ಆದರ್ಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ಸೇವೆ ಅವಿಸ್ಮರಣೀಯ : ಪಿ. ಆರ್ ಅಡವಿ.

Oplus_131072
Oplus_131072
Published on

Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಮಹಾವಿದ್ಯಾಲಯದ ಆವರಣದಲ್ಲಿ ಸಂಸ್ಥೆಯ " ಸಂಸ್ಥಾಪಕರ ದಿನಾಚರಣೆ " ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.  ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ. ಪಿ. ಆರ್ ಅಡವಿರವರು  ಮಾತನಾಡಿ ಸಂಸ್ಥೆಗೆ ಅಡಿಪಾಯ ಹಾಕಿ ಸಂಸ್ಥೆಯನ್ನ ಕಟ್ಟಿ ಬೆಳೆಸಿದ ದಿ, ವಿ. ಆರ್ ಕುಷ್ಟಗಿ ದಿ, ಡಿ. ಎಸ್. ಕುರ್ತುಕೋಟಿ, ದಿ, ಎಲ್. ಎ ಪೋತ್ನಿಸ್ ಹೀಗೆ 33 ಮಹನೀಯರ ಬಗ್ಗೆ  ಎಳಿಹಳಿಯಾಗಿ ತಮ್ಮ ಮಾತುಗಳಲ್ಲಿ ಹಂಚಿಕೊಂಡರು. ಈ 33 ಮಹನೀಯರು ಕೀರ್ತಿ ಶೆಷರು ಯಾರು ನಮ್ಮೊಂದಿಗೆ ಇಲ್ಲ ಆದರೆ ಸಂಸ್ಥೆ ಹಂತ ಹಂತವಾಗಿ ಹೆಮ್ಮರವಾಗಿ ಬೆಳೆದು ನಿಲ್ಲಲು ಇವರು ಹಗಲಿ ಎರಡು ಶ್ರಮಿಸಿದ್ದಾರೆ. ತಮ್ಮ ಜ್ಞಾನದ ಮೂಲಕ ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿ ನಿವೃತ್ತಿಯ ನಂತರ ಸಂಸ್ಥೆಯ  ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಶ್ರೀ ಜೆ ಎಸ್  ಕೊರ್ಲಹಳ್ಳಿ ಸೇವೆಯನ್ನ ತಮ್ಮ ಮಾತುಗಳಲ್ಲಿ ಹಂಚಿಕೊಂಡರು. 1998 ರಲ್ಲಿ ವ್ಯವಹಾರ ಆಡಳಿತ ಮಹಾವಿದ್ಯಾಲಯ ಆರಂಭಿಸಿದಾಗ ಅನೇಕ ಮಹನೀಯರು  ಈ ವಿಭಾಗ ಬೆಳೆಯಲು ಸಹಕರಿಸಿದ್ದಾರೆ. ಸಂಸ್ಥೆಯ ಸಂಸ್ಥಾಪಕ  ಅಧ್ಯಕ್ಷರಾದ ದಿವಂಗತ ಶ್ರೀ ವಿ ಆರ್ ಕುಷ್ಟಗಿ ಹಾಗೂ ಸಂಸ್ಥೆಯ ಆರಂಭದ ಪ್ರಾಚಾರ್ಯರಾದ ದಿವಂಗತ ಶ್ರೀ ಡಿ.ಎಸ್ ಕುರ್ತುಕೋಟಿ ಇಬ್ಬರು ಆತ್ಮೀಯ ಸ್ನೇಹಿತರು. ಶ್ರೀ ಡಿ ಎಸ್ ಕುರ್ತಕೋಟೆಯವರು ಗೋಗಟೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕುಷ್ಟಗಿ ಅವರ ಒಂದೇ ಮಾತಿಗೆ ಗೌರವ ಕೊಟ್ಟು ಆ ಸಂಸ್ಥೆಯನ್ನ ಬಿಟ್ಟು ಗದುಗಿಗೆ ಬಂದು ವಾಣಿಜ್ಯ ಮಹಾವಿದ್ಯಾಲಯ ತೆರೆಯಲು ಸಹಕಾರ ನೀಡಿದರು. ಅವರೊಂದಿಗೆ ದಿವಂಗತ ಎಲ್.ಎ ಪೋತ್ನಿಸ್ ಅವರು ಶಿಸ್ತಿನ ಕಾರ್ಯ ಚಟುವಟಿಕೆಗಳ ಮೂಲಕ ಸಂಸ್ಥೆಯ ಬೆಳವಣಿಗೆಗೆ ಕಾರ್ಣಿ ಕರ್ತರು ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು. ಸಂಸ್ಥೆಗೆ ಸಹಕಾರ ನೀಡಿದ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ ಪಾಟೀಲ,  ಮಾನ್ಯ ವಿಧಾನ ಪರಿಷತ್ತಿನ  ಶಾಸಕರಾದ ಪ್ರೊ. ಎಸ್. ವಿ ಸಂಕನೂರು, ಮಾನ್ಯ ಶ್ರೀ ವಿಜಯ ಸಂಕೇಶ್ವರ. ವಿ. ಆರ್ ಕುಷ್ಟಗಿ , ಎಲ್.ಎ ಪೋತ್ನಿಸ್ ಅವರು ತನು ಮನ ಧನ ಸಹಕಾರದಿಂದ ಸಂಸ್ಥೆಯ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.

     ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ಅವರು ಮಾತನಾಡಿ ಆದರ್ಶ ಶಿಕ್ಷಣ ಸಂಸ್ಥೆ ಆರಂಭದಲ್ಲಿ ವಿದ್ಯಾದಾನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆರಂಭವಾಯಿತು. 33 ಸಂಸ್ಥಾಪಕ ಸದಸ್ಯರ ಹಾಕಿಕೊಟ್ಟ ಮಾರ್ಗದರ್ಶನದೊಂದಿಗೆ  ಸಂಸ್ಥೆಯ ಸಂಸ್ಥಾಪಕರು ಹಾಕಿಕೊಟ್ಟ  ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಇದಕ್ಕೆ ಸಹಕಾರ ಸಂಸ್ಥೆಯ ಪದಾಧಿಕಾರಿಗಳು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಪರಿಶ್ರಮದ ಮೂಲಕ ಶೈಕ್ಷಣಿಕವಾಗಿ ಸಂಸ್ಥೆಯನ್ನ ಇನ್ನೂ ಎತ್ತರ ಮಟ್ಟಕ್ಕೆ ಬೆಳೆಯಲು ಸಹಕಾರ ನೀಡಬೇಕೆಂದು ತಮ್ಮ ಮಾತುಗಳಲ್ಲಿ  ಹಂಚಿಕೊಂಡರು. 

 ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ. ವಿ. ಕುಷ್ಟಗಿ ಉಪಸ್ಥಿತರಿದ್ದರು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ.ಡಿ

ಗೋಡಖಿಂಡಿರವರು ವಂದನಾರ್ಪಣೆ ನಡೆಸಿಕೊಟ್ಟರು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ರವಿ ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಪಿ ಜೈನರ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ವ್ಯವಹಾರ ಆಡಳಿತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಲಿಂಗರಾಜ್ ರಶ್ಮಿ ಹಾಗೂ ಬಿ.ಕಾಂ, ಬಿ.ಬಿ. ಎ,  ಪಿ. ಯು. ಸಿ, ಎಂ.ಕಾಂ, ಬಿ. ಸಿ. ಎ  ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ವಿ. ಕುಷ್ಟಗಿಯವರು ಸಂಸ್ಥೆಗೆ ರೂ.1,11,111/- ದಾನವನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net