ಕಾರ್ಯ ಮೂಲಕ ಹೊಸ ವರ್ಷ ಬರಮಾಡಿಕೊಂಡ ಕಾಮರ್ಸ್ ಕಾಲೇಜ್ ಎನ್ ಎಸ್ ಎಸ್ ಘಟಕ.

Oplus_131072
Oplus_131072
Published on
Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿಶ್ವನಾಥ್ ರಾಮಚಂದ್ರಪ್ಪ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ.ಕ್ಯೂ ಏ ಸಿ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶಿಷ್ಟ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೊಸ ವರ್ಷ ಬರಮಾಡಿಕೊಳ್ಳಲು ಅನೇಕ ಯುವಕರು ಯುವತಿರು ಸಾರ್ವಜನಿಕರು ಮೋಜು ಮಸ್ತಿಯೊಂದಿಗೆ ಕೇಕ್ ಕಟ್ ಮಾಡುವುದರೊಂದಿಗೆ ಬೇರೆ ಬೇರೆ ದುಶ್ಚಟಗಳ  ಮೂಲಕ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಹಾಳು ಮಾಡಿಕೊಂಡು ಪರಸ್ಪರ ಹೊಡೆದಾಡಿಕೊಂಡು  ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತಾರೆ ಇದು ನಮ್ಮ ಸಂಸ್ಕೃತಿಯಲ್ಲ ಹೊಸ ವರ್ಷವೆಂದರೆ ಒಳ್ಳೆಯ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಕೈಗೊಂಡ ಕಾರ್ಯಗಳಲ್ಲಿ ಸಂತೋಷ - ತೃಪ್ತಿಯನ್ನು  ಪಡುವುದು ಹೊಸ ವರ್ಷ
ಅಂತಹ ಒಂದು ಕಾರ್ಯವನ್ನ ಗದುಗಿನ ಕಾಮರ್ಸ್ ಕಾಲೇಜ್ ಎನ್ಎಸ್ಎಸ್ ಘಟಕ ಗದುಗಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ತ್ರಿಕುಟೇಶ್ವರ ದೇವಾಲಯದ ಆವರಣ ಮತ್ತು ದೇವಾಲಯ ಸುತ್ತು ಮುತ್ತಲು ಬೆಳೆದಿರುವ ದಟ್ಟವಾದ ಕಸವನ್ನು ಸ್ವಚ್ಛಗೊಳಿಸುವ ಮೂಲಕ ವಿನೂತನ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ ಶ್ರೀ ವೀರನಾರಾಯಣ ದೇವಾಲಯ ಹಾಗೂ ತ್ರಿಕುಟೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು ಹಾಗೂ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಕುಶಾಲ್ ಗೊಡಖಿಂಡಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆರಂಭದಲ್ಲಿ ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿರುವ ಎನ್ಎಸ್ಎಸ್ ಸ್ವಯಂಸೇವಕ ಸೇವಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ನಮ್ಮ ದೇಶ ವಿವಿಧ ವೈಶಿಷ್ಟತೆ ಸಂಸ್ಕೃತಿಯಿಂದ ಕೂಡಿದೆ ಅನೇಕ ಐತಿಹಾಸಿಕ ದೇವಾಲಯಗಳು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತವೆ ಅಂತಹ ಒಂದು ದೇವಾಲಯಗಳ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗುತ್ತಿರುವುದು ನನಗೆ ವೈಯಕ್ತಿಕವಾಗಿ ತುಂಬಾ ಸಂತಸ ತಂದಿದೆ. ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಗದಗ ಜಿಲ್ಲೆಯ ಐತಿಹಾಸಿಕ ದೇವಾಲಯಗಳನ್ನು ಉಳಿಸುವ ಬೆಳೆಸುವ ಅದರೊಂದಿಗೆ ಸ್ವಚ್ಛಗೊಳಿಸುವ ಮೂಲಕ ಮುಂಬರುವ ಸಾರ್ವಜನಿಕರಿಗೆ ನಮ್ಮ ಶಿಲ್ಪಕಲೆ  ಸಾಹಿತ್ಯವನ್ನು ಉಳಿಸುವಂತಹ ಕೆಲಸ ತಮ್ಮಿಂದಾಗಲಿ ಎಂದು ತಂಡಕ್ಕೆ ಶುಭವನ್ನು ಹಾರೈಸಿದರು.
     ಆದರ್ಶ ಶಿಕ್ಷಣ ಸಂಸ್ಥೆಯ ಚೇರ್ಮನ್ನರು ಹಾಗೂ ಶ್ರೀ ವೀರನಾರಾಯಣ ಮತ್ತು ತ್ರಿಕಟೇಶ್ವರ ದೇವಸ್ಥಾನದ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ಆನಂದ್ ಪೋತ್ನಿಸ್ ರವರು ಮಾತನಾಡಿ  ನಮ್ಮ ಸಂಸ್ಥೆಯ ಏನ್ ಎಸ್ ಎಸ್ ಘಟಕವು  ಒಂದು ಒಳ್ಳೆಯ ಸಮಾಜಮುಖಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ಘಟಕಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಅದರಲ್ಲೂ ಹೊಸ ವರ್ಷವನ್ನು ವಿನೂತನವಾಗಿ ಬರಮಾಡಿಕೊಂಡ ಸ್ವಯಂಸೇವಕ ಸೇವಕಿಯರಿಗೆ ಅಭಿನಂದನೆಗಳನ್ನ ತಿಳಿಸಿದರು. ಗದಗ ಜಿಲ್ಲೆ ಕಲೆ, ಸಾಹಿತ್ಯ, ಸಂಗೀತ,ಶಿಲ್ಪಕಲೆಯಲ್ಲಿ ಬಹಳಷ್ಟು ಶ್ರೀಮಂತಿಕೆಯನ್ನು ಹೊಂದಿದಂತ ಜಿಲ್ಲೆ ಈಗಾಗಲೇ ನಮ್ಮ ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಡಾ. ಎಚ್ ಕೆ ಪಾಟೀಲ ಅವರ  ಶ್ರಮದಿಂದ ರಾಜ್ಯದ ಎಲ್ಲಾ ಪುರಾತನ ದೇವಾಲಯಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ ಅಂತಹ ಒಂದು ವಿನೂತನ ಕಾರ್ಯಕ್ಕೆ ನಮ್ಮ ಸಂಸ್ಥೆಯ ಎನ್ಎಸ್ಎಸ್ ವಿದ್ಯಾರ್ಥಿಗಳು ಸೇವೆಯನ್ನು ಸಲ್ಲಿಸುತ್ತಿರುವುದು ನನಗೆ ವೈಯಕ್ತಿಕವಾಗಿ ಸಂತೋಷ ತಂದಿದೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಎನ್ಎಸ್ಎಸ್ ವಿಭಾಗದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರವರು ಮಾತನಾಡಿ ಇವತ್ತಿನ ವಿದ್ಯಾರ್ಥಿಗಳಿಗೆ ಸಮಯ ಮತ್ತು ಶ್ರಮದ ಮಹತ್ವ ಬಹಳಷ್ಟು ಅಗತ್ಯವಾಗಿದೆ ಈಗಾಗಲೇ ದೇಶದ ಪ್ರಧಾನಿಗಳು ಒಂದು ಕರೆಯನ್ನ ನೀಡಿದ್ದಾರೆ ತಮ್ಮ ಸುತ್ತಮುತ್ತಲಿರುವ ಐತಿಹಾಸಿಕ ದೇವಾಲಯಗಳನ್ನು ಸ್ವಚ್ಛ ಮಾಡುವ ಮೂಲಕ ದೇಶದ ಗೌರವವನ್ನು ಕಾಪಾಡೋಣ ದೇಶವು ಪ್ರಸ್ತುತ 'ಸ್ವಚ್ಛತಾ ಹೇ ಸೇವಾ' ಅಭಿಯಾನದ ಅಡಿಯಲ್ಲಿ ಸ್ವಚ್ಛತಾಗಾಗಿ 'ಜನ ಆಂದೋಲನ' ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರಿಗೆ ಪೂರಕವಾಗುವಂತೆ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀ ತ್ರಿಕುಟೇಶ್ವರ ದೇವಾಲಯ ಆವರಣ ಹಾಗೂ ದೇವಾಲಯ ಮುಂಭಾಗದಲ್ಲಿರುವ ಕಲ್ಯಾಣಿಯನ್ನು ಸ್ವಚ್ಛಗೊಳಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಫೀಸ್ ಸೂಪರ್ ಡೆಂಟ್ ಶ್ರೀ ಪ್ರಾಣೇಶ್ ಬೆಳ್ಳಟ್ಟಿ ಶ್ರೀ ಆದಿತ್ಯ ಜೋಶಿ. ಹಿರಿಯ ಪತ್ರಕರ್ತರಾದ ಶ್ರೀ ಕೊಪ್ಪರ್ ಸರ್ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಎನ್ ಎಸ್ ಎಸ್ ಘಟಕದ 55  ಸ್ವಯಂಸೇವಕರು ಮತ್ತು ಶ್ರೀ ವೀರನಾರಾಯಣ ತ್ರಿಕೂಟೇಶ್ವರ ಟ್ರಸ್ಟ್ ನ ಪದಾಧಿಕಾರಿಗಳು ಈ  ಹೊಸ  ವರ್ಷದ ಸ್ವಚ್ಛತಾ ಆಂದೋಲನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net