

ಗದಗ: ನಗರದ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಸೆ. 22 ರಿಂದ ಅ.2ರ ವರೆಗೆ ಶ್ರೀದೇವಿ ಮಹಾತ್ಮೆ ಪ್ರವಚನವು ನಡೆಯುತ್ತದೆ. ಸೆ.22ರಂದು ಬೆಳಗ್ಗೆ ಶ್ರೀಚಕ್ರಸಹಿತ ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಶ್ರೀಸೂಕ್ತ ಪಠಣ ಟಸ್ಥಾಪನೆ, ದೇವಿಗೆ ಅಲಂಕಾರ, ಮಂಗಳಾರತಿ, ಪ್ರಸಾದ ವಿತರಣೆ ನಡೆಯುವುದು. ವೇದಮೂತಿರ್ ಚೆನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿ ಮಠ ಅವರಿಂದ ಶ್ರೀದೇವಿಗೆ ರುದ್ರಾಭಿಷೇಕ ಜರಗುವುದು. ಗಂಗಾವತಿ ಗುರುಗಳಿಂದ ಮಧ್ಯಾಹ್ನ 3 ಗಂಟೆಗೆ ಪುರಾಣ ಪಠಣ, ಸಂಜೆ 4 ರಿಂದ 5 ರ ವರೆಗೆ ಆದಿಶಕ್ತಿ ಬಳಗದವರಿಂದ ಲಲಿತಾ ಸಹಸ್ರನಾಮಾವಳಿ ಪಾರಾಯಣ, ಸಂಜೆ 5.30 ರಿಂದ 7 ಗಂಟೆಯವರೆಗೆ ಡಾ. ನೀಲಮ್ಮತಾಯಿಯವರು ಶ್ರೀದೇವಿ ಮಹಾತ್ಮೆ ಕುರಿತು ಪ್ರವಚನ ನಡೆಸಿಕೊಡುವವರು. ಸೆ. 30 ರಂದು ಸಂಜೆ 6 ಂಟೆಗೆ ನವದುರ್ಗೆಯರ ಪೂಜೆ ನೆರವೇರುವುದು. ಅ.2 ರಂದು ವಿಜಯದಶಮಿ ಪಲ್ಲಕ್ಕಿ ಉತ್ಸವ, ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ಪುರಾಣ ಮಂಗಲೋತ್ಸವ ಜರಗುವದು ಎಂದು ಆದ್ಯಾತ್ಮ ವಿಧ್ಯಾಶ್ರಮ ಪ್ರಕಟಣೆ ತಿಳಿಸಿದೆ.