

ಗದಗ: ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂದಿಂದ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಗದಗ ಜಿಲ್ಲಾಧ್ಯ ಬಸವರಾಜ ಕೊರ್ಲಹಳ್ಳಿ ಮಾತನಾಡಿ, ಕರ್ನಾಟಕ ಖಾಸಗಿ ಶೈಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕ 2014 ಕ್ಕೆ ತಿದ್ದುಪಡಿ ತಂದು 2006ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ಶಾಲಾ ಸಿಬ್ಬಂದಿಗಳಿಗೂ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಪವು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಣ ಸಂಸ್ಥೆಗಳ ನೌಕರರಿಗೆ ಎನ್ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ತರುವ ಭರವಸೆಯನ್ನು ನೀಡಿತ್ತು. ನೀಡಿರುವ ಭರವಸೆಯಂತೆ ಶ್ರೀದಲ್ಲಿಯೇ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ಜಾರಿಗೊಳಿಸಬೇಕು. ಒಂದು ವೇಳೆ ಓಪಿಎಸ್ ಜಾರಿ ವಿಳಂಬವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್ಪಿಎಸ್ ಯೋಜನೆಯನ್ನು ಯಥಾವತ್ತಾಗಿ ಅನುದಾನಿತ ನೌಕರರಿಗೂ ನೀಡಬೇಕು ಎಂದು ತಿಳಿಸಿದರು.
ವಿ. ಹೆಚ್. ಕೊಳ್ಳಿ, ಈರಣ್ಣ ಹಾದಿಮನಿ, ರವಿ ಕೋಟಿಯವರ, ಸಂಗಮೇಶ ಅಬ್ಬಿಗೇರಿ, ಜಿ. ಬಿ. ಲಮಾಣಿ, ಎಸ್. ಎಸ್. ಕುರಿ, ಎಚ್. ಎನ್. ಕುರಿ, ಎಸ್. ಕೆ. ಅಂಗಡಿ, ಎಸ್. ಎಸ್. ರಾಹುತರ, ಮಂಜುನಾಥ ಮರಾಟೆ, ಎಂ. ಡಿ. ನದಾ, ಎಂ. ವೈ. ಮಾದರ ಇತರರು ಇದ್ದರು.