

ವಿಜಯವಾಣಿ ಸುದ್ದಿಜಾಲ ಗದಗ
ಚಿನ್ನ, ಖನೀಜ, ಗಿಡಮೂಲಿಕೆ ಸಂಪತ್ತಿನ ಕಪ್ಪತ್ತಗುಡ್ಡವು ಪರಿಶುದ್ಧ ಗಾಳಿಗೆ ದೇಶದಲ್ಲಿಯೇ ಮೊದಲನೇ ಸ್ಥಾನ ಪಡೆದಿದೆ. ಕಪ್ಪತ್ತಗುಡ್ಡದ ಮೇಲೆ ಬಂಡವಾಳ ಶಾಹಿಗಳು ಕಣ್ಣಿಟ್ಟಿದ್ದಾರೆ. ಕಪ್ಪತ್ತಗುಡ್ಡವನ್ನು ಮುಂದಿನ ಜನಾಂಗಕ್ಕೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಪ್ಪತ್ತಗಿರಿಯ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀಗಳು ಹೇಳಿದರು.
ನಗರದ ಅಕ್ಕನ ಬಳಗ ಮಂಗಳವಾರ ಏರ್ಪಡಿಸಿದ್ದ ವನಮಹೋತ್ಸವ ಹಾಗೂ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಪ್ಪತ್ತಗುಡ್ಡದ ಸಕಲ ಸಂಪತ್ತನ್ನು ಅರಿತ ಬ್ರೀಟಿಷರು 1892 ರಲ್ಲಿ ಕಪ್ಪತ್ತಗುಡ್ಡ ಸಂರತ ಅರಣ್ಯ ಪ್ರದೇಶವೆಂದು ಗೆಜೆಟ್ದಲ್ಲಿ ದಾಖಲಿಸಿ 144 ವರ್ಷಗಳೇ ಕಳೆದಿವೆ. ಇಂತಹ ಸಂಪದ್ಭರಿತ ಕಪ್ಪತ್ತಗುಡ್ಡದ ಮೇಲೆ ನೇತಾಡುತ್ತಿರುವ ಅಕ್ರಮ ಗಣಿಗಾರಿಕೆ ತೂಗುಕತ್ತಿಯನ್ನು ತಪ್ಪಿಸಲು, ಬಂಡವಾಳಶಾಹಿಗಳ ಕಣ್ಣಿನಿಂದ ಕಪ್ಪತ್ತಗುಡ್ಡವನ್ನು ಸಂರಸಲು ನಾವೆಲ್ಲರೂ ಬದ್ಧತೆಯಿಂದ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದರು.
ಚಲಿಸುವ ಮೂಡಗಳಿಂದ ಮಳೆ ಸುರಿಯುವಂತೆ ಮಾಡುವ ಕಪ್ಪತ್ತಗುಡ್ಡದಿಂದಾಗಿ ಸುತ್ತಲಿನ 15 ಜಿಲ್ಲೆಗಳು ಮಳೆ, ಬೆಳೆ ಕಾಣುವಂತಾಗಿದೆ. ಪರಿಶುದ್ಧ ಗಾಳಿಗೆ ಖ್ಯಾತಿ ಆಗಿರುವ ಇಂತಹ ಕಪ್ಪತ್ತಗುಡ್ಡಕ್ಕೆ ನಾವೆಲ್ಲರೂ ವಾರಸುದಾರ ಆಗಬೇಕು. ಕಪ್ಪತ್ತಗುಡ್ಡ ಎಲ್ಲರ ಸ್ವತ್ತು ಎಂದರು.
ಅಕ್ಕನ ಬಳಗ ಕ್ರಿಯಾಶೀಲತೆಯಿಂದ ಕಾರ್ಯ ಮಾಡುತ್ತಿದೆ. ಮಹಿಳಾ ಜಾಗೃತಿ, ಪರಿಸರ ಜಾಗೃತಿ ಮುಂತಾದ ಸಮಾಜಮುಖಿ ಕಾರ್ಯಗಳಿಂದಾಗಿ ತನ್ನ ಹಿರಿಮೆಯನ್ನು ಮೆರೆದಿದೆ. ಅಕ್ಕನ ವಚನ ಸಾಹಿತ್ಯ, ಅನುಭಾವ ಸಾಹಿತ್ಯವನ್ನು ಜನ ಮನಕ್ಕೆ ತಲುಪಿಸುವ ಕಾರ್ಯವನ್ನು ಅಕ್ಕನ ಬಳಗ ಮುಂದುವರೆಸಿಕೊಂಡು ಬಂದಿದೆ. ಅದಕ್ಕಾಗಿ ಸರ್ವ ಪದಾಧಿಕಾರಿಗಳು, ಸದಸ್ಯರು ಟ್ರಸ್ಟಿಗಳು ಅಭಿನಂದನೆ ಅರ್ಹರು ಎಂದರು.
ಕೃಷಿ ಪ್ರದಾನವಾದ ಭಾರತದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಕೃಷಿಕ ಕುಟುಂಬಗಳು ಉಳಿಯಬೇಕು. ಅವಿಭಕ್ತ ಕುಟುಬಗಳು ಹೆಚ್ಚಾಗಬೇಕು. ಗಂಡ&ಹೆಂಡತಿ ಒಂದೆರಡು ಮಕ್ಕಳಿಗೆ ಸ್ಥಿಮಿತಗೊಳ್ಳುತ್ತಿರುವ ಕುಟುಂಬಗಳು ದ್ವೀಪಗಳಾಗದೇ ಮನ&ಮನೆ ಬೆಳಗುವ ದೀಪಗಳಾಗಬೇಕು ಎಂದರು.
ಅಕ್ಕನ ಬಳಗಕ್ಕೆ 11 ಲ ರೂ.ಗಳನ್ನು ದೇಣಿಗೆ ನೀಡಿದ ಶಾಂತಾ ಅಂದಾನಪ್ಪ ಗೌಡರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿಮಲಾ ಪರ್ವತಗೌಡ್ರ, ಜ್ಯೋತಿ ದಾನಪ್ಪಗೌಡ್ರ, ದೀಪಾ ಉಗಲಾಟದ, ಭಾಗ್ಯಾ ಗಡ್ಡಿ, ಸುಮೇದಾ ಕೋಟಿ, ವಿಜಯಲಕ್ಷಿ$್ಮ ಬಿರಾದಾರ, ಪ್ರಭಾವತಿ ಚವಡಿ, ಮಂಜುಳಾ ಹೊಳಗುಂದಿ, ಮೃತ್ಯಂಜಯ ಸಂಕೇಶ್ವರ, ಡಾ. ಶೇಖರ ಸಜ್ಜನರ, ಆನಂದ ಪೋತ್ನೀಸ್, ಡಾ. ಮಹಾಂತೇಶ ಬಾತಾಖಾನಿ ಇತರರು ಇದ್ದರು.