

ಗದಗ: ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ 45ನೇ ವರ್ಷದ ದಸರಾ ಮಹೋತ್ಸವ, ಘಟಸ್ಥಾಪನೆ ಮತ್ತು ಶ್ರೀದೇವಿ ಪುರಾಣ ಪ್ರಾರಂಭೋತ್ಸವಕ್ಕೆ ಸೋಮವಾರ ಧರ್ಮಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಶ್ರೀಮಠದಲ್ಲಿ ಶ್ರೀಅನ್ನಪೂಣೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಧರ್ಮ ಧ್ವಜಾರೋಹಣವನ್ನು ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸದಾಶಿವಯ್ಯ ಮದರಿಮಠ ಅವರು, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಮಹೇಶ್ವರÀ ಸ್ವಾಮೀಜಿ ಸಮ್ಮುಖದಲ್ಲಿ ನೆರವೇರಿಸಿದರು.
ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಸ್.ಪಿ. ಸಂಶಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಎಸ್. ಗುಡಿಮನಿ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಮದರಿಮಠ, ಪೂಜಾ ಸಮಿತಿ ಅಧ್ಯಕ್ಷರಾದ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ಡಾ.ರಾಜೇಂದ್ರ ಗಡಾದ, ಬಿ.ಬಿ. ಪಾಟೀಲ, ಹಿರಿಯ ಲೆಕ್ಕಪರಿಶೋಧಕರಾದ ವೀರೇಶ ಕೂಗು, ಕಿರಣ ಹಾವನೂರ, ರತನಲಾಲಸಾ ಭಾಂಡಗೆ, ಸಿದ್ದಣ್ಣ ಜವಳಿ, ಶಾರದಾ ಬೊಮ್ಮಸಾಗರ, ಉದ್ದಿಮೆದಾರರಾದ ಉಮೇಶ ಹುಬ್ಬಳ್ಳಿ, ಗದಗ ಅಕ್ಕನಬಳಗದ ಅಧ್ಯಕ್ಷರಾದ ಜಯಶ್ರೀ ಹುಬ್ಬಳ್ಳಿ, ಉದ್ದಿಮೆದಾರರಾದ ಸಿದ್ಧಲಿಂಗೇಶ ಉಮಚಗಿ, ಅಕ್ಷತಾ ಉಮಚಗಿ, ಸಿದ್ದಣ್ಣ ಜವಳಿ, ವ.ಎಂ. ಕುಮದ್ರಾಳ ಹಿರೇಮಠ, ಯು.ಆರ್. ಭೂಸನೂರಮಠ, ಕೆ.ಎಚ್. ಬೇಲೂರ, ಜಾತ್ರಾ ಮಹೋತ್ಸವ ಸಮಿತಿಯ ಸಹಕಾರ್ಯದರ್ಶಿ ಗುರುಬಸವಲಿಂಗ ದಾನಪ್ಪ ತಡಸದ, ಕೋಶಾಧ್ಯಕ್ಷರಾದ ವಿರುಪಣ್ಣ ಬಳ್ಳೊಳ್ಳಿ, ಮಹಿಳಾ ಸಮಿತಿಯ ಕಾರ್ಯದರ್ಶಿ ಗೀತಾ ವಿ. ಹೂಗಾರ, ಸಹಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ ಮತ್ತಿತರರು ಉಪಸ್ಥಿತರಿದ್ದರು.