

ಗದಗ: ನಗರದ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಶರನ್ನವರಾತ್ರಿ ನಿಮಿತ್ಯ ಅ.3 ರಿಂದ ಸೆ. 11 ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಅ.3 ರಂದು ಬೆಳಗ್ಗೆ 6 ಗಂಟೆಗೆ ಶ್ರೀಚಕ್ರಕ್ಕೆ, ಶ್ರೀದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ ಹಾಗೂ ಸ್ಥಾಪನೆ ನಡೆಯುವುದು. 3.30 ರಿಂದ 4.30ರ ವರೆಗೆ ಚೆನ್ನಬಸಯ್ಯ ಶಾಸ್ತ್ರಿ ಹೇಮಗಿರಿ ಮಠ ಅವರಿಂದ ಶ್ರೀದೇವಿ ಮಂತ್ರದ ಫಲಕ ಅನಾವರಣ ನಡೆಯುವುದು. ಪ್ರತಿನಿತ್ಯ ಸಂಜೆ ಸಿ.ವಿ. ಗಂಗಾವತಿ ಅವರಿಂದ ದೇವಿ ಪುರಾಣ ಪಠಣ ಮತ್ತು ಆದಿಶಕ್ತಿ ಬಳಗದಿಂದ ಸೌಂದರ್ಯ ಲಹರಿ ಸ್ತೋತ್ರ, ಲಲಿತಾ ಸಹಸ್ರನಾಮಾವಳಿ ಸ್ತೋತ್ರ, ಕನಕಧಾರ ಸ್ತುತಿ ಪಾರಾಯಣ ಜರಗುವುದು. ಸಂಜೆ 6 ರಿಂದ 7 ವರೆಗೆ ನೀಲಮ್ಮ ತಾಯಿ ಅವರಿಂದ ಶ್ರೀದೇವಿ ಮಹಾತ್ಮೆಯನ್ನು ಕುರಿತು ಪ್ರವಚನ ನಡೆಯುವುದು. ನಂತರ ಪಲ್ಲಕ್ಕಿ ಉತ್ಸವ ನಡೆಯುವುದು.
ಅ.11 ರಂದು ದುರ್ಗಾಷ್ಟಮಿ ದಿನ ನವರ್ದುಗಿಯರ ರೂಪದಲ್ಲಿ ಬಾಲಕನ್ನಿಕೆಯರ ಪಾದಪೂಜೆ ನಡೆಯುತ್ತದೆ. ಪಿರಸಾಬ್ ಕೌತಾಳ ದಾಸೋಹ ಸೇವೆ ವಹಿಸಿಕೊಂಡಿದ್ದಾರೆ. ಪ್ರತಿನಿತ್ಯ ಶ್ರೀದೇವಿಗೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಂಟಾ, ಕೂಷ್ಮಾಂಡ, ಸ್ಕಂದಮಾತಾ ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ, ಸಿದ್ದಿದಾತ್ರಿ ಎಂಬ ಒಂಬತ್ತು ಅವತಾರಗಳಿಂದ ವಿಶೇಷ ಅಲಂಕಾರ ಅಲಂಕೃತಗೊಂಡು ದೇವಿಗೆ ಪೂಜೆ ಜರಗುತ್ತದೆ.
ಅ.- 12 ರಂದು ಸಂಜೆ 5ಕ್ಕೆ ಗಂಟೆಗೆ ಪಾರಾಯಣ ಪ್ರವಚನ, ಬನ್ನಿ ಮಿಡಿಯುವುದು, ಪಲ್ಲಕ್ಕಿ ಉತ್ಸವ ನಡೆದು ಕಾರ್ಯಕ್ರಮಗಳು ಮಂಗಲಗೊಳ್ಳುತ್ತವೆ ಎಂದು ಆಧ್ಯಾತ್ಮ ವಿದ್ಯಾಶ್ರಮ ಪ್ರಕಟಣೆ ತಿಳಿಸಿದೆ.