ರೈತರಿಗೆ ಬೆಳೆ ಪದ್ಧತಿ ತರಬೇತಿ ಹಾಗೂ ಯುರಿಯಾ ಡ್ರೋನ್ ಪ್ರಾತ್ಯಕ್ಷಿಕೆ

1000600849
Published on
ಗದಗ : ತಾಲೂಕಿನ ಯಲಿಶಿರೂರ ಗ್ರಾಮದಲ್ಲಿ ದಿ:18-7-2025 ರಂದು  ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಬೆಳೆ ಪದ್ದತಿ ಆಧಾರಿತ ತರಬೇತಿ ಕಾರ್ಯಕ್ರಮ ಹಾಗೂ ನ್ಯಾನೋ ಯುರಿಯಾ ಡ್ರೋನ್ ಸಿಂಪರಣೆ ಪ್ರಾತ್ಯಕ್ಷೆಕೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನೂರಾರು ಜನ ರೈತ ಬಾಂದವರು ಭಾಗವಹಿಸಿ ಮಾಹಿತಿ ಪಡೆದರು. ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಎಲಿ ಹಾಗೂ ಗ್ರಾಮದ ಹಿರಿಯರಾದ ಫಕೀರಗೌಡ ಪಾಟೀಲ, ಪರಶುರಾಮ ಹೂಗಾರ, ಮಲ್ಲಪ್ಪ ಹೊನ್ನಪ್ಪನವರ, ಶರಣಪ್ಪ ಡೋಣಿ ಉದಯ ಹೊನ್ನಪ್ಪನವರ ಇತರರು ಭಾಗವಹಿಸಿದ್ದರು. ಡ್ರೋನ್ ಪ್ರಾತ್ಯಕ್ಷಿಕೆಯನ್ನು ಯಲ್ಲಪ್ಪ ಬಾಬಣ್ಣವರ ಇವರ ಹೊಲದಲ್ಲಿ ಆಯೋಜಿಸಲಾಗಿತ್ತು.
ಡ್ರೋನ್ ಬಳಸಿ ನ್ಯಾನೋ ಯುರಿಯಾ ಸಿಂಪರಣೆ ಕಾರ್ಯಕ್ರಮಕ್ಕೆ IFFCO ಸಂಸ್ಥೆಯ ಸಚಿನ್ ಇವರು ಸಹಯೋಗ ನೀಡಿದರು.
ತೀವೃ ರಸಗೊಬ್ಬರ ಬಳಕೆಯಿಂದ ಮಣ್ಣಿನ ಮೇಲಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ನ್ಯಾನೋ ರಸಗೊಬ್ಬರಗಳನ್ನು ಬಳಸಲು ಹಾಜರಿದ್ದ ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಕೊರವನವರ ತಿಳಿಸಿದರು.
ಕೃಷಿ ಅಧಿಕಾರಿ ರಾಜೇಶ್ವರಿ ಇವರು ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಇಂಗಳಳ್ಳಿ ಹಾಗೂ ಗುರಿಕಾರ್ ಇವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net