“ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್”

14GDG03
Published on

ಗದಗ: ಡಾ.ಬಿ.ಆರ್.ಅಂಬೇಡ್ಕರ್‌ರವರು ಒಬ್ಬ ದೇಶ ಕಂಡ ಮಹಾನ್ ವ್ಯಕ್ತಿ.ಇಂದು ಅವರು ಜಗತ್ತಿನಾದ್ಯಾಂತ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಜೀವನವನ್ನು ಬಹುಕಾಲ ಓದು, ಬರಹ, ಹೋರಾಟ, ಭಾಷಣದಲ್ಲಿಯೇ ಕಳೆದುದ್ದು ವಿಶೇಷವಾಗಿದೆ. ನಮ್ಮ ದೇಶದಲ್ಲಿ ಆಗ ಸ್ವಾತಂತ್ರö್ಯದ ಜೊತೆ ಜೊತೆಗೆ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಅವರು ಕಡು ಬಡತನದಲ್ಲಿ ಹುಟ್ಟಿ ಆಗಿನ ಕಾಲದಲ್ಲಿ ವಿದೇಶದಲ್ಲಿ ವಿದ್ಯಾರ್ಜನೆ ಮಾಡಿ, ಮರಳಿದ ನಂತರ ಸಮಾಜದ ಎಲ್ಲ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಸರ್ವರ ಏಳ್ಗೆಗೆ ಶೃಮಿಸಿ, ಸಮಾನತೆಗಾಗಿ ಹೋರಾಡಿ ನಮ್ಮ ದೇಶದ ಸಂವಿಧಾನವನ್ನು ರಚನೆಮಾಡಿದ್ದು ಅವರ ಮಹಾನ್ ಸಾಧನೆಯಾಗಿದೆ. ಇದು ನಾವೆಲ್ಲರೂ ಹೆಮ್ಮೆಪಡುವ ವಿಷಯವಾಗಿದೆ. ಅವರೊಬ್ಬ ಅಸಾಮಾನ್ಯ ವ್ಯಕ್ತಿಯಾಗಿದ್ದರು. ಡಾ.ಬಿ.ಆರ್.ಅಂಬೇಡ್ಕರ್‌ರವರ ಜೀವನ ಮೌಲ್ಯಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಸ್ಪೂರ್ತಿ ಅವುಗಳನ್ನು ಸಮಾಜದ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಮಾಜಿ ಜಿಲ್ಲಾಪಂಚಾಯತಿ ಉಪಾದ್ಯಕ್ಷರಾದ ಶ್ರೀಮತಿ ಶುಂತಲಾಬಾಯಿ ಬಿ ದಂಡಿನ ರವರು ಸ್ಥಳೀಯ ಕನಕದಾಸ ಶಿಕ್ಷಣ ಸಮಿತಿಯ ಸಮೂಹ ಶಿಕ್ಷಣ ಸಂಸ್ಥೆಗಳಾದ ಕೆ.ಎಸ್.ಎಸ್.ಕಲಾ.ವಾಣಿಜ್ಯ.ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅದ್ಯಯನ ಕೇಂದ್ರ, ಕೆ.ವಿ.ಎಸ್.ಆರ್. ಹಾಗೂ ಸಂಕೇತ ಪದವಿಪೂರ್ವ ಮಹಾವಿದ್ಯಾಲಯಗಳು,ಬಿ.ಎಸ್.ಡಬ್ಲೂ ಮಹಾವಿದ್ಯಾಲಯ ಐ.ಕ್ಯೂ.ಎ.ಸಿ. ರಾಷ್ಟಿçÃಯ ಸೇವಾ ಯೋಜನೆಯ ಎ.ಮತ್ತು ಬಿ ಘಟಕಗಳು ಸ್ಕೌಟ್ಸ & ಗೈಡ್ಸ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬುಜಗಜೀವನರಾಮ್ ರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬುಜಗಜೀವನರಾಮ್ ರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಸ್ಪರ್ದೆಯನ್ನು ಹಮ್ಮಿಕೊಳ್ಳಲಾಗಿತ್ತು ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಷಣಸ್ಪರ್ದೆಯಲ್ಲಿ ಪಾಲ್ಗೊಂಡಿದ್ದರು. ನಂತರದಲ್ಲಿ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎ.ಕೆ.ಪೂಜಾರ ರವರು ಡಾ.ಬಿ.ಆರ್.ಅಂಬೇಡ್ಕರ್‌ರವರ ಜೀವನ,ಸಾಧನೆ,ಹಾಗೂ ಅವರ ಮೌಲ್ಯಗಳ ಕುರಿತು ಸುಧೀರ್ಘವಾಗಿ ಮಾತನಾಡಿದರು. ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರರವರು ದೇಶಕಂಡ ಅಪ್ಪಟ ವಿದ್ವಾಂಸ, ಚಿಂತಕ, ಹೊರಾಟಗಾರ, ಇತಿಹಾಸತಜ್ಞ ರಾಜಕಾರಿಣಿ, ಅರ್ಥಶಾಸ್ತçಜ್ಞ, ನ್ಯಾಯವಾದಿ, ಶಿಕ್ಷಣತಜ್ಞ ,ಪ್ರಾಧ್ಯಾಪಕ, ವಾಗ್ಮಿ, ಗುಣಗ್ರಾಹಿಯೂ ಆಗಿದ್ದಾರೆ ಎಂದು ಹೇಳಿದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಇನ್ನೋರ್ವ ಪ್ರಾಧ್ಯಾಪಕರಾದ ಪ್ರೊ ಶಶಿಧರ ಕುರಿಯವರು ಅಂಬೇಡ್ಕರ್ ರವರಲ್ಲಿ ಮಹಾನ್ ಸದ್‌ಗುಣಗಳಿದ್ದವು ಅಪಮಾನಗಳನ್ನು ಸಹಿಸಿಕೊಂಡು ಬಾನೆತ್ತರಕ್ಕೆ ಬೆಳೆದು ಸದಾಮಿನುಗುವ ನಕ್ಷತ್ರವಾಗಿದ್ದಾರೆ ಎಂದು ಮಾತನಾಡಿದರು. ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಾರಂಭದಲ್ಲಿ ರಾಷ್ಟಿçÃಯ ಸೇವಾ ಯೋಜನೆಯ ಸ್ವಯಂ ಸೇವಕಿಯಾದ ಕುಮಾರಿ ಪವಿತ್ರಾ..ಬಡಿಗೇರ ಪ್ರಾರ್ಥನೆಗೈದರು. ಕೆ.ವಿ.ಎಸ್.ಆರ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ವ್ಹಿ ಎಸ್.ದಲಾಲಿಯವರು ಸರ್ವರನ್ನು ಸ್ವಾಗತಿಸಿ ಪ್ರಸ್ಥಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೆ.ಎಸ್.ಎಸ್.ಮಹಾವಿದ್ಯಾಲಯದ ಯುಥ್ ರೆಡ್ ಕ್ರಾಸ್ ಘಟಕದ ಅಧಿಕಾರಿಗಳಾದ ಪ್ರೊ ಐ.ಕೆ.ಪಟ್ಟಣಶೆಟ್ಟಿ, ಕೆ.ವಿ.ಎಸ್.ಆರ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ವ್ಹಿ ಎಸ್.ದಲಾಲಿಯವರು ಪ್ರೊ ಶಶಿಧರ ಕುರಿಯವರು ಐ.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ ಎಸ್.ಬಿ ಪಲ್ಲೇದ ರಾಷ್ಟಿçÃಯ ಸೇವಾ ಯೋಜನೆಯ ಎ.ಮತ್ತು ಬಿ ಘಟಕಗಳು ಹಾಗೂ ಸ್ಕೌಟ್ಸ & ಗೈಡ್ಸ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ ಶಿವಾನಂದ ಕೊರವರ, ಪ್ರೊ ಶ್ರೀಮತಿ ಜೆ.ಎಸ್.ಅರಹುಣಸಿ, ಪ್ರೊ ವಾಯ್.ಬಿ.ರೇವಡಕುಂದಿ, ಪ್ರೊ ನಾಗರಾಜ ಕಡ್ಲಬಾಳು, ಪ್ರೊ ಕೃಷ್ಣಾ ಕಾರಭಾರಿ, ಪ್ರೊ ಸತೀಶ ಅಳಗುಂಡಗಿ, ಪ್ರೊ ಬಿ.ಆಯ್ ಬಿರಾದರ, ಪ್ರೊ ವ್ಹಿ.ಎಚ್.ಕೊಳ್ಳಿ, ಪ್ರೊ ಸಿ.ಸಿ ಅಮಾತ್ಯಣ್ಣವರ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಮಹಾವಿದ್ಯಾಲಯಗಳ ಎಲ್ಲ ಪ್ರಾದ್ಯಾಪಕರು,ಬೋಧಕೇತರ ಸಿಬಂಧಿಯವರು,ರಾಷ್ಟಿçÃಯ ಸೇವಾ ಯೋಜನೆಯ ಎ.ಮತ್ತು ಬಿ ಘಟಕಗಳ ಸ್ವಯಂ ಸೇವಕ ಸೇವಕಿಯರು ಹಾಗೂ ಸ್ಕೌಟ್ಸ & ಗೈಡ್ಸನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು. ಪ್ರೊ ಎಸ್.ಬಿ.ಪಲ್ಲೇದ ಕಾರ್ಯಕ್ರಮದ ನಿರೂಪಣೆಗೈದರು. ಪ್ರೊ ಐ.ಕೆ.ಪಟ್ಟಣಶೆಟ್ಟಿಯವರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net