

ಗದಗ: ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ 45ನೇ ವರ್ಷದ ದಸರಾ ಮಹೋತ್ಸವ ಹಾಗೂ ಘಟಸ್ಥಾಪನೆ ಮತ್ತು ಶ್ರೀದೇವಿ ಪುರಾಣ ಪ್ರಾರಂಭೋತ್ಸವ ಮತ್ತು ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಕಾರ್ಯಕ್ರಮಗಳು ಸೆ.22 ರಿಂದ ಅಕ್ಟೋಬರ್ 3 ರವರೆಗೆ ಜರುಗಲಿವೆ ಎಂದು ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸದಾಶಿವಯ್ಯ ಎಸ್. ಮದರಿಮಠ ಹೇಳಿದರು.
ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು.
ಸೆ.22 ರಂದು ಮುದೇನೂರ ಶಶಿಧರ ಮಹಾಸ್ವಾಮಿಗಳವ ಕೃಪಾಶೀರ್ವಾದಿಂದ ಶಮಿ, ಆರಿ, ಬಿಲ್ವ ವೃಕ್ಷಗಳ ಸಂಗಮದ ಪವಿತ್ರ ಸ್ಥಳದಲ್ಲ ಸ್ಥಾಪಿಸಲ್ಪಟ್ಟ ಶ್ರೀಅನ್ನಪೂಣೇಶ್ವರಿಯ ಸನ್ನಿಧಿಯಲ್ಲಿ 45ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಪ್ರಾರಂಭೊತ್ಸವ ಜರುಗಲಿದೆ. ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಪುರಾಣ ಪ್ರವಚನ ಮಾಡುವರು, ಚನ್ನಬಸಯ್ಯ ಶಾಸ್ತಿçಗಳು ಹೇಮಗಿರಿಮಠ ಪುರಾಣ ಪಠಣ ಮಾಡುವರು ಎಂದರು.
ಸೆ.22 ರಂದು ಸೋಮವಾರ ಮುಂಜಾನೆ 9 ಗಂಟೆಗೆ ಧರ್ಮ ಧ್ವಜಾರೋಹಣವನ್ನು ಶ್ರೀಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮಿಗಳವರ ಸಮ್ಮುಖದಲ್ಲಿ ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸುವರು. ಸಂಜೆ 6.30ಕ್ಕೆ ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವವನ್ನು ಶ್ರೀಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ಶುಭ್ ಜುವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಪೂಜಾ ಕಿರಣ ಭೂಮಾ ಹಾಗೂ ದತ್ತಾ ಪ್ರಾಪರ್ಟಿಸ್ ವ್ಯವಸ್ಥಾಪಕರಾದ ಕಿರಣ ಪ್ರಕಾಶ ಭೂಮಾ ಉದ್ಘಾಟಿಸುವರು ಎಂದು ಅವರು ಹೇಳಿದರು.
ಸೆ.23 ಸಂಜೆ 6.30ಕ್ಕೆ ಶ್ರೀದೇವಿಗೆ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು, ಸೆ.24 ಹಾಗೂ ಸೆ.25 ರಂದು ಸಂಜೆ 6.30 ಗಂಟೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.26 ರಂದು ಸಂಜೆ 6.30 ಗಂಟೆಗೆ ಶ್ರೀದೇವಿಗೆ ಹಾಗೂ ಮುತೈದೆಯರಿಗೆ ಅರಿಷಿಣ, ಕುಂಕುಮ, ಬಳೆ ಸೇವೆ ಜರುಗಲಿದೆ. ಸೆ.27 ರಂದು ಸಂಜೆ 6.30 ಗಂಟೆಗೆ ಧಾರ್ಮಿಕ ಕಾರ್ಯಕ್ರಮ, ಸೆ.28 ರಂದು ಮುಂಜಾನೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಡಾ. ವೀರೇಶ ದ್ಯಾವಣ್ಣರ ಹಾಗೂ ಅಭಿಷೇಕ ಹೊಸಳ್ಳಿಮಠ ಅವರ ತಂಡದಿAದ ಜರುಗಲಿದೆ. ಸೆ.28 ರಿಂದ 30ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಧಾರ್ಮಿಕ ಕರ್ಯಕ್ರಮಗಳು ಜರುಗಲಿದೆ ಎಂದರು.
