

Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿಶ್ವನಾಥ್ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ "ಸ್ವಚ್ಛ ಹಿ ಸೇವಾ" ಕಾರ್ಯಕ್ರಮದ ಅಡಿಯಲ್ಲಿ ಸಫಾಯಿ ಮಿತ್ರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗದಗ ಬೆಟಗೇರಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಎನ್ಎಸ್ಎಸ್ ಘಟಕದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ಸ್ವಾತಂತ್ರ್ಯ ಮಾತ್ರವಲ್ಲದೆ ಸ್ವಚ್ಛತೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನ ಕಂಡಿದ್ದರು ಅವರು ಕಂಡಂತಹ ಕನಸನ್ನ ನನಸಾಗಿಸುವ ನಿಟ್ಟಿನಲ್ಲಿ ನಮ್ಮ ಪರಿಸರದ ಸ್ವಚ್ಛತೆಗೆ ನಾವೆಲ್ಲರೂ ಮುಂದಾಗಬೇಕೆಂದು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಈ ಒಂದು ಯೋಜನೆಯನ್ನ ದೇಶದೆಲ್ಲಡೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ ಹಮ್ಮಿಕೊಂಡಿದ್ದಾರೆ. ಈಗಾಗಲೇ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮೋ ರವರು ಸೆಪ್ಟೆಂಬರ್ 19ರಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಸಫಾಯಿ ಮಿತ್ರ ಸಮ್ಮೇಳನದಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಈ ಜಾಗೃತಿಯ ಮುಖ್ಯ ಉದ್ದೇಶ ಸ್ವಚ್ಛತೆ ಚಟುವಟಿಕೆಗಳಲ್ಲಿ ಜಾಗೃತಿ ಮೂಡಿಸುವದು ಮತ್ತು ಸಾರ್ವಜನಿಕರು ಭಾಗವಹಿಸುವುದಕ್ಕೆ ಹೆಚ್ಚಿಸುವದು ಈ ಅಭಿಯಾನದ ಗುರಿಯಾಗಿದೆ ಇದು ದೇಶದ ಅತ್ಯಂತ ಸವಾಲಿನ ಮತ್ತು ನಿರ್ಲಕ್ಷಿತ ತ್ಯಾಜ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಸ್ವಚ್ಛತಾ ಅಭಿಯಾನಗಳ ಮೇಲೆ ಗಮನಹರಿಸುತ್ತದೆ ಇದು ನೈರ್ಮಲ್ಯ ಕಾರ್ಮಿಕರ ಕೊಡುಗೆಗಳನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ.
ಪ್ರತಿದಿನ ನಾವು ಏಳುವ ಮೊದಲೇ ನಮ್ಮ ನಗರಸಭೆಯ ಪೌರಕಾರ್ಮಿಕರು ನಮ್ಮ ಮನೆ ಮನೆಗೆ ಬಾಗಿಲು ಬಳಿ ಬಂದು ನಮ್ಮ ಮನೆಯ ಕಸವನ್ನ ತಮ್ಮ ವಾಹನದಲ್ಲಿ ಹಾಕುವ ಮೂಲಕ ನಮ್ಮ ಓಣಿಗಳನ್ನ ನಮ್ಮ ಮನೆಯ ಪರಿಸರ ಸುತ್ತ ಮುತ್ತಲಿನ ಸುರಕ್ಷಿತವಾಗಿಡಲು ಅವರ ಪಾತ್ರ ದೊಡ್ಡದು. ಇಂದು ನಮ್ಮ ಅವಳಿ ನಗರ ಇಷ್ಟು ಶುಚಿಯಾಗಿಡಲು ಬಹುದೊಡ್ಡ ಪಾತ್ರ ಈ ಸಿಪಾಯಿ ಮಿತ್ರರದು ಹೀಗಾಗಿ ನಮ್ಮ ಹಾಗೂ ನಮ್ಮ ಪರಿಸರವನ್ನ ಸೂಚಿಯಾಗಿಡಲು ಶ್ರಮಿಸುತ್ತಿರುವ ಸಫಾಯಿ ಮಿತ್ರರನ್ನ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದಿಂದ ಅವರು ಎಲ್ಲಿ ಕಾರ್ಯನಿರ್ವಹಿಸುತ್ತಾರೋ ಅಲ್ಲಿ ಹೋಗಿ ಅವರನ್ನು ಗೌರವಿಸಿತು ಸನ್ಮಾನ ಸ್ವೀಕರಿಸಿದ ಪೌರಕಾರ್ಮಿಕರು ಬಹಳ ಮೆಚ್ಚುಗೆ ಮಾತುಗಳ ನಾಡುತ್ತಾ ಈ ಒಂದು ಸ್ವಚ್ಛ ಹಿ ಸೇವಾ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸಾರ್ವಜನಿಕರು ಕೈಜೋಡಿಸಿದರೆ ನಮ್ಮ ನಗರವನ್ನು ಅಚ್ಚುಕಟ್ಟಾಗಿಡಬಹುದು ಹಾಗೂ ನಾಯಕರು ಕಂಡ ಕನಸುಗಳನ್ನು ಯಶಸ್ವಿಗೊಳಿಸಬಹುದು ಎಂದು ತಮ್ಮ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಾಹುಬಲಿ ಪಿ ಜೈನರವರು ಮಾತನಾಡಿ ಎನ್ ಎಸ್ ಎಸ್ ಘಟಕದಿಂದ ಈ ಒಂದು ಅಭಿಯಾನದಡಿಯಲ್ಲಿ ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದು ಮನೆಯ ಹಂತದಲ್ಲಿಯೇ ಹಸಿ ಕಸ ಒಣ ಕಸವನ್ನು ಬೇರ್ಪಡಿಸುವ ಕುರಿತು ಮನೆ ಮನೆಗೆ ಸ್ವಯಂಸೇವಕ ಸೇವಕಿಯರು ಹೋಗಿ ಜಾಗೃತಿ ಮೂಡಿಸುವುದು, ಐತಿಹಾಸಿಕ ದೇವಸ್ಥಾನಗಳ ಸ್ವಚ್ಛತೆ ಬಸ್ ನಿಲ್ದಾಣ, ಕ್ರೀಡಾಂಗಣಗಳು, ಆರೋಗ್ಯ ಇಲಾಖೆ ಜಿಲ್ಲಾ ಆಸ್ಪತ್ರೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಜಲ ಶಕ್ತಿಯ ಬಗ್ಗೆ ಮಾಹಿತಿಯನ್ನು ನೀಡುವ
ಅನೇಕ ಯೋಜನೆಗಳನ್ನು ಎನ್ ಎಸ್ ಎಸ್ ಘಟಕದ ಘಟಕವು ಹಮ್ಮಿಕೊಂಡಿದೆ. ಕಾರಣ ಎಲ್ಲೆಡೆ ಸದೃಢ ಸ್ವಚ್ಛತೆ ಸ್ಥಾಪಿಸಿ ಸ್ವಚ್ಛ ಸುಂದರ ಸದೃಢ ಗ್ರಾಮಗಳನ್ನ ರೂಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ ಈ ನಿಟ್ಟಿನಲ್ಲಿ ಭಾರತದ ಜವಾಬ್ದಾರಿತವಾದ ಪ್ರಜೆಗಳಾದ ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನ ಸೂಚಿಯಾಗಿಡುವುದರೊಂದಿಗೆ ಇತರರಿಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಇದು ನಮ್ಮ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವಾಕ್ಯವಾಗಿದೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು ಕಾರ್ಯಕ್ರಮದಲ್ಲಿ ಶ್ರೀ ರವಿ ಹೊಸೂರು, ಶ್ರೀ ಶರಣು ದೊಡ್ಡೋರು, ಶ್ರೀ ಸುರೇಶ್ ಬಳೆಗಾರ್. ಸ್ವಯಂಸೇವಕರಾದ ಮನೋಜ್ ದಲಬಂಜನ್ ಶಿವಯೋಗಿ ಗಡ್ಡದ್ಮಠ ಆದರ್ಶ್ ಅಕ್ಕಿ, ಜನಕ ರೆಡ್ಡಿ ಎಚ್. ಕುಮಾರ್ ಅಭಿಷೇಕ್ ಕುಮಾರ್ ಸುನಿಲ್ ಹಾಗೂ ಗದಗ ಬೆಟಗೇರಿ ನಗರಸಭೆಯ ಪೌರಕಾರ್ಮಿಕರು ಸ್ವಯಂಸೇವಕ ಸೇವಕೀಯರು ಈ ಒಂದು ಸಫಾಯಿ ಮಿತ್ರ- ಸನ್ಮಾನ್ ಅಭಿಯಾನದಲ್ಲಿ ಭಾಗವಹಿಸಿದ್ದರು.