

Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಜೀವದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಆದರ್ಶ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಶ್ರೀ ಉದಯ್ ಜಾಧವ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆದರ್ಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ ಆರ್ ಅಡವಿಯವರು ಸನ್ಮಾನಿಸಿ ಮಾತನಾಡಿ. ಉದಯ್ ಜಾದವ್ ಈ ವಿದ್ಯಾರ್ಥಿ 1989 ನಮ್ಮ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ಕುಮಾರ್ ಉದಯ್ ಜಾದವ್ ಮುಂಜಾನೆ ವಾಯು ವಿಹಾರಕ್ಕೆ ಹೋಗಿ ಮರಳಿ ಮನೆಗೆ ಬರುವ ಸಮಯದಲ್ಲಿ ಒಬ್ಬ ಮಹಿಳೆ ಭೀಷ್ಮ ಕೆರೆಗೆ ಹಾರಿದಾಕ್ಷಣಕ್ಕೆ ತನ್ನ ಜೀವದ ಹಂಗಿಲ್ಲದೇ ಮಹಿಳೆಯ ಜೀವ ಉಳಿಸಿ ಆಗುವ ಅನಾಹುತ ತಪ್ಪಿಸಿದ ನಿಜಕ್ಕೂ ನಮ್ಮ ಸಂಸ್ಥೆಗೆ ಒಂದು ಹೆಮ್ಮೆಯ ಸಂಗತಿ ಇಂಥ ಒಬ್ಬ ವಿದ್ಯಾರ್ಥಿಯನ್ನು ಸನ್ಮಾನಿಸುವುದು ತುಂಬಾ ಸಂತೋಷವೆನಿಸುತ್ತದೆ. ಜೀವದ ಹಂಗು ತೊರೆದು ಯುವತಿಯ ಪ್ರಾಣ ರಕ್ಷಿಸಿದ ಉದಯ್ ಜಾಧವ್ ಹಾಗೂ ಅವರ ಪರಿವಾರದ ಸದಸ್ಯರಿಗೆ ಅಭಿನಂದನೆ ನುಡಿಗಳನ್ನು ಹಂಚಿಕೊಂಡರು. ಉದಯ್ ಜಾದವ್ ಅವರೊಂದಿಗೆ ಅವರ ಅನೇಕ ಸ್ನೇಹ ಬಳಗ ಪರಿವಾರದ ಸದಸ್ಯರು ಈ ಒಂದು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ಸಂಸ್ಥೆಗೆ ಸಂತಸ ತಂದಿದೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ, ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಖಿಂಡಿ, ಪದವಿ ಮಹಾವಿದ್ಯಾಲಯದ ಉಪ- ಪ್ರಾಚಾರ್ಯರಾದ ಡಾ. ವಿ ಟಿ ನಾಯ್ಕರ್, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ರವಿ ಕುಲಕರ್ಣಿ, ವ್ಯವಹಾರ ಆಡಳಿತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಲಿಂಗರಾಜ ರಶ್ಮಿ, ಉದಯ್ ಜಾದವ್ ರವರ ಸ್ನೇಹ ಬಳಗ ಅಂಗ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಈ ಒಂದು ಅಭಿನಂದನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.