Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲಿ ಕರ್ನಾಟಕ ವಿಶ್ವವಿದ್ಯಾಲಯ ಸಹಯೋಗದಲ್ಲಿ 2024 -25 ನೇ ಸಾಲಿನ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ನವಂಬರ್ 20 ಮತ್ತು 21 ರಂದು ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದು. ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಳಪಡುವ ಬಿ.ಕಾಂ, ಬಿ.ಎ, ಬಿ.ಎಸ್. ಸಿ, ಬಿ. ಬಿ .ಎ, ಬಿ.ಸಿ.ಎ, ಬಿ.ಎಡ್, ಬಿ.ಪಿ.ಎಡ್, ಯೋಗ- ಎಲ್ಲಾ ಪದವಿ ಮಹಾ ವಿದ್ಯಾಲಯಗಳು ಈ ಒಂದು ವಲಯ ಮಟ್ಟದ ಯುವಜನೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
ಯುವಜನೋತ್ಸವ ಸ್ಪರ್ಧಿಗಳ ಬಗ್ಗೆ ಮಹಾವಿದ್ಯಾಲಯದ ಪ್ರಾಚಾರ್ಯ ಕೆ ಗಿರಿರಾಜ ಕುಮಾರ್ ಅವರು ಮಾತನಾಡಿ ಒಟ್ಟು ಈ ಒಂದು ಯುವಜನೋತ್ಸವದಲ್ಲಿ 27 ವಿವಿಧ ವಿಭಾಗಗಳ ಸ್ಪರ್ಧೆಗಳು ಇದ್ದು ಒಟ್ಟು 23 ನಿರ್ಣಾಯಕರನ್ನು ಈಗಾಗಲೇ ನೇಮಕ ಮಾಡಿದ್ದು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಭವನದ ಮುಖ್ಯ ವೇದಿಕೆ ಹಾಗೂ ಉಳಿದ ಸ್ಪರ್ಧೆಗಳಿಗೆ ಸಂಬಂಧಿಸಿದ ಹಾಗೆ ಐದು ವೇದಿಕೆಗಳನ್ನ ನಿರ್ಮಿಸಿಕೊಳ್ಳಲಾಗಿದೆ. ಸಂಗೀತ ವಿಭಾಗ ಸ್ಪರ್ಧೆಗಳು ಈ ರೀತಿ ಇವೆ -
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ (ವೈಯಕ್ತಿಕ ಸ್ಪರ್ಧೆ), ಹಿಂದುಸ್ತಾನಿ ವಾದ್ಯ ಸಂಗೀತ- (ವೈಯಕ್ತಿಕ ಸ್ಪರ್ಧೆ), ಶಾಸ್ತ್ರೀಯ ವಾದ್ಯ ಸಂಗೀತ ( ವೈಯಕ್ತಿಕ ಸ್ಪರ್ಧೆ), ಸುಗಮ ಸಂಗೀತ (ವೈಯಕ್ತಿಕ ಸ್ಪರ್ಧೆ),ಪಶ್ಚಿಮಾತ್ಯ ಸಂಗೀತ (ವೈಯಕ್ತಿಕ ಸ್ಪರ್ಧೆ),ಸಮೂಹ ಗಾಯನ ಭಾರತೀಯ,ಸಮೂಹ ಗಾಯನ ಪಾಶ್ಚಿಮ, ಪಶ್ಚಿಮತ್ಯ ವಾದ್ಯ ಸಂಗೀತ (ವೈಯಕ್ತಿಕ ಸ್ಪರ್ಧೆ),ಕ್ವಿಜ್ ವಿಭಾಗಕ್ಕೆ ಸಂಬಂಧಿಸಿದ ಹಾಗೆ ತಂಡದಲ್ಲಿ ಒಂದು ಮಹಾವಿದ್ಯಾಲಯದಿಂದ ಮೂರು ವಿದ್ಯಾರ್ಥಿಗಳು ಭಾಗವಹಿಸಬಹುದು. ಭಾಷಣ ಸ್ಪರ್ಧೆ- ಒಂದು ಮಹಾವಿದ್ಯಾಲಯದಿಂದ ಒಬ್ಬರು ಭಾಗವಹಿಸಬಹುದು. ಚರ್ಚಾ ಸ್ಪರ್ಧೆ(ಡಿಬೇಟ್) ಒಂದು ಮಹಾವಿದ್ಯಾಲಯದಿಂದ ಇಬ್ಬರು ಭಾಗವಹಿಸಬಹುದು. ಚಿತ್ರಕಲೆ ಸ್ಪರ್ಧೆ ವಿಭಾಗಕ್ಕೆ ಸಂಬಂಧಿಸಿದ ಆನ್ ದ ಸ್ಪಾಟ್ ಪೇಂಟಿಂಗ್ ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು,ಕೊಲಾಜ್ , ಪೋಸ್ಟರ್ ಮೇಕಿಂಗ್, ಕ್ಲೇ ಮಾಡ್ಲಿಂಗ್, ಕಾರ್ಟೂನ್, ಸ್ಪೋರ್ಟ್ ಫೋಟೋಗ್ರಾಫಿ, ಇನ್ಸ್ಟಾಲೇಶನ್. ರಂಗೋಲಿ
ಮೆಹಂದಿ, ಶಾಸ್ತ್ರೀಯ ನೃತ್ಯ ಮಿಮಿಕ್ರಿ ಇವು ವೈಯಕ್ತಿಕ ಸ್ಪರ್ಧೆಗಳು.
ಸಮೂಹ ನೃತ್ಯ ಸ್ಪರ್ಧೆ ಏಕಾಂತ ನಾಟಕ , ಜನಪದ ವಾದ್ಯ ಮೇಳಗಳಿಗೆ, ಸ್ಕಿಟ್ ,ಮೈಮ - ಹೀಗೆ 27 ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ಚೇರ್ಮನ್ ಹಾಗೂ ಈ ಯುವಜನೋತ್ಸವದ ಚೇರ್ಮನರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ. ಬಿ.ಪಿ ಜೈನರ ಮಾತನಾಡಿ ಈ ಒಂದು ಯುವಜನೋತ್ಸವ ಕಾರ್ಯಕ್ರಮವನ್ನು ನಮ್ಮ ಮಹಾವಿದ್ಯಾಲಯಕ್ಕೆ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗ ಅಧಿಕಾರಿಗಳಾದ ಡಾ. ಎಸ್ ಕೆ ಪವಾರ್ ಅವರಿಗೆ ಅಭಿನಂದನೆಗಳ ತಿಳಿಸುತ್ತಾ
ಈ ಯುವಜೋತ್ಸವ ಕಾರ್ಯಕ್ರಮದಲ್ಲಿ ಮತ್ತೊಂದು ವಿನೂತನ ಕಾರ್ಯಕ್ರಮವೆಂದರೆ ಪ್ರತಿ ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ನಡೆದರು ಅಲ್ಲಿ ಒಬ್ಬ ಶಿಕ್ಷಕರು ಅದರ ಉಸ್ತುವಾರಿಯವನ್ನ ತೆಗೆದುಕೊಂಡು ಇಡೀ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ ಅಂತ ಕ್ರಿಯಾಶೀಲ ಒಬ್ಬ ಶಿಕ್ಷಕರನ್ನ ಸಚಿವರ ಸಮ್ಮುಖದಲ್ಲಿ ಗೌರವಿಸಬೇಕು ಎಂಬ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸನ್ಮಾನಕ್ಕೆ ಒಳಪಡುವ ಕ್ರಿಯಾಶೀಲ ಶಿಕ್ಷಕರ ತಮ್ಮ ಮಹಾವಿದ್ಯಾಲಯದ ತಂಡ ಕಡ್ಡಾಯವಾಗಿ ಈ ಯುವಜನೋತ್ಸವದಲ್ಲಿ ಭಾಗವಹಿಸಿರಬೇಕು ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ. ವಿ.ಟಿ ನಾಯ್ಕರ, ವಿವಿಧ ಸ್ಪರ್ಧೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಎಸ್ ಬಿ ಜಾದವ್, ಪ್ರೊ. ಸಲ್ಮಾ ಬೆಳಗಾಂ, ಪ್ರೊ. ಈಶ್ವರ್ ಯಾಗಲ್, ಡಾ. ಎಸ್ ಡಿ ಬಂಡಾರ್ಕರ್, ಪ್ರೊ. ಫಿರೋಜ್ ಖಾನ್, ಪ್ರೊ. ಮೋಹನ್ ಡಿ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಆಫೀಸ್ ಸಿಬ್ಬಂದಿ ವರ್ಗದವರು ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಈ ಒಂದು ಯುವಜನೋತ್ಸವದಲ್ಲಿ ಭಾಗವಹಿಸುವ ಸ್ಪರ್ದಾಳುಗಳು ಏನಾದರೂ ಸಮಸ್ಯೆಗಳಿದ್ದರೆ 9036541348 ಈ ದೂರವಾಣಿಗೆ ಸಂಪರ್ಕಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿ.