

ವಿಜಯವಾಣಿ ಸುದ್ದಿಜಾಲ ಗದಗ
ಸಿಂಗಟಾಲೂರು ಏತ ನೀರಾವರಿ ಯೋಜನಾ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದ ನೀರಿನ ಸದ್ಬಳಕೆ ಕುರಿತು ಕೃಷಿ ವಿಸ್ತರಣಾ ಕೇಂದ್ರದಲ್ಲಿ ಗುರುವಾರ ರೈತರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕ ಗಿರೀಶ ಮರಡ್ಡಿ ಮಾತನಾಡಿ, ಮಣ್ಣಿನ ಲವತ್ತತೆಯನ್ನು ಕಾಪಾಡಿಕೊಳ್ಳುವ ಕ್ರಮಗಳನ್ನು ರೈತರು ಅರಿತುಕೊಳ್ಳಬೇಕು. ಏಕಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಭೂಮಿಯ ಲವತ್ತತೆ ಕುಂಠಿತಗೊಂಡು, ಇಳುವರಿ ಕಡಿಮೆಯಾಗುತ್ತದೆ. ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ ಮತ್ತು ಇನ್ನಿತರ ಬೆಳೆಗಳನ್ನು ಬೆಳೆಯುವುದರಿಂದ ವಾತಾವರಣದಲ್ಲಿರುವ ಸಾರಜನಕವು ದ್ವಿದಳ ಧಾನ್ಯಗಳ ಬೇರಿನಲ್ಲಿರುವ ರೈಜೋಬಿಯಂ ಗಂಟುಗಳ ಮುಖಾಂತರ ಸ್ಥೀರಿಕರಣಗೊಂಡು ಮಣ್ಣಿನ ಲವತ್ತತೆ ಹೆಚ್ಚಾಗುತ್ತದೆ. ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಧರ್ಮಗಳು ಉತ್ತಮ ಆಗುವುದರೊಂದಿಗೆ ಸಾವಯವ ಇಂಗಾಲದ ಮಟ್ಟವು ಸುಧಾರಿಸುತ್ತದೆ ಎಂದರು.
ಕೃಷಿಯಲ್ಲಿ ನೀರಿನ ಸದ್ಬಳಕೆಯು ಸಹ ಅತ್ಯಂತ ಮಹತ್ವದ ವಿಷಯವಾಗಿದೆ. ಸರ್ಕಾರದಿಂದ ಒದಗಿಸಿರುವ ಹನಿ ನೀರಾವರಿ ಟಕಗಳನ್ನು ಅಳವಡಿಸಿಕೊಂಡು ರೈತರು ವಿವಿಧ ಹೂವಿನ ಬೆಳೆ ಹಾಗೂ ತರಕಾರಿ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡಿ ಯಶಸ್ವಿ ಆಗಿದ್ದಾರೆ. ಇನ್ನುಳಿದ ರೈತರು ಸಹ ಇದೇ ರೀತಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಬೆಳೆಗಳನ್ನು ಬೆಳೆದು ಯಶಸ್ವಿ ರೈತರಾಗಬೇಖು ಎಂದರು.
ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಎಸ್. ಎಲ್. ಪಾಟೀಲ ಮಾತನಾಡಿ, ರೈತರು ಮಣ್ಣು ಪರೀೆ ವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಎರಡು ವರ್ಷಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಮಣ್ಣು ಪರೀೆ ಮಾಡಿಸಿ, ಅದರ ಆಧಾರದ ಮೇಲೆ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸಬೇಕು ಎಂದರು.
ಸಮಾಲೋಚಕ ಸುರೇಶ ಕುಲಕಣಿರ್ ಮಾತನಾಡಿ, ನೀರಾವರಿ ಕಾಯ್ದೆ ಹಾಗೂ ಸಹಕಾರ ಸಂಗಳ ಕಾಯ್ದೆಯಡಿಯಲ್ಲಿ ರಚಿಸಿಕೊಂಡಿರುವ ನೀರು ಬಳಕೆದಾರರ ಸಹಕಾರಿ ಸಂಗಳನ್ನು ಬಲವರ್ಧನೆ ಗೊಳಿಸಬೇಕು ಎಂದು ತಿಳಿಸಿದರು.
ಮಹಾ ಪ್ರಬಂಧಕ ಗಿರೀಶ ದೇಶಪಾಂಡೆ ಮಾತನಾಡಿದರು. ರಾವೇಂದ್ರ ತೆಗ್ಗಿ, ನಾಗರಾಜ ತಹಶೀಲ್ದಾರ ಇತರರು ಇದ್ದರು.