ನಾಯಕರಾಗಲು ಬಯಸುವವರು ಉತ್ತಮ ನಾಯಕತ್ವ ಗುಣ ಇರುವವರೊಂದಿಗೆ ಬೆಳೆಯಬೇಕು: ಬಿ.ಎಸ್ ನೇಮಗೌಡರ್

Oplus_131072
Oplus_131072
Published on
Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಎನ್.ಎಸ್.ಎಸ್ ಕೋಶನ್ ಹಾಗೂ ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ಪದವಿ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಶಿಬಿರದ ಐದನೆಯನೇ ದಿನದ ವಿಶೇಷ  ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಮಾನ್ಯ ಶ್ರೀ ಬಿ.ಎಸ್ ನೇಮಗೌಡರವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಯಂ ಸೇವಕ ಸೇವಕಿಯರನ್ನು ಉದ್ದೇಶಿಸಿ ಮಾತನಾಡಿ ಈ ಜಗತ್ತಿನಲ್ಲಿ ಅನೇಕರು ನಾಯಕರಾಗಲು ಬಯಸುತ್ತಾರೆ ಹೀಗಿದ್ದಾಗ ನಾಯಕರಾಗುವವರು ಮೊದಲು ನಾಯಕತ್ವ ಗುಣ ಇರುವ ವ್ಯಕ್ತಿಗಳೊಂದಿಗೆ ಬೆರೆಯಬೇಕು ನಾಯಕತ್ವ ಗುಣ ಇದು ಒಂದೇ ದಿನಕ್ಕೆ ಬರುವುದಲ್ಲ ಅದು ಪರಿಶ್ರಮದ ಮೂಲಕ ಬರುವ ಒಂದು ಚಟುವಟಿಕೆಯಾಗಿದ್ದು  ಒಂದು ನಾಯಕತ್ವ ಗುಣಕ್ಕೆ ಸರಿಯಾದ ವ್ಯಕ್ತಿಗಳಿಂದ ಮಾರ್ಗದರ್ಶನ ಬೇಕು ಅದರೊಂದಿಗೆ ಸುತ್ತಮುತ್ತಲಿನ ಪರಿಸರವೂ ಕೂಡ ಸಮಾನವಾಗಿರಬೇಕು ಅಂದರೆ ಮಾತ್ರ ನಾಯಕತ್ವ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬಹುದು.
  ಮಹಾತ್ಮ ಗಾಂಧಿ ಲಾಲ್,  ಬಹದ್ದೂರ್ ಶಾಸ್ತ್ರಿ ಹೀಗೆ ಅನೇಕ ನಾಯಕರುಗಳು ನಮಗೆ ರೋಲ್ ಮಾಡೆಲ್ ಗಳು ಅವರು ತಮ್ಮ ತ್ಯಾಗ ಬಲಿದಾನಗಳ ಮೂಲಕ ಈ ಜಗತ್ತಿಗೆ ನಾಯಕರಾಗಿ ಹೊರಹೊಮ್ಮಿದ್ದಾರೆ ಕಾರಣ ದೈಹಿಕ ಮಾನಸಿಕ ಸಾಮಾಜಿಕವಾಗಿ ಸದೃಢರಾಗಿರಬೇಕು ಹಾಗೆ ಸಮಾಜದ ಜನರೊಂದಿಗೆ ಸಮಾನವಾಗಿ ಬೆರೆತರೆ ಮಾತ್ರ ನಾಯಕರಾಗಲು ಸಾಧ್ಯ ನಾಯಕನಾದವನು ಯಾರೇ ಏನೇ ಕೇಳಿದರು ಉತ್ತರಿಸುವ ಗುಣ ಆ ವ್ಯಕ್ತಿಯಲ್ಲಿ ಬೆಳೆಸಿಕೊಳ್ಳಬೇಕು.  ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಸ್ಪಂದಿಸಿ ಒಳಿತನ್ನು ಬಯಸುವವನೇ ಉತ್ತಮ ನಾಯಕ  ಜೀವನದಿಲಿ ಬರುವ ಅನೇಕ ಸವಾಲುಗಳನ್ನು ಸರಿ ತಪ್ಪುಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವವನೇ ನಾಯಕ ಹೀಗಾಗಿ ನಮ್ಮ ವಿದ್ಯಾರ್ಥಿ ಜೀವನದಿಂದಲೇ ಶಿಸ್ತು ಸೇವಾ ಮನೋಭಾವ ರೂಟಿಸಿಕೊಂಡರೆ ಮಾತ್ರ ನಾಯಕರಾಗಿ ಪರಹೊಮ್ಮಬಹುದು ಈ ಒಂದು ಶಿಬಿರದಲ್ಲಿ ಅನೇಕ ಯುವಕರಿರುವುದರಿಂದ ಡ್ರಗ್ಸ್ ಬಗ್ಗೆ ಸ್ವಲ್ಪ ಜಾಗೃತಿ ಇರಲಿ ಅದರೊಂದಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಹೀಗೆ ಅನೇಕ ವಿಚಾರಗಳನ್ನು ತಮ್ಮ ಉದ್ಘಾಟನೆ ನುಡಿಗಳಲ್ಲಿ ಹಂಚಿಕೊಂಡರು
      ವೇದಿಕೆ ಮೇಲೆ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ ಪ್ರೊ.ಪ್ರವೀಣ್ ಚಪ್ಪರಮನಿ ಪ್ರೊ. ಶಿವಾನಂದ್ ಕೊರವರ್, ಪ್ರೊ ಸುಲೇಮಾನ್ ನದಾಫ್ ಡಾ. ಹಿರೇಮಠ್, ಪ್ರೊ ಮಂಜುಳಾ ಹೊಂಬಾಳಿ ಡಾ. ದಳವಾಯಿಸ್ವಯಂ ಸೇವಕ ಸೇವಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net