ಅಂಜನಾದ್ರಿ ಸ್ಥಳವು ಅಭಿವೃದ್ಧಿಗೊಳ್ಳುವುದು: ಪ್ರವೀಣ ತೂಗಾಡಿಯ

2
Published on
ವಿಜಯವಾಣಿ ಸುದ್ದಿಜಾಲ ಗದಗ
ಆಂಜನೇಯ ಜನ್ಮಸ್ಥಳ ಬಗ್ಗೆ ಗೊಂದಲಬೇಡ. ರಾಮ ಮಂದಿರ ಅಭಿವೃದ್ಧಿ ಪಡಿಸಿದಂತೆ ಕೇಂದ್ರ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ  ಉತ್ಸುಕವಾಗಿದೆ. ಆಂಜನೇಯ ಹುಟ್ಟಿದ ಸ್ಥಳದ ಬಗ್ಗೆ ಗೊಂದಲ ಇದ್ದರೂ ಸಹ ಆಂಜನೇಯ ಹುಟ್ಟಿದ್ದಾನೆ ಎಂದು ಹೇಳುವ ನಾಲ್ಕು ಸ್ಥಳಗಳು ಅಭಿವೃದ್ಧಿ ಆಗಬೇಕು. ಹಿಂದುಗಳು ನಾಲ್ಕು ಸ್ಥಳಗಳ ದರ್ಶನ ಪಡೆಯುವಂತಾಗಲಿ ಎಂದು ವಿಎಚ್ ಪಿ ಪ್ರಮುಖ ಪ್ರವೀಣ ತೂಗಾಡಿಯಾ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಸರ್ಕಾರವು ಅಂಜನಾದ್ರಿ ಅಭಿವೃದ್ಧಿಗೆ ಮುನ್ನುಡಿ ಬರೆಯಲಿ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಹಿಂದು ಪರಿಷತ್ ಮತ್ತು ಬಜರಂಗ ದಳ, ಮಹಿಳಾ ಪರಿಷತ್, ಓಜಸ್ವಿನಿ ಸಂಘಟನೆ ಜತೆಗೂಡಿ ಕುಂಭ ಮೇಳದಲ್ಲಿ 1.5 ಕೋಟಿ ಜನರಿಗೆ ಊಟ ಮತ್ತು 5 ಸಾವಿರ ಜನರ ವಸತಿ ಕಲ್ಪಿಸಲಾಗಿತ್ತು. 1 ಲಕ್ಷ ಹೊದಿಕೆ, 200 ಟೆಂಟ್ ನಿರ್ಮಿಸಲಾಗಿತ್ತು. 25000 ಜನರು ಏಕ ಕಾಲದಲ್ಲಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗಿತ್ತು. ಕೊರೊನ ಸಂದರ್ಭದಲ್ಲಿ ದೇಶದಲ್ಲಿ 5700 ಕ್ಕೂ ಅಧಿಕ ಊಟದ ಕೇಂದ್ರಗಳನ್ನು ನಮ್ಮ ಸಂಸ್ಥೆಗಳಿಂದ ತೆರೆಯಲಾಗಿತ್ತು. ಹಿಂದೂಗಳ ಸಹಾಯಕ್ಕಾಗಿ ಈಗ ಪ್ರತಿ ತಿಂಗಳು, ಅಕ್ಕಿ, ಗೋಧಿ ನೀಡಲು ತೀರ್ಮಾನಿಸಲಾಗಿದೆ. ಬಡ ಹಿಂದುಗಳು ಉಪವಾಸ ಬದುಕಬಾರದು ಎಂಬ ಉದ್ದೇಶದಿಂದ ಹೊಸ ಯೋಜನೆಗಳನ್ನು ತರಲಾಗುತ್ತಿದೆ. ಹೀಗೆ 50ಕ್ಕೂ ಹೆಚ್ಚು ಯೋಜನೆಗಳು ಒಳಗೊಂಡಿವೆ ಎಂದು ತಿಳಿಸಿದರು.
ಬಡ ಹಿಂದೂಗಳ ಸಹಾಯಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ಭಾರತದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಭಾರತೀಯ ಹಿಂದುಗಳಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು 10 ಸಾವಿರ ವೈದ್ಯರನ್ನು ಸಂಪರ್ಕಿಸಿದ್ದು, ಪ್ರತಿದಿನ ಒಬ್ಬ ಹಿಂದುವಿಗೆ ಉಚಿತ ಚಿಕಿತ್ಸೆ ನೀಡಲು ವೈದ್ಯರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net