ಅಕ್ಟೋಬರ್ 1 ರಂದು ಸಂಜೆ 6.30ಕ್ಕೆ ಆಯುಧಪೂಜೆ, ಕುಮಾರಿ ಪೂಜೆ ಹಾಗೂ ಶ್ರೀದೇವಿ ಪುರಾಣ ಮಂಗಲೋತ್ಸವ ಜರುಗಲಿದೆ. ಅ.2 ರಂದು ಮುಂಜಾನೆ 9ಕ್ಕೆ ಗದಗ ಶ್ರೀರೇಣುಕಾಚಾರ್ಯ ಮಂದಿರದಿAದ ಭವ್ಯ ಮೆರವಣಿಗೆ ಮೂಲಕ ತೇರಿನ ಕಳಸ ಆಗಮನ, ಮುಂಜಾನೆ 10ಕ್ಕೆ ಕಳಸಾರೋಹಣ ಪೂಜ್ಯಶ್ರೀಗಳವರಿಂದ ಜರುಗುವುದು. ಮುಂಜಾನೆ 11ಕ್ಕೆ ವಿಜಯದಶಮಿ ಬನ್ನಿಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದರು.
ಅ.3 ರಂದು ಮುಂಜಾನೆ 7.15ಕ್ಕೆ ಗದಗ ಒಕ್ಕಲಗೇರಿ ಶ್ರಿರಾಯಚೋಟಿ ವಿರಭದ್ರೇಶ್ವರ ದೇವಸ್ಥಾನದಿಂದ ಕುಂಭೋತ್ಸವ ಹೊರಡುವುದು. ಮುಂಜಾನೆ 9.30ಕ್ಕೆ ಶ್ರೀ ಅನ್ನಪೂಣೇಶ್ವರಿದೇವಿಗೆ ಹಾಗೂ ಕರ್ತೃ ಗದ್ದುಗೆಗೆ ಕುಂಬಾಭಿಷೇಕ, ಮಧ್ಯಾಹ್ನ 12ಕ್ಕೆ ಪುಣ್ಯಸ್ವರಣೋತ್ಸವ, ಮಹಾ ಪ್ರಸಾದ ಜರುಗಲಿದೆ. ಮಧ್ಯಾಹ್ನ3.30ಕ್ಕೆ ತೇರಿನಹಗ್ಗ ಮುಳಗುಂದ ರಸ್ತೆಯ ಜಗದಂಭಾ ದೇವಸ್ಥಾನದಿಂದ ಶ್ರೀಮಠಕ್ಕೆ ಆಗಮಿಸುವುದು. ಸಂಜೆ 5ಕ್ಕೆ ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಕನಕಗಿರಿಯ ಸುವರ್ಣಗಿರಿ ಸಂಸ್ಥಾನಮಠದ ಶ್ರೀನಿರಂಜನಪ್ರಭು ಚನ್ನಮಲ್ಲ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಕಲ ಸದ್ಭಕ್ತ ಮಹಿಳೆಯರಿಂದ ಜರುಗುವುದು. ಸಂಜೆ 7ಕ್ಕೆ ಜಾನಪದ ವಿದ್ವಾಂಸರಾದ ಡಾ.ಶಂಭು ಬಳಿಗಾರ ಅವರಿಂದ ಜಾನಪದ ಜೀವನ ದರ್ಶನ ಕಾರ್ಯಕ್ರಮ ಜರುಗಲಿದೆ. ಅ.4 ರಂದು ಸಂಜೆ 6.30ಕ್ಕೆ ಕಡುಬಿನ ಕಾಳಗ ಪುರವಂತರ ಸಮ್ಮುಖದಲಲಿ ವಾಧ್ಯ ವೈಭವದೊಂದಿಗೆ ಜರುಗುವುದು ಎಂದು ಅವರು ಹೇಳಿದರು.
ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಸ್.ಪಿ. ಸಂಶಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಎಸ್. ಗುಡಿಮನಿ, ಸಹಕಾರ್ಯದರ್ಶಿ ಗುರುಬಸವಲಿಂಗ ದಾನಪ್ಪ ತಡಸದ, ಕೋಶಾಧ್ಯಕ್ಷರಾದ ವಿರುಪಣ್ಣ ಬಳ್ಳೊಳ್ಳಿ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಎಸ್. ಮದರಿಮಠ, ಕಾರ್ಯದರ್ಶಿ ಗೀತಾ ವಿ. ಹೂಗಾರ, ಸಹಕಾರ್ಯದರ್ಶಿ ಸುಷ್ಮಾ ಎಸ್. ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ಎಸ್. ನೀಲಗುಂದ, ವೀರೇಶ ಕೂಗು, ಕಸ್ತೂರಿಬಾಯಿ ಭಾಂಡಗೆ, ವಿನೋದ ಭಾಂಡಗೆ, ರಾಜು ಕುರಡಗಿ, ವಿ.ಎಚ್. ದೇಸಾಯಿಗೌಡ್ರ ಪತ್ರಿಕಾಗೋಷ್ಠಿಯಲ್ಲಿದ್ದರು.