ವಾಣಿಜ್ಯ ಮಹಾವಿದ್ಯಾಲಯ ಎಎನ್ ಸ್ ಎಸ್ ಘಟಕ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ತಂಬಾಕು ಸೇವನೆ ದುಷ್ಪರಿಣಾಮಗಳು ಜಾಗೃತಿ ಅಭಿಯಾನ.
Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ತಾಲೂಕ ಆರೋಗ್ಯ ಇಲಾಖೆ ಹಾಗೂ ರೆಡ್ ರಿಬ್ಬನ್ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ಅಭಿಯಾನ 2.0 ಕಾರ್ಯಕ್ರಮದ ಅಡಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು ಹಾಗೂ ಜಾಗೃತಿ ಅಭಿಯಾನ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ ಸಸಿಗೆ ನೀರಿರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಯುವಜನತೆಯು ತಂಬಾಕನ್ನು ಬಳಕೆ ಮಾಡುವುದನ್ನು ನೀವೆಲ್ಲರೂ ಗಮನಿಸಿರುತ್ತೀರಿ. ಹೆಚ್ಚಿನ ಯುವಜನರು ತಂಬಾಕು ಬಳಕೆ ಮಾಡುವುದನ್ನು ಹೆಮ್ಮೆಯ ವಿಚಾರವೆಂದು ಭಾವಿಸುತ್ತಾರೆ, ಆದರೆ ಅದು ಅವರ ತಪ್ಪು ಕಲ್ಪನೆಯಾಗಿದೆ. ವಿಶೇಷವಾಗಿ ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಅಲ್ಲಿ ಸುಲಭವಾಗಿ ತಂಬಾಕು ಬಳಕೆಗೆ ಒಳಗಾಗಬಹುದು. ಹೆಚ್ಚಾಗಿ ಟಿ.ವಿ., ಚಲನಚಿತ್ರಗಳು, ಇಂಟರ್ನೆಟ್, ಜಾಹೀರಾತು ಮತ್ತು ಕೆಲವೊಮ್ಮೆ ಸ್ನೇಹಿತರಿಂದ ಪ್ರಭಾವಿತರಾಗುತ್ತಾರೆ. ಯುವಜನತೆ ಹೆಚ್ಚಾಗಿ ತಂಬಾಕು ಉತ್ಪನ್ನಗಳು ಕಡಿಮೆ ವೆಚ್ಚಕ್ಕೆ ಅಥವಾ ಉಚಿತವಾಗಿ ತಂಬಾಕು ಬಳಕೆಗೆ ಅವಕಾಶ ಸಿಕ್ಕಿದರೆ ಬಳಕೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಯುವ ಜನತೆಯು ತಮ್ಮ ಮನೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ತಂಬಾಕನ್ನು ಬಳಕೆ ಮಾಡುವುದನ್ನು ನೋಡಿ ಪ್ರೇರಿತರಾಗಿ ಬಳಕೆ ಮಾಡುವ ಸಾಧ್ಯತೆಯಿರುತ್ತದೆ. ಹೆಚ್ಚಿನ ಚಲನಚಿತ್ರಗಳಲ್ಲಿ ತಂಬಾಕು ಬಳಕೆಯ ಚಿತ್ರಣಗಳನ್ನು ತೋರಿಸುವುದರಿಂದ ಅದು ಯುವಜನತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲೂಬಹುದು ಎಂದು ವಿದ್ಯಾರ್ಥಿಗಳ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ತಾಲೂಕ ಆರೋಗ್ಯ ಇಲಾಖೆಯ ಮೇಲ್ವಿಚಾರಕರಾದ ಶ್ರೀ ಬಸವರಾಜ ಲಾಳಗಟ್ಟಿಯವರು ಮಾತನಾಡಿ ತಂಬಾಕು ಸೇವನೆಯು ಸಾಮಾನ್ಯವಾಗಿ ಹೃದಯ , ಯಕೃತ್ತು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ರೋಗಗಳಿಗೆ ಕಾರಣವಾಗುತ್ತದೆ . ಧೂಮಪಾನವು ಹಲವಾರು ಪರಿಸ್ಥಿತಿಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ, ಅವುಗಳೆಂದರೆ ನ್ಯುಮೋನಿಯಾ , ಹೃದಯಾಘಾತ , ಪಾರ್ಶ್ವವಾಯು , ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಎಂಫಿಸೆಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ ಸೇರಿದಂತೆ ಬಹು ಕ್ಯಾನ್ಸರ್ಗಳು ಇದು ಬಾಹ್ಯ ಅಪಧಮನಿಯ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗಿದೆ . ಒಬ್ಬ ವ್ಯಕ್ತಿಯು ಎಷ್ಟು ಬಾರಿ ಮತ್ತು ಎಷ್ಟು ವರ್ಷಗಳ ಕಾಲ ಧೂಮಪಾನ ಮಾಡುತ್ತಾನೆ ಎಂಬುದರ ಆಧಾರದ ಮೇಲೆ ಪರಿಣಾಮಗಳು ಬದಲಾಗುತ್ತವೆ. ಜೀವನದಲ್ಲಿ ಮುಂಚೆಯೇ ಧೂಮಪಾನ ಮಾಡುವುದು ಮತ್ತು ಟಾರ್ನಲ್ಲಿ ಹೆಚ್ಚಿನ ಸಿಗರೇಟ್ ಸೇದುವುದು ಈ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಸೆಕೆಂಡ್‌ಹ್ಯಾಂಡ್ ಹೊಗೆ ಎಂದು ಕರೆಯಲ್ಪಡುವ ಪರಿಸರ ತಂಬಾಕು ಹೊಗೆ, ಎಲ್ಲಾ ವಯಸ್ಸಿನ ಜನರಲ್ಲಿ ಹಾನಿಕಾರಕ ಆರೋಗ್ಯ ಪರಿಣಾಮಗಳನ್ನು ವ್ಯಕ್ತಪಡಿಸಿದೆ ಹೀಗೆ ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳನ್ನು ಹಂಚಿಕೊಂಡರು ಕಾರ್ಯಕ್ರಮದ ನಂತರ ಎನ್ಎಸ್ಎಸ್ ಘಟಕದಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ.ವಿ.ಟಿ ನಾಯ್ಕರ್, ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ, ಎನ್ ಎಸ್ ಎಸ್ ವಿಭಾಗದ ವಿದ್ಯಾರ್ಥಿ ಮುಖಂಡನಾದ ಕು ಜನಕ ರೆಡ್ಡಿ, ಆದರ್ಶ ಅಕ್ಕಿ, ಅಭಿಷೇಕ್ ಸ್ವಯಂ ಸೇವಕ ಸೇವಕಿಯರು ಈ ಒಂದು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.