Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜಯಂತೋತ್ಸವ ನಿಮಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿ ಟಿ ನಾಯ್ಕರ್ ರವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಸಂವಿಧಾನ ಸಭೆಯ ಸದಸ್ಯರಾಗಿದ್ದರು, ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದರು ಮತ್ತು ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಪ್ರದೇಶಗಳ ಹಕ್ಕುಗಳ ಕುರಿತ ಉಪಸಮಿತಿಗಳಿಗೆ ನಿರ್ವಹಿಸಿದರು. ಅಲ್ಲದೆ, ಪಟೇಲರು ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಯನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಅಷ್ಟೇ ಅಲ್ಲದೆ ಸರ್ದಾರ್ ಪಟೇಲರು ಸಂವಿಧಾನ ಸಭೆಯ ಸಲಹಾ ಸಮಿತಿಯ ಮುಖ್ಯಸ್ಥರಾಗಿ, ಮೂಲಭೂತ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುರಿತಾದ ಉಪಸಮಿತಿಗಳ ವರದಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಎನ್ ಎಸ್ ಎಸ್ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಕು ಭರತದ ಸ್ವಾಮೀ ಮಾತನಾಡಿ ಭಾರತದ ಸಂವಿಧಾನ ರಚನೆಯ ಸಮಯದಲ್ಲಿ, ಅವರು ಮಧ್ಯಂತರ ಸರ್ಕಾರದಲ್ಲಿ ಗೃಹ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದರು ಮತ್ತು 565 ರಾಜಪ್ರಭುತ್ವದ ರಾಜ್ಯಗಳೊಂದಿಗೆ ಮಾತುಕತೆ ನಡೆಸುವ ಮತ್ತು ಅವುಗಳನ್ನು ಭಾರತದ ಒಕ್ಕೂಟಕ್ಕೆ ಸಂಯೋಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಅದರೊಂದಿಗೆ ಇವರಿಗೆ 'ಭಾರತದ ಉಕ್ಕಿನ ಮನುಷ್ಯ' ಎಂಬ ಬಿರುದು ದೊರೆಯಿತು. ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿ, ಅವರು ನಿರಾಶ್ರಿತರಿಗೆ ಪರಿಹಾರ ಪ್ರಯತ್ನಗಳನ್ನು ಸಂಘಟಿಸಿದರು. ಜುಲೈ 1947 ರ ನಂತರ ಅವರು ರಾಜ್ಯಗಳ ಸಚಿವ ಹುದ್ದೆಯನ್ನು ಮತ್ತು 1948 ರ ನಂತರ ಗೃಹ ಮತ್ತು ರಾಜ್ಯಗಳ ಸಚಿವ ಹುದ್ದೆಯನ್ನು ಅಲಂಕರಿಸಿದರು ಎಂದು ಪಟೇಲರ ಸಾಧನೆಗಳನ್ನು ತನ್ನ ಭಾಷಣದಲ್ಲಿ ವಿವರಿಸಿದ್ದರು.
ಎನ್ ಎಸ್ ಎಸ್ ಸ್ವಯಂಸೇವಕ ಕು. ಅಕ್ಷಯ್ ಮಾತನಾಡಿ ಮೂಲಭೂತ ಹಕ್ಕುಗಳ ಕುರಿತಾದ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ನಾಗರಿಕ ಹಕ್ಕುಗಳನ್ನು ಸಮತೋಲನಗೊಳಿಸಲು ಶ್ರಮಿಸಿದರು. ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿದರು ಮತ್ತು ಪ್ರತ್ಯೇಕ ಮತದಾರ ಪದ್ಧತಿಯನ್ನು ಕೊನೆಗೊಳಿಸಲು ಮುಸ್ಲಿಂ ನಾಯಕರೊಂದಿಗೆ ಸಹಕರಿಸಿದರು ಹಾಗೆ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಯಂತಹ ಅಖಿಲ ಭಾರತ ಸೇವೆಗಳನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಇಂಥ ಒಬ್ಬ ನಾಯಕರ ಉತ್ತಮ ಗುಣಗಳನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕೆಂದು ತನ್ನ ಮಾತುಗಳಲ್ಲಿ ಹಂಚಿಕೊಂಡನು.
ವೇದಿಕೆ ಮೇಲೆ ಎನ್ ಎಸ್ ಎಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಪಿ ಜೈನರ ವಿದ್ಯಾರ್ಥಿ ಪ್ರತಿನಿಧಿಗಳಾದ ಕು ವರ್ಷ ಕಲ್ಕಂಬಿ ಕು. ನಮೃತಾ ಪಾಟೀಲ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಸ್ವಯಂಸೇವಕ ಸೇವಕಿಯರು ಈ ಒಂದು ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.