ರಾಷ್ಟ್ರಧರ್ಮ, ಪಾಂಚಜನ್ಯ ಸ್ವದೇಶಿ ಪತ್ರಿಕೆ ಹುಟ್ಟು ಹಾಕಿದವರು ಪಂಡಿತ ದೀನ ದಯಾಳ - ಡಾ. ವಿ. ಟಿ. ನಾಯಕ

Oplus_131072
Oplus_131072
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ಆವರಣದಲ್ಲಿ ಶುಕ್ರವಾರ ಪಂಡಿತ ದೀನ ದಯಾಳ ಉಪಾಧ್ಯಾಯರವರ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದೀನ ದಯಾಳ ಭಾವಚಿತ್ರಕ್ಕೆ ಮಹಾವಿದ್ಯಾಲಯದ ಉಪ ಪ್ರಾಚಾರ್ಯರ ಡಾ. ವಿ. ಟಿ. ನಾಯಕ ಪುಷ್ಪಾರ್ಪಣೆ ಮಾಡಿ ಮಾತನಾಡಿ, ದೀನ ದಯಾಳರು ಶ್ರೇಷ್ಠ ಅರ್ಥಶಾಸ್ತ್ರಜ್ಞ. ರಾಷ್ಟ್ರಧರ್ಮ ಪಂಚ್ಯಾಜನ್ಯ ಸ್ವದೇಶಿ ಪತ್ರಿಕೆಗಳನ್ನು ಹುಟ್ಟುಹಾಕಿದವರು. ಸಾಮ್ರಾಟ ಚಂದ್ರಗುಪ್ತ ಜಗದ್ಗುರು ಶಂಕರಾಚಾರ್ಯ ಸೇರಿದಂತೆ ನಾಟಕಗಳನ್ನು ಬರೆದಿದ್ದಾರೆ. ಅನೇಕ ಪ್ರಬಂಧಗಳನ್ನು ಈ ಜಗತ್ತಿಗೆ ನೀಡಿದ್ದಾರೆ. ಶ್ರೇಷ್ಠ ಮಹಾತ್ಮರ ಜೀವನ ವಿಚಾರಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವೀರೇಂದ್ರ ಪಾಟೀಲ ಉಪನ್ಯಾಸ ನೀಡಿ, ಎಂಟು ವರ್ಷದ ಪ್ರಾಯದಲ್ಲಿ ತಂದೆ ತಾಯಿಯನ್ನು ದೀನ ದಯಾಳರು ಕಳೆದುಕೊಂಡರು. ಅನಾಥರಾದ ದೀನ ದಯಾಳರು ಸೋದರ ಮಾವನ ಸಹಾಯದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ರಾಜಸ್ಥಾನದ ಪಿಲಾನಿ ಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಪೂರೈಸಿ, ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದರು ಎಂದು ವಿವರಿಸಿದರು.

ಮೇರಾ ಯುವ ಭಾರತ ಮುಖ್ಯಸ್ಥ ರವಿ ಹೊಂಬಾಳಿ ಮಾತನಾಡಿ, ತಾವು ಬೆಳೆಯುವ ಜೊತೆಗೆ ಇತರರನ್ನು ಬೆಳಸುವ ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಉಪಾಧ್ಯಾಯರು ಸರಳ ಜೀವಿ ಆಗಿದ್ದರು. ದೀನರ ಬಗ್ಗೆ ದಯೆ, ಕಾಳಜಿ ಹೊಂದಿ ಅವರ ಏಳಿಗೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟರು. ಭಾರತೀಯ ಪರಂಪರೆಯ ಮೂಲತತ್ವವನ್ನು ಜನರಿಗೆ ತಿಳಿಸಲು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಪತ್ರಿಕೆಗಳನ್ನು ಹುಟ್ಟುಹಾಕಿದರು. ಪಂಡಿತ್​ ದೀನದಯಾಳರ ಆದರ್ಶ ಜೀವನ, ತಾತ್ವಿಕ ಚಿಂತನೆ, ಉದಾರ ವಿಚಾರಧಾರೆಗಳನ್ನು ಇಂದಿನ ಯುವಪೀಳೆಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರೊ. ಬಿ. ಪಿ. ಜೈನರ, ಹನುಮಂತ ಹುಲ್ಲೂರು ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net