ಕಳಸಾರೋಹಣ, ಸಾಮೂಹಿಕ ಉಪನಯನ ಕಾರ್ಯಕ್ರಮ

IMG-20250130-WA0027
Published on
ವಿಜಯವಾಣಿ ಸುದ್ದಿಜಾಲ ಗದಗ
ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಪಂಚ ಕಮೀಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ಸಮಾಜ ಬಾಂಧವರ ಸಹಯೋಗದೊಂದಿಗೆ ಹುಡ್ಕೋ ಬಡಾವಣೆಯ ಅಮೃತ ಶಿಲೆಯ ಅಂಬಾಭವಾನಿ ದೇವಸ್ಥಾನದ ಕಳಸಾರೋಹಣ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಜ.31 ರಿಂದ ಫೆ.3ರ ವರೆಗೆ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಕೆ ಸಮಾಜ ಪಂಚ್ ಕಮಿಟಿ ಅಧ್ಯಕ್ಷ ಫಕೀರಸಾ ಭಾಂಡಗೆ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.31 ರಂದು ಬೆಳಗ್ಗೆ 7ರಿಂದ 11ಗಂಟೆ ವರೆಗೆ ಚಂಡಿ ಸಪ್ತಶತಿ ಸ್ವಾಹಾಕಾರದ ಅಂಗವಾಗಿ ಪುಣ್ಯಾಹವಾಚನ, ಮಾತೃಕಾ ಪೂಜನ, , ಬ್ರಾಹ್ಮಣ ಮಧುಪರ್ಕ ಪೂಜಾ ಮುಖ್ಯ ದೇವತಾ ಸ್ಥಾಪನ ಹಾಗೂ ಸಪ್ತಶತಿ ಪಾರಾಯಣ ಮತ್ತು ಕುಮಾರಿಕಾ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.1 ರಂದು ಬೆಳಗ್ಗೆ 7 ರಿಂದ 11 ಗಂಟೆ ವರಗೆ ಚಂಡಿಕಾ ಹವನ ಹಾಗೂ ಪೂರ್ಣಾಹುತಿ, ಕಳಸದ ಮೆರವಣಿಗೆ ಹಾಗೂ  ಹಳೇ ಸರಾಫ್ ಬಜಾರದಲ್ಲಿರುವ ಜಗದಂಬಾ ದೇವಸ್ಥಾನದಿಂದ ಹುಡ್ಕೋ ಬಡಾವಣೆ ಅಂಬಾಭವಾನಿ ದೇವಸ್ಥಾನದವರಿಗೆ ಕುಂಬ ಮೆರವಣಿಗೆ ನಡೆಯುತ್ತದೆ ಎಂದರು.
ಫೆ.2 ರಂದು ಬೆಳಗ್ಗೆ 7ಕ್ಕೆ ಕಳಸಕ್ಕೆ ಜಲಾಧಿವಾಸ, ಧಾನ್ಯಾಧಿವಾಸ, ಹೋಮ-ಹವನ ಕಾರ್ಯಕ್ರಮ, ಸಂಜೆ 6ಕ್ಕೆ ಅಭಿನವ ಶಂಕರ ಭಾರತೀ ಮಹಾಸ್ವಾಮೀಜಿಗಳಿಂದ ಧೂಳ ಪೂಜೆ ಹಾಗೂ ಆಶೀವಚನ ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.3 ರಂದು ಬೆಳಗ್ಗೆ 6ಕ್ಕೆ ಅಂಬಾಭವಾನಿದೇವಿಗೆ ಅಭಿಷೇಕ ಹಾಗೂ ಕಳಸಕ್ಕೆ ಪೂಜೆ, ಅಲಂಕಾರ ಪೂಜೆ, ಹೋಮ ಹವನ ನಡೆಯುವುದು. ಅಭಿನವ ಶಂಕರ ಭಾರತೀ ಸ್ವಾಮೀಜಿಗಳಿಂದ ಕಳಸಾರೋಹಣ ಜರಗುವುದು. ಹಾಗೂ ಪೂರ್ಣಹುತಿ, ಸಾಮೂಹಿಕ ಉಪನಯನ ನಂತರ ಮಹಾಪ್ರಸಾದ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನ್ನಿಧ್ಯ ಅಭಿನವ ಶಂಕರ ಭಾರತೀ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆ ಎಸ್‌ಎಸ್‌ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಭಾಂಡಗೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯ ಸಭೆ ಸಂಸದ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಶಾಸಕ ಡಿ.ಆರ್. ಪಾಟೀಲ, ಶಶಿಕುಮಾರ ಮೇರವಾಡೆ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜು ಬದಿ, ವಿನೋದ ಶಿದ್ಲಿಂಗ, ರವಿ ಶಿದ್ಲಿಂಗ, ಶ್ರೀಕಾಂತಸಾ ಖಟವಟೆ, ಪ್ರಕಾಶ ಬಾಕಳೆ, ಎನ್.ಆರ್. ಖಟವಟೆ, ಪರಶುರಾಮಸಾ ಬದಿ, ಮಾರುತಿ ಪವಾರ, ವಿನೋದ ಭಾಂಡಗೆ, ಗಣಪತಸಾ ಜಿತೂರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net