ಪಾರಿತೋಷಕ ವಿತರಣೆ ಹಾಗೂ ಬೀಳ್ಕೋಡುಗೆ ಸಮಾರಂಭ

18GDG01
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಎಎಎಸ್​ ಸಂಸ್ಥೆಯ ಅನಂತರಾವ ಪೋತ್ನಿಸ ಮೆಮೋರಿಯಲ್​ ಕಾಲೇಜಿನಲ್ಲಿ ಗುರುವಾರ ಬಿಬಿಎ ಅಂತಿಮ ವರ್ಷದ ವಿದ್ಯಾಥಿರ್ಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು.
ಸಮಿತಿಯ ಕಾರ್ಯದಶಿರ್ ಎ. ಡಿ. ಗೋಡಖಿಂಡಿ ಮಾತನಾಡಿ, ಉದ್ಯಮಶೀಲತೆಯ ಮಹತ್ವವನ್ನು ವಿದ್ಯಾಥಿರ್ಗಳು ಅರಿತುಕೊಳ್ಳಬೇಕು. ಮುಂಬರುವ ಪರೀಕ್ಷೆಗಳಲ್ಲಿ ವಿದ್ಯಾಥಿರ್ಗಳು ಯಶಸ್ಸು ಸಾಧಿಸಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾಥಿರ್ಗಳಿಗೆ ಹಾಗೂ ಗದಗ ಉತ್ಸವ ಮತ್ತು ಮ್ಯಾನೇಜ್ಮೆಂಟ ಹಬ್ಬದಲ್ಲಿ ಭಾಗವಹಿಸಿದ ವಿದ್ಯಾಥಿರ್ಗಳಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು. ಸಮಾರಂಭದಲ್ಲಿ ಪ್ರೊ. ಶರೀ್​ ಬೆನಕಲ್​ ಅವರು ಬಿ.ಬಿ.ಎ ವಾಷಿರ್ಕ ವರದಿಯನ್ನು ಪ್ರಸ್ತುತ ಪಡಿಸಿದರು.
ಆದಿತ್ಯಾ ಜೋಶಿ, ಪ್ರಶಾಂತ ಹೊಂಬಾಳಿ, ಪ್ರಾಣೇಶ ಬೆಳ್ಳಟ್ಟಿ, ಶಿಲ್ಪಾ ಕಲಟಗಿ, ರಾಧಿಕಾ ಪುರೋಹಿತ, ಬನಶಂಕರಿ ಕುಲಕಣಿರ್, ಸವಿತಾ ಅಬ್ನಿಸ, ಶಾಂತಕುಮಾರ, ಮಂಜುನಾಥ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net