡೆದ ಸಭೆಯಲ್ಲಿ ಅಸುಂಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅಲ್ತಾಫ ಕಾಗದಗಾರ ಮಾತನಾಡಿ  ಗರ್ಭಿಣಿಯರು ವೃದ್ದರು ಹೃದಯ ಸಂಬಂಧಿ ಕಾಯಿಲೆ ಇರುವವರು,ಶ್ವಾಸಕೋಶ ಸಮಸ್ಯೆ ಇದ್ದವರು ಮಾಸ್ಕ ಧರಿಸುವುದು ಒಳ್ಳೆಯದು ಎಂದರು.ಹಾಗೂ ಗರ್ಬಿಣಿ ಬಾಣಂತಿಯರ ಕಾಳಜಿ ಮಾಡಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದರು.ಪಾಲಕರು ಅನಾರೋಗ್ಯ ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ ಎಂದು ತಿಳಿಸಿ ಶಿಕ್ಷಕರಿಗೆ ಮಕ್ಕಳ ಆರೋಗ್ಯದ ಕಾಳಜಿ ಬಗ್ಗೆ ತಿಳಿಸಿದರು. ಎಲ್ಲರ ಸಹಕಾರದಿಂದ ಕೋವಿಡ್ ಎದುರಿಸಲು ಸಮರಸಿದ್ದತೆ ಮಾಡೋಣ ಎಂದರು.
ಗ್ರಾಮ ಪಂಚಾಯತ ಸದಸ್ಯರಾದ ಸೋಮರಡ್ಡಿ ರಾಮೇನಹಳ್ಳಿ ಇವರ ಸೂಚನೆ ಮೇರೆಗೆ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ ಸಜ್ಜನರ ಕೊರೋನಾಗೆ ಭಯಬೇಡ ಜಾಗೃತಿ ಮುಖ್ಯ ಎಂದರು
 ಈ ಹಿಂದೆಯೂ ಕೊರೋನಾ ಉಲ್ಬಣವಾದಾಗ ಗ್ರಾಮ ಪಂಚಾಯತ ಸದಸ್ಯರ ನೇತೃತ್ವದಲ್ಲಿ ಎಲ್ಲ ಇಲಾಖೆಯ ಸಹಕಾರದಿಂದ ಕೆಲಸ ಮಾಡಿದ್ದೇವೆ. ಯಾರೂ ಭಯಪಡುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸಿ.ಜ್ವರ ಕೆಮ್ಮು ನೆಗಡಿ ಹೆಚ್ಚು ದಿನ ಇದ್ದಲ್ಲಿ ಚಿಕಿತ್ಸೆ ಪಡೆಯಿರಿ .ಸ್ವಚ್ಚತೆ ಕಾಪಾಡಿ ,ಶೀತ ಸಂಬಂದಿ ಕಾಯಿಲೆ ಇದ್ದರೆ ನಿರ್ಲಕ್ಷಿಸಬೇಡಿ .ತಪಾಸಣೆ ಮಾಡಿಸಿ . ಜ್ವರವಿದ್ದರೆ ಅಲಕ್ಷ್ಯ ಬಿಟ್ಟು ತಪಾಸಣೆ ಮಾಡಿಸಿ ಎಂದರು ಹಾಗೂ ಮಳೆ ಆಗುತ್ತಿರುವುದರಿಂದ ಡೆಂಗ್ಯು ಚಿಕುನ್ಗುನ್ಯಾ ಹರಡುವಿಕೆ ತಡೆಯುವ ಕ್ರಮ ಹಾಗೂ ಕುಡಿಯುವ ನೀರಿನ ಕ್ಲೋರಿನೇಶನ್ ಮಾಡುವ ಮಹತ್ವ ತಿಳಿಸಿದರು ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಭೆ ಆಗುತ್ತಿದ್ದಂತೆ ತುರ್ತಾಗಿ ಗ್ರಾಮ ಮಟ್ಟದಲ್ಲಿ ಕೊರೋನಾ ಮುಂಜಾಗ್ರತಾ ಸಭೆಯಾಗುತ್ತಿದ್ದು ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದರು.
 ಹೋಮಿಯೋಪತಿ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ|| ಸಂಜೀವ ನಾರಪ್ಪನವರ ಮಾತನಾಡಿ ಈ ಹಿಂದೆಯೂ ಕೊರೋನಾ ಹೆಚ್ಚಾದಾಗ ಗ್ರಾಮ ಪಂಚಾಯತಿ ಮತ್ತು ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಎದುರಿಸಿ ಗೆದ್ದಿದ್ದೇವೆ .ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷದಿಗಳನ್ನೂ ಹಂಚಿದ್ದೆವು .ಯಶಸ್ವಿಯಾಗಿ ಲಿಸಿಕಾಕರಣ ಮಾಡಿದ್ದೆವು ಈಗಲೂ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎದರಿಸೋಣ ಎಂದರು .ಪೌಷ್ಟಿಕ ಆಹಾರ ಸೇವಿಸಿ ಮಲಗುವಾಗ ಒಂದು ಲೋಟ ಬಿಸಿನೀರು ಕುಡಿಯಿರಿ ಎಂದರು.ಹಾಗೂ ಮಳೆಗಾಲದಲ್ಲಿ ಡೆಂಗ್ಯು ಚಿಕನ್ ಗುನ್ಯಾ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಲು ಕಾರ್ಯಕ್ರಮ ಮಾಡೋಣ .ಜಾಥಾ ಮಾಡೋಣ ಎಂದರು.
ರಾಧಿಕಾ ಶಾಪೂರ ಸಮುದಾಯ ಆರೋಗ್ಯ ಅಧಿಕಾರಿಗಳು ವಯಸ್ಕರ ಬಿಸಿಜಿ ಬಗ್ಗೆ ಮಾಹಿತಿ ನೀಡಿದರು
ಪ್ರದೀಪ ಆಲೂರ ಕಾರ್ಯದರ್ಶಿಗಳು ಗ್ರಾಮ ಪಂಚಾಯತ ಅಸುಂಡಿ  ನಿರೂಪಿಸಿ.ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲರ ಸಲಹೆ ಪಡೆದು ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಾಯಿತು. ಸೋಮರಡ್ಡಿ ರಾಮೇನಹಳ್ಳಿ ಗ್ರಾಮ ಪಂಚಾಯತ  ಸದಸ್ಯರು ಯಲ್ಲರಡ್ಡಿ ಬಸವರಡ್ಡಿಯವರ ಸದಸ್ಯರು,ಮೈಲಪ್ಪ ಹೊಸಮನಿ ಸದಸ್ಯರು.ಮಂಜುಳಾ ಹೊಸಮನಿ ಅಸುಂಡಿ ಗ್ರಾಮ ಪಂಚಾಯತ PDO.ಮಲ್ಲಸಮುದ್ರ ಮತ್ತು ಅಸುಂಡಿ ಗ್ರಾಮದ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯತ ಸಿಬ್ಬಂದಿಗಳು, ಶಂಕ್ರಮ್ಮ ನೀರಲಗಿ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net