ಮಲೇರಿಯಾ ಪೂರ್ಣ ನಿವಾರಣೆಗೆ ಸಾರ್ವಜನಿಕರು ಕೈಜೋಡಿ: ಕಡೇಮನಿ

adavisomapur 29.4.2025
Published on

ಗದಗ : ದೇಶದಲ್ಲಿ `ಮಲೇರಿಯಾ ನಿವಾರಣೆ ಮಾಡುವುಂತಹ ಗುರಿ ಹೊಂದಿದ್ದು ಶೂನ್ಯ ಮಾಡುವ ಕಾರ್ಯಕ್ಕೆ ಸಮುದಾಯ ಪಾತ್ರವು ಮಹತ್ವದಾಗಿದ್ದು ಪ್ರತಿಯೊಬ್ಬರ ಸಹಕಾರವು ದೊರೆತಾಗ ಮಾತ್ರವೇ ಗುರಿ ಸಾಧನೆಯು ಸುಲಭ ಸಾಧ್ಯವಾಗುತ್ತದೆ. ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಾಯ್ ಎನ್ ಕಡೇಮನಿ ಹೇಳಿದರು

ಅವರು ಜಿಲ್ಲಾಡಳಿತ. ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ ಐ.ಇ.ಸಿ ವಿಭಾಗ ಗದಗ ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಮತ್ತು ಅಡವಿಸೋಮಾಪೂರ ಆಯುಷ್ಮಾನ ಆರೋಗ್ಯ ಮಂದಿರದಿAದ ಪಾಪನಾಶಿಯ ತಾಂಡೆಯ ಶ್ರೀದುರ್ಗಾದೇವಿ ದೇವಸ್ಥಾನದಲಿ ಏರ್ಪಡಿಸಲಾಗಿದ್ದ ಎಪ್ರಿಲ್- 25 ವಿಶ್ವ ಮಲೇರಿಯಾ ದಿನಾಚರಣೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ

ತಾಂಡೆಗಳಲ್ಲಿನ ಜನರು ಗೋವಾ ಮತ್ತು ಮಂಗಳೂರಿಗೆ ಹೋಗಿ ಬಂದಾಗ ಕಡ್ಡಾಯವಾಗಿ ರಕ್ತಪರೀಕ್ಷೆ ಮಾಡಿಕೋಳ್ಳಬೇಕು ಮತ್ತು ತಾಂಡೆಯಲ್ಲಿ ಯಾವುದೇ ಕಂಡು ಬರದಹಾಗೆ ಆರೋಗ್ಯ ಇಲಾಖೆಯ ಜೊತೆಗೆ ಕೈಜೊಡಿಸಬೇಕು ಆಶಾ ಕಾರ್ಯಕರ್ತೆಯರುಗಳು ಮಲೇರಿಯಾ ರೋಗ ಲಕ್ಷಣಗಳು ಕಂಡು ಹಿಡಿದು ಮುಂಜಾಗ್ರತ ಕ್ರಮ ಕೈಗೊಳ್ಳದಾಗಿ ತತಿಳಿಸುವಂತಹ ಕಾರ್ಯವನ್ನು ಮಾಡಬೇಕು ತಾಂಡೆಗಳಲ್ಲಿ ಲಾರ್ವಾ ನಾಶಪಡಿಸುವ ಕಾರ್ಯವನ್ನು ಮಡಿ ಸೊಳ್ಳೆಗಳ ನಿಯಂತ್ರಣದಲ್ಲಿ ಪ್ರಮುಖಪಾತ್ರವಹಿಸಬೇಕೆಂದು ಹೇಳಿದರು

ಅಡವಿಸೋಮಾಪೂರ ಆಯುಷ್ಮಾನ ಆರೋಗ್ಯ ಮಂದಿರದಿAದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿದ್ದಪ್ಪ ಎನ್ ಲಿಂಗದಾಳ ಮಾತನಾಡಿ ಮಲೇರಿಯಾ 2027ರ ವೇಳೆಗೆ ಶೂನ್ಯ ಸ್ಥಳೀಯವನ್ನು ಖಚಿತಪಡಿಸಿಕೊಂಡು ಶೂನ್ಯ ಮಲೇರಿಯಾವನ್ನು ಸಾಧಿಸಬೇಕೆಂದು ಸರ್ಕಾರದ ನಿರ್ದೇಶನ ಇರುವುದರಿಂದ `ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಅದಕ್ಕೆ ಪ್ರತಿಯೊಬ್ಬರ ಸಹಾಕಾರ ಬೇಕಾಗಿದೆ ಎಂದರು, ಸೊಳ್ಳೆಗಳ ನಿಯಂತ್ರಣಕ್ಕೆ ಸೊಳ್ಳೆಪರದೆ ಮತ್ತು ಸಾಯಂಕಾಲ ಬೆವಿನಸೋಪ್ಪಿನ ಹೊಗೆ ಹಾಕುವುದು ಬಹು ಮುಖ್ಯವಾಗಿ ಮಾಡಬೇಕು ಜ್ಷರ ಬಂದAತವರು ರಕ್ತಪರಿಕ್ಷೆಯನ್ನು ಮಾಡಿಸಿಕೊಳ್ಳಬೇಕು ನಿಮ್ಮ ಪರಿಸರ ಸುದ್ದವಾಗಿಟ್ಟುಕೊಳ್ಳಿರಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